ಯಾವುದೇ ವಿವಾದ ಇಲ್ಲ, ಅಫೇಯರ್ ಚರ್ಚೆಯೂ ಇಲ್ಲ ಆದರೂ ಸನಿ ಮತ್ತು ಮಾಧುರಿ ಮತ್ತೊಮ್ಮೆ ಒಟ್ಟಿಗೆ ಕಾಣಲೇ ಇಲ್ಲ! ಇದರ ಹಿಂದೆ ಇತ್ತು ‘ಈ’ ವ್ಯಕ್ತಿಗಳ ಕೈವಾಡ!
ಪರದೆಯ ಮೇಲೆ ಅನೇಕ ಜೋಡಿಗಳು ರಸಿಕರಿಗೆ ತುಂಬಾ ಇಷ್ಟವಾಗುತ್ತವೆ. ಹೀಗಾಗಿ ಮತ್ತೆ ಮತ್ತೆ ಅವರ ಚಿತ್ರಗಳನ್ನೇ ನೋಡುವ ಆಸೆ ಹುಟ್ಟುತ್ತದೆ. ಅಥವಾ ತಮಗೆ ಇಷ್ಟವಾದ ಜೋಡಿಯ ಚಿತ್ರ ಯಾವಾಗ ಬರುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತು ಕೊಳ್ಳುತ್ತಾರೆ.
ಆದರೆ ಬಾಲಿವುಡ್ ನಲ್ಲಿ ಸನ್ನಿ ಮತ್ತು ಮಾಧುರಿಯವರು ಒಂದೇ ಚಿತ್ರದಲ್ಲಿ ಕಾಣಿಸಿದರು. ಅದರ ನಂತರ ಇಬ್ಬರೂ ಕೂಡಿ ಯಾವುದೇ ಚಿತ್ರದಲ್ಲಿ ಕಾಣಲೇ ಇಲ್ಲ. ವಿಶೇಷವೆಂದರೆ ಇವರಿಬ್ಬರ ಜೋಡಿ ಚಿತ್ರ ರಸಿಕರಿಗೆ ತುಂಬಾ ಹಿಡಿಸಿತ್ತು. ಇವರಿಬ್ಬರೂ ಮತ್ತೊಮ್ಮೆ ಕೂಡಿ ಚಿತ್ರ ಮಾಡದಿರಲು ಒಂದು ಕಾರಣವಿದೆ. ಅದನ್ನೇ ನಾವು ಇಲ್ಲಿ ಹೇಳುವವರಿದ್ದೇವೆ.
ಈ ಜೋಡಿಯನ್ನು ಬೇರ್ಪಡಿಸುವ ಹಿಂದಿನ ಮುಖ್ಯ ಕಾರಣ ಅನಿಲ್ ಕಪೂರ್ ಎಂದು ಫಿಲ್ಮ್ ಇಂಡಸ್ಟ್ರಿಯಲ್ಲಿ ಹೇಳಲಾಗುತ್ತದೆ.
ಸನ್ನಿ ಮತ್ತು ಮಾಧುರಿ ದೀಕ್ಷಿತ್ ಇಬ್ಬರೂ ಕೂಡಿ ನಟಿಸಿದ ಚಿತ್ರ ತ್ರಿದೇವ್ ಆಗಿತ್ತು. ಇದು ಬಾಕ್ಸ್ ಆಫೀಸಿನಲ್ಲಿ ತುಂಬಾ ಹಣ ಗಳಿಸಿತ್ತು. ಇದರಲ್ಲಿದ್ದ ಒಂದು ರೊಮ್ಯಾಂಟಿಕ್ ಹಾಡು ( ಹಮ್ ತೇರೆ ಮೊಹಬ್ಬತ್ ಮೇ ಪಾಗಲ್ ಹೋ ಜಾಯೆ ) ರಸಿಕರಿಗೆ ತುಂಬಾ ಇಷ್ಟವಾಗಿತ್ತು. ವಿಶೇಷವೆಂದರೆ ಈ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಸುಂದರವಾಗಿತ್ತು.
ಆದರೆ ಅನಿಲ್ ಕಪೂರ್ ಅವರ ಕಾರಣದಿಂದ ಈ ಜೋಡಿಯು ಮತ್ತೆ ಯಾವತ್ತೂ ಪರದೆಯ ಮೇಲೆ ಕಾಣಲಿಲ್ಲ. ಇವರಿಬ್ಬರ ಮಧ್ಯೆ ಯಾವುದೇ ಮನಸ್ತಾಪ ಹಾಗೂ ಜಗಳ ತಂಟೆ ಇರಲಿಲ್ಲ. ಈಗಲೂ ಇವರಿಬ್ಬರ ಸಂಬಂಧ ಮಾತ್ರ ಒಳ್ಳೆಯ ಮಿತ್ರತ್ವದ ಸಂಬಂಧವಿದೆ.
ಆ ಸಮಯದಲ್ಲಿ ಮಾಧುರಿ ಮತ್ತು ಅನಿಲ್ ಕಪೂರ್ ಅವರ ಚಿತ್ರಗಳು ಬಾಕ್ಸ್ ಆಫಿಸ್ ನಲ್ಲಿ ಯಶಸ್ಸನ್ನು ಕಾಣುತ್ತಿದ್ದ ಸಮಯವಿತ್ತು. ಹೀಗಾಗಿ ಈ ಜೋಡಿಯು ರಸಿಕರ ಮನಸ್ಸಿಗೆ ತುಂಬಾ ಹಿಡಿಸಿತ್ತು. ಅನಿಲ್ ಕಪೂರ್ ಅವರ ಸೋದರ ಬೋನಿ ಕಪೂರ್ ಅವರು ಪ್ರಸಿದ್ಧ ನಿರ್ಮಾಪಕರಾಗಿದ್ದರು.
ಇತ್ತ ಸನ್ನಿ ಡಿಯೋಲ್ ಅವರ ಚಿತ್ರಗಳು ಒಂದರ ನಂತರ ಒಂದು ಹಿಟ್ ಆಗುತ್ತಿದ್ದವು. ಹೀಗಾಗಿ ಇಬ್ಬರಲ್ಲಿ ಸ್ಪರ್ಧೆ ಜೋರಾಗಿತ್ತು.
ಮಾಧುರಿ ಜೊತೆಗೆ ಸನ್ನಿ ಡಿಯೋಲ್ ಅವರ ಚಿತ್ರಗಳು ಹಿಟ್ ಆಗಲು ಪ್ರಾರಂಭಿಸಿದರೆ ತಮ್ಮ ಬ್ಯಾನರ್ ನಲ್ಲಿ ತಯಾರಾಗುವ ಚಿತ್ರಗಳು ನೆಲಕಚ್ಚಿವ ಭೀತಿಯಿಂದ ಅನಿಲ್ ಮತ್ತು ಬೋನಿ ಕಪೂರ್ ಸೋದರರು ಪ್ಲಾನ್ ಮಾಡಿ ಮಾಧುರಿ ದೀಕ್ಷಿತ್ ಅವರಿಗೆ ಸನ್ನಿಯಿಂದ ದೂರ ಮಾಡುವದರಲ್ಲಿ ಸಫಲವಾದರು.