ಯಾವುದೇ ದೇಶವು ಈ ಭೂ ಪ್ರದೇಶದ ಮೇಲೆ ಹಕ್ಕು ಸ್ಥಾಪನೆಗೆ ಮುಂದಾಗಿಲ್ಲ: ಇಲ್ಲಿ ಕಾಲಿಡಲು ಹೆದರುತ್ತವೆ ದೊಡ್ಡ ದೊಡ್ಡ ದೇಶಗಳು!

ಒಂದು ಸಣ್ಣ ತುಂಡು ಭೂಮಿಗಾಗಿ ದೇಶ ದೇಶಗಳ ನಡುವೆ ಭೀಕರ ಹೋರಾಟಗಳೇ ನಡೆದಿರುವ ಇತಿಹಾಸವನ್ನು ನಾವು ಗಮನಿಸಿದ್ದೇವೆ, ಭೂಮಿಗಾಗಿ ರ ಕ್ತ ಪಾ ತ ಸಂಭವಿಸಿ, ಅನೇಕ ಜನರು ಪ್ರಾಣತ್ಯಾಗ ಮಾಡಿರುವ ಉದಾಹರಣೆಗಳನ್ನು ತಿಳಿದುಕೊಂಡಿದ್ದೇವೆ. ಇಂತಹ ಸನ್ನಿವೇಶಗಳ ನಡುವೆಯೇ ಒಂದು ಭೂಪ್ರದೇಶದ ಮೇಲೆ ವಿಶ್ವದ ಯಾವುದೇ ರಾಷ್ಟ್ರವೂ ಸಹ ತನ್ನ ಅಧಿಕಾರವನ್ನು ಸ್ಥಾಪನೆ ಮಾಡಿಲ್ಲ ಎನ್ನುವ ವಿಚಾರ ನಿಮಗೆ ತಿಳಿದಿದೆಯೇ?? ಅಂತಹುದೊಂದು ಭೂಮಿ ಇದೆ ಎನ್ನುವ ಕಲ್ಪನೆಯಾದರೂ ನಿಮಗೆ ಇದೆಯೇ?? ಇಲ್ಲ ಎನ್ನುವುದಾದರೆ, ನಿಜಕ್ಕೂ ಅಂತಹ ಭೂಪ್ರದೇಶವೊಂದು ನಮ್ಮ ಭೂಮಿಯ ಮೇಲೆ ಇದ್ದು, ಈ ಪ್ರದೇಶವನ್ನು ತಮ್ಮದು ಎಂದು ಹೇಳಿಕೊಳ್ಳಲು ದೊಡ್ಡ ದೊಡ್ಡ ದೇಶಗಳು ಕೂಡಾ ಹೆದರುತ್ತವೆ ಎನ್ನಲಾಗಿದೆ.

ಈಜಿಪ್ಟ್ ಮತ್ತು ಸುಡಾನ್ ದೇಶಗಳ ಗಡಿ ಪ್ರದೇಶದಲ್ಲಿ 2060 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿರುವ ಭೂಪ್ರದೇಶವೊಂದು ಇದ್ದು, ಇದನ್ನು ಬೀರ್ ತವಿಲ್ ಎನ್ನುವ ಹೆಸರಿನಿಂದ ಗುರುತಿಸಲಾಗಿದೆ. ಅನಾಥವಾಗಿ ಬಿದ್ದಿರುವ ಈ ಪ್ರದೇಶದ ಮೇಲೆ ಯಾವುದೇ ದೇಶವೂ ತನ್ನ ಹಕ್ಕನ್ನು ಸ್ಥಾಪನೆ ಮಾಡಿಲ್ಲ. 1899 ರಲ್ಲಿ ಯುನೈಟೆಡ್ ಕಿಂಗ್‌ಡಮ್ ಈಜಿಪ್ಟ್ ಮತ್ತು ಸುಡಾನ್ ದೇಶಗಳ ನಡುವಿನ ಗಡಿಯನ್ನು ನಿರ್ಧಾರ ಮಾಡಿತು. ಈ ಸಂದರ್ಭದಲ್ಲಿ ಈಜಿಪ್ಟ್ ಆಗಲೀ, ಸುಡಾನ್ ಆಗಲೀ ತಮ್ಮ ಹಕ್ಕನ್ನು ಈ ಪ್ರದೇಶದ ಮೇಲೆ ಸ್ಥಾಪಿಸಲು ಬಯಸಲಿಲ್ಲ. ಆದ್ದರಿಂದ ಈ ಭೂ ಪ್ರದೇಶವು ಎರಡು ದೇಶಗಳಿಗೆ ಸೇರದೆ ಹಾಗೆಯೇ ಉಳಿದಿದೆ.

ಈ ಎರಡು ದೇಶಗಳು ಸಹ ಈ ಪ್ರದೇಶದ ಮೇಲೆ ಏಕೆ ಹಕ್ಕನ್ನು ಸ್ಥಾಪಿಸಲಿಲ್ಲ ಎಂದರೆ, ಅದರ ಹಿಂದೆ ಇರುವ ಪ್ರಮುಖ ಕಾರಣ, ಈ ಸ್ಥಳದಲ್ಲಿರುವ ಪರಿಸ್ಥಿತಿ. ಇದು ಕೆಂಪು ಸಮುದ್ರಕ್ಕೆ ಹತ್ತಿರವಾಗಿರುವ ಮರುಭೂಮಿ ಪ್ರದೇಶವಾಗಿದೆ. ತೀವ್ರವಾದ ಶುಷ್ಕ ವಾತಾವರಣವನ್ನು ಹೊಂದಿರುವ ಈ ಪ್ರದೇಶದಲ್ಲಿ ಬಿಸಿಗಾಳಿಯೂ ಬೀಸುತ್ತದೆ. ದೂರ ದೂರದವರೆಗೆ ನೀರಾಗಲಿ ಅಥವಾ ಯಾವುದೇ ಸಸ್ಯಗಳ ಆಗಲೀ ಕಂಡುಬರುವುದಿಲ್ಲ. ಆದ್ದರಿಂದಲೇ ಇಲ್ಲಿ ಬದುಕುವುದು ಒಂದು ಸವಾಲಿಗಿಂತ ಕಡಿಮೆಯೇನಿಲ್ಲ. ಈ ಮರುಭೂಮಿಯಲ್ಲಿ ತೈಲ ಹಾಗೂ ಚಿನ್ನದ ನಿಕ್ಷೇಪಗಳು ಇವೆ ಎಂದು ಕೆಲವರು ಹೇಳುತ್ತಾರೆ. ಇದರ ಹೊರತಾಗಿಯೂ ಕೂಡಾ ಯಾರು ಇಲ್ಲಿಗೆ ಬರಲು ಬಯಸುವುದಿಲ್ಲ ಎನ್ನಲಾಗಿದೆ.

2017ರಲ್ಲಿ ಭಾರತದ ಇಂಧೋರ್ ನ ನಿವಾಸಿ ತನ್ನನ್ನು ತಾನು ಈ ಪ್ರದೇಶದ ಹಕ್ಕುದಾರ ಎಂದು ಘೋಷಣೆ ಮಾಡಿಕೊಂಡಿದ್ದರು. ಸುಯೇಶ್ ದೀಕ್ಷಿತ್ ಹೆಸರಿನ ಈ ವ್ಯಕ್ತಿ ಯು, ಈ ಪ್ರದೇಶಕ್ಕೆ ಕಿಂಗ್ಡಮ್ ಆಫ್ ದೀಕ್ಷಿತ್ ಎನ್ನುವ ಹೆಸರನ್ನು ಸಹಾ ನೀಡಿದರು. ಅಲ್ಲದೇ ತನ್ನ ರಾಷ್ಟ್ರದ ಧ್ವಜವನ್ನು ಕೂಡ ಪರಿಚಯಿಸಿದ್ದರು. ಇದು ಸೋಶಿಯಲ್ ಮೀಡಿಯಾ ಗಳಲ್ಲಿ ಜನರ ಗಮನ ಸೆಳೆದಿತ್ತು. ಅಷ್ಟೇ ಅಲ್ಲದೆ ಅವರು ಒಂದು ವೆಬ್ಸೈಟ್ ಕ್ರಿಯೇಟ್ ಮಾಡಿ, ಈ ದೇಶದ ಪೌರತ್ವ ಪಡೆಯುವಂತೆ ಹಾಗೂ ಇಲ್ಲಿ ಬಂಡವಾಳ ಹೂಡುವಂತೆ ಜನರಲ್ಲಿ ಹೇಳಿದರು. ಆದರೆ ಸ್ವತಃ ಸುಯೇಶ್ ಅವರೇ ಅಲ್ಲಿ ಬಹಳ ಕಾಲ ನಿಲ್ಲದೆ ಮತ್ತೆ ಭಾರತಕ್ಕೆ ವಾಪಸ್ ಬಂದರು, ಮತ್ತೆ ಅತ್ತ ತಿರುಗಿ ನೋಡಿಲ್ಲ.‌

ಇವರಿಗಿಂತ ಮೊದಲು ಒಬ್ಬ ಅಮೆರಿಕ ನಾಗರಿಕ ಮತ್ತು ರಷ್ಯಾದ ನಾಗರಿಕ ಕೂಡಾ ಈ ಪ್ರದೇಶದ ಮೇಲೆ ತಮ್ಮ ಹಕ್ಕನ್ನು ಜಮಾಯಿಸಿದ್ದರು. ಆದರೆ ಯಾರೂ ಅಲ್ಲೇ ಬಹಳ ದಿನಗಳು ಉಳಿಯದೇ ತಮ್ಮ ತಮ್ಮ ದೇಶಕ್ಕೆ ವಾಪಸಾದರು. ಮತ್ತೆ ಈ ಪ್ರದೇಶದ ಕಡೆಗೆ ತಲೆ ಹಾಕಿಲ್ಲ. ಬೀರ್ ತವಿಲ್ ನ ಭೂಮಿ ಈಗಲೂ ಸಹ ಯಾವ ವಾರಸುದಾರರು ಇಲ್ಲದೆ ಹಾಗೆಯೇ ಉಳಿದುಕೊಂಡಿದೆ. ಯಾರು ತಮ್ಮ ಹಕ್ಕನ್ನು ಸ್ಥಾಪಿಸಲು ಮುಂದಾಗುತ್ತಿಲ್ಲ. ಒಂದು ವೇಳೆ ನಿಮಗೆ ರಾಜನಾಗುವ ಹಾಸ್ಯ ಇತರೆ ಈ ಪ್ರದೇಶಕ್ಕೆ ತೆರಳಿ ಒಂದು ಪ್ರಯತ್ನವನ್ನು ಖಂಡಿತ ಮಾಡಬಹುದಾಗಿದೆ.