ಯಾವ ಫ್ಲೈಟ್ ನಲ್ಲಿ ತಂದೆ ತಾಯಿ ಪ್ರವಾಸ ಮಾಡುತ್ತಿದ್ದರು, ಅದೇ ಫ್ಲೈಟ್ ಹಾರಿಸುತ್ತಿದ್ದನು ಮಗ! ಆಕಸ್ಮಿಕವಾಗಿ ಭೇಟಿಯಾದ ಆ ಕ್ಷಣಗಳು.
ಪ್ರತಿಯೊಬ್ಬ ಮಗ ತನ್ನ ತಂದೆ ತಾಯಿಗೆ ಜಗತ್ತಿನ ಅತ್ಯುನ್ನತ ಖುಷಿಯನ್ನು ನೀಡಲು ಬಯಸುತ್ತಾನೆ. ಜೊತೆಗೆ ತಾನೀಗ ಜವಾಬ್ದಾರಿಯುತ ವ್ಯಕ್ತಿಯಾಗಿ ನಿಮ್ಮನ್ನು ನೋಡಬಲ್ಲೆ ಹಾಗೂ ನಿಮಗೆ ಸಂತೋಷವಾಗಿ ಇಡಬಲ್ಲೆ ಎಂಬ ವಿಚಾರ ಅವರಿಗೆ ಹೇಳಲು ಹಾಗೂ ವ್ಯಕ್ತ ಮಾಡಲು ಬಯಸುತ್ತಾನೆ. ತಾನು ಕೆಲಸ ಮಾಡುವ ಕ್ಷೇತ್ರದಲ್ಲಿ ತನ್ನ ತಂದೆ ತಾಯಿಗಳು ಬಂದು ನೋಡಬೇಕು ಹಾಗೂ ಅವರಿಗೆ ಯೋಗ್ಯವಾದ ಗೌರವ ನೀಡಬೇಕು ಎಂಬ ಆಸೆಯನ್ನು ಸಹ ಹೊಂದಿರುತ್ತಾನೆ. ಇದೇ ರೀತಿಯ ಒಂದು ಘಟನೆ ಏರ್ ಅರೇಬಿಯಾ ಫ್ಲೈಟ್ ನಲ್ಲಿ ನಡೆದಿದೆ. ಏರ್ ಅರೇಬಿಯಾ ಫ್ಲೈಟ್ ನಲ್ಲಿ ಕೆಲಸ ಮಾಡುವ ಪೈಲೆಟ್ ತನ್ನ ತಂದೆ ತಾಯಿಯ ಮುಖದ ಮೇಲೆ ದೊಡ್ಡದಾದ ಹಾಸ್ಯವನ್ನು ತಂದಿದ್ದಾನೆ. ನಂತರ ಪೈಲೆಟ್ಸ್ ತನ್ನ ತಂದೆ ತಾಯಿಗೆ ಜೈಪುರ್ ನಲ್ಲಿಯ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ತಂದೆ ಮತ್ತು ತಾಯಿ ಇಬ್ಬರು ಪ್ರವಾಸಕ್ಕಾಗಿ ಫ್ಲೈಟ್ ಏರಿದಾಗ ತಮ್ಮ ಮಗನೇ ಈ ಏರೋಪ್ಲೇನ್ ನ್ನು ಉಡಾಯಿಸುತ್ತಿದ್ದಾನೆ ಎಂಬುದರ ಬಗ್ಗೆ ಅವರಿಗೆ ಕಿಂಚಿತ್ತು ಗೊತ್ತಿರಲಿಲ್ಲ.
ಪೈಲಟ್ ಕಮಲ್ ಕುಮಾರ್ ಹೆಸರಿನ ವ್ಯಕ್ತಿಯು ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅಕೌಂಟಿನಿಂದ ಶೇರ್ ಮಾಡಿದ್ದಾನೆ. ವಿಡಿಯೋದ ಪ್ರಾರಂಭದಲ್ಲಿ ತಾಯಿಯು ಫ್ಲೈಟ್ ನಲ್ಲಿ ಪ್ರವೇಶ ಮಾಡುವ ಮತ್ತು ತನ್ನ ಮಗನ ಕಡೆಗೆ ಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ. ಮಗನನ್ನು ನೋಡಿದ ತಕ್ಷಣ ತಾಯಿಯು ಸ್ವಲ್ಪ ಹೊತ್ತು ನಿಲ್ಲುತ್ತಾಳೆ ತದನಂತರ ಆತನ ಕಡೆಗೆ ಹೋಗಿ ಕೈ ಕುಲುಕಿಸುತ್ತಾಳೆ. ವಿಡಿಯೋದಲ್ಲಿ ಪೈಲೆಟ್ ತನ್ನ ತಂದೆ ತಾಯಿಯ ಜೊತೆಗೆ ಕಾಕ್ ಪಿಟ್ ನಲ್ಲಿ ಕುಳಿತು ತೆಗೆಸಿಕೊಂಡ ಫೋಟೋಗಳು ಕಾಣಿಸುತ್ತಿವೆ. ಇದಕ್ಕೆ ‘ಫ್ಲೈಟ್ ನಲ್ಲಿ ಆಶ್ಚರ್ಯಭರಿತವಾದ ಕುಟುಂಬ ಮತ್ತು ಅವರಿಗೆ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ’ ಎಂದು ಕ್ಯಾಪ್ಷನ್ ನೀಡಲಾಗಿದೆ. ಜೊತೆಗೆ “ನಾನು ಪೈಲೆಟ್ ಆದಾಗಿನಿಂದ ಈ ಕ್ಷಣಕ್ಕಾಗಿ ಕಾಯ್ದು ಕುಳಿತಿದ್ದೆ. ಕೊನೆಗೂ ಇಂಥದ್ದೊಂದು ಸುವರ್ಣ ಅವಕಾಶ ನನಗೆ ಒದಗಿ ಬಂದಿತು. ಇದು ನಿಜಕ್ಕೂ ಒಂದು ಸುಂದರವಾದ ಅನುಭವವಾಗಿದೆ” ಎಂದೂ ಬರೆಯಲಾಗಿದೆ.
ನೋಡಿ ಈ ವಿಡಿಯೋ…
View this post on Instagram
ಸುಮಧುರ ಗಳಿಗೆಯ ಸುಂದರ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಸದ್ಯ ಜೋರಾಗಿ ವೈರಲಾಗುತ್ತಿದೆ. ಈ ಹೃದಯ ತುಂಬಿ ಬರುವ ಕ್ಷಣಗಳ ವಿಡಿಯೋ ಇಲ್ಲಿಯವರೆಗೆ ನೆಟ್ಟಿಗರಿಂದ 92 ಸಾವಿರಕ್ಕೂ ಹೆಚ್ಚು ಲೈಕ್ಸಗಳನ್ನು ಪಡೆದಿದೆ. ನೇಟಿಜನ್ಸ್ ಗಳು ಮನಸೋ ಇಚ್ಛೆ ಕಮೆಂಟ್ ಮಾಡಿದ್ದಾರೆ. ಒಬ್ಬ ಯೂಸರ್ ಪ್ರತಿಯೊಬ್ಬ ಮಹತ್ವಾಕಾಂಕ್ಷಿಯಾದ ಪೈಲೆಟ್ ನ ಕನಸು ಇದಾಗಿದೆ ಎಂದಿದ್ದಾನೆ. ಇನ್ನೊಬ್ಬ ಇಲ್ಲಿಯವರೆಗಿನ ಎಲ್ಲಕ್ಕೂ ಸುಂದರ ಅನುಭವದ ಕ್ಷಣಗಳು ಎಂದರೆ, ಮಗದೊಬ್ಬ ಯೂಸರ್ ‘ನನ್ನ ತಾಯಿ ಮೊದಲ ಬಾರಿ ಫ್ಲೈಟ್ ನಲ್ಲಿ ಕುಳಿತಿರುವ ಅನುಭವ ಇನ್ನು ನನಗೆ ನೆನಪಿದೆ ಎಂದಿದ್ದಾನೆ.