ಯಾವುದೇ ಸರಕಾರ ಮಾಡದ ಕೆಲಸ ಲಾಕ್ ಡಾವುನ್ ಮಾಡಿತು!!ಗಂಗೆಯಾದಳು ಪರಿಶುದ್ಧ!
ಯಾವ ಕೆಲಸ ಮಾಡಲು ಇಲ್ಲಿಯವರೆಗೆ ಯಾವುದೇ ಸರಕಾರಕ್ಕೆ ಸಾಧ್ಯವಾಗಲಿಲ್ಲ,ಆ ಕೆಲಸ ಸದ್ಯಕ್ಕೆ ಕೊರೊನಾ ಕಾರಣದಿಂದಾಗಿ ದೇಶದಲ್ಲಿ ವಿಧಿಸಿದ ಲಾಕ್ ಡಾವುನ್ ಮಾಡಿತು.
ಭಾರತೀಯರ ಪವಿತ್ರ ನದಿಯಾದ ಗಂಗಾನದಿ ಇಂದು ಪರಿಶುದ್ಧಳಾಗಿದ್ದಾಳೆ.ಲಾಕ್ ಡಾವುನ್ ದ ಒಳ್ಳೆಯ ಪರಿಣಾಮ ರಾಷ್ಟ್ರೀಯ ನದಿಯಾದ ಗಂಗೆಯ ಮೇಲೆ ಸಕಾರಾತ್ಮಕವಾಗಿ ಗೋಚರಿಸುತ್ತಿದೆ. ಲಾಕ್ ಡಾವುನ್ ಈ ನೀರಿನಲ್ಲಿ 40 ರಿಂದ 50 ಪ್ರತಿಶತ ಶುದ್ಧತೆಯ ಪ್ರಭಾವ ಬೀರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಮಹಾಮಾರಿಯಿಂದ ಬಚಾವಾಗಲು ಸರಕಾರ ತೆಗೆದುಕೊಂಡ ಲಾಕ್ ಡಾವುನ್ ಪರಿಣಾಮದಿಂದ ದೇಶದ ಎಲ್ಲ ಕಾರಖಾನೆಗಳು ಮುಚ್ಚಲ್ಪಟ್ಟಿವೆ.ಗಂಗೆಯ ಸುತ್ತಮುತ್ತಲಿನ ಕಾರಖಾನೆಗಳಿಂದ ಹೊರಬರುವ ದೂಷಿತ ಮತ್ತು ಕೆಮಿಕಲ್ ಮಿಶ್ರಿತ ಕೊಳೆ ನದಿಗೆ ಬಂದು ಕೂಡುವದು ಸಂಪೂರ್ಣ ನಿಂತು ಹೋಗಿದೆ.ಈ ಕಾರಣದಿಂದಲೇ ಗಂಗೆ ಈಗ ಪರಿಶುದ್ಧವಾಗುತ್ತಿದ್ದಾಳೆ ಎನ್ನುವ ಮಾತು IIT ಯ BHU ದ ಪ್ರೊಫೆಸರ್ ಡಾ.P. K. ಮಿಶ್ರಾ ಹೇಳಿದ್ದಾರೆ.