ಯುವಕರೇ ಮತ್ತು ಚಿಕ್ಕ ಮಕ್ಕಳ ತಾಯಂದಿರೇ.. “2 ಮಿನಟ್ಸ್ ಮ್ಯಾಗಿ” ಯ ಹಿಂದಿನ ಕರಾಳ ವಾಸ್ತವದ ಬಗ್ಗೆ ನಿಮಗೆ ಗೊತ್ತಿದೆಯೇ..?
ಎಲ್ಲರಿಗೂ ಗೊತ್ತಿರುವ ಹಾಗೆ ಎರಡೇ ಎರಡು ಮಿನಿಟ್ಸ್ ಗಳಲ್ಲಿ ತಯಾರಾಗುವ ಜಟ್ ಪಟ್ ಮ್ಯಾಗಿ ತುಂಬಾ ಮಕ್ಕಳ ಮತ್ತು ಯುವಕರ ಇಷ್ಟದ ಖಾದ್ಯವಾಗಿದೆ.
ಇದಕ್ಕೆ ಕಾರಣ ಇದರ ರುಚಿಕಟ್ಟಾದ ಸ್ವಾದ, ತಯಾರಿಸಲು ತೆಗೆದುಕೊಳ್ಳುವ ಕಡಿಮೆ ಸಮಯ, ಮತ್ತು ತಯಾರಿಸಲು ಯಾವುದೇ ರೀತಿಯ ಪೂರ್ವ ತಯಾರಿಯ ಅವಶ್ಯಕತೆ ಇಲ್ಲ. ಈ ಮಹತ್ವದ ಮೂರು ಕಾರಣಗಳಿಂದ ಮ್ಯಾಗಿ ತುಂಬಾ ಜನಪ್ರಿಯವಾಗಿದೆ.
ಮಕ್ಕಳಿಗೆ ಊಟ ತಿನ್ನಿಸುವದಕ್ಕಾಗಿ ಅಮ್ಮಂದಿರರು ತುಂಬಾ ಹೆಣಗಾಡಬೇಕಾಗುತ್ತದೆ. ಈ ಕಷ್ಟ ಅಮ್ಮಂದಿರರಿಗೆ ಮಾತ್ರ ಗೊತ್ತು. ಮಕ್ಕಳು ಶಾಲೆಯಲ್ಲಿ ಸರಿಯಾಗಿ ಆಹಾರ ತಿನ್ನದೆ ಹಾಗೆಯೇ ಬರುತ್ತಾರೆ ಎಂಬುದು ಅಮ್ಮನಿಗೆ ಗೊತ್ತು, ಅದಕ್ಕಾಗಿ ಮನೆಗೆ ಬಂದ ಮೇಲೆ ಅವುಗಳಿಗೆ ಏನಾದರೂ ಹೊಟ್ಟೆಗೆ ಹಾಕಬೇಕೆಂದು ಹಾಗೂ ಅಷ್ಟೇ ಸರಿಯಾಗಿ ಹಾಗೂ ಸಿಹಿಯಾಗಿ ಮಕ್ಕಳು ತಿನ್ನಬೇಕೆಂದು ವಿಚಾರ ಮಾಡಿ ಹೆಚ್ಚಾಗಿ ಅಮ್ಮಂದಿರು ಮಕ್ಕಳಿಗೆ ಮ್ಯಾಗಿ ತಿನ್ನಿಸುತ್ತಾರೆ.

ಇದರಲ್ಲಿ ಅವರದು ಏನು ತಪ್ಪಿಲ್ಲ. ಕೆಲವು ಅಮ್ಮಂದಿರರು ಇದರ ಬದಲಾಗಿ ಭಾರತೀಯ ತಿಂಡಿಗಳನ್ನು ಮನೆಯಲ್ಲಿ ಮಾಡಿಟ್ಟರೂ ಮಕ್ಕಳು ತಿನ್ನು ಎಂದರೆ ಮೂಗು ಮುರಿಯುತ್ತಾರೆ. ಇದೆ ಸಮಸ್ಯೆ ಊರನ್ನು ಬಿಟ್ಟು ದೂರದ ಪಟ್ಟಣಗಳಲ್ಲಿ ಇರುವ ವಿದ್ಯಾರ್ಥಿಗಳದ್ದು ಸಹ. ಮೇಸ್ ನಲ್ಲಿ ಊಟ ಸರಿಯಾಗಿ ಸಿಗದಿದ್ದರೆ, ಅಥವಾ ಬೇಡವಾದ ಊಟವಿದ್ದರೆ ಆಗ ಮ್ಯಾಗಿಗೆ ಮೊರೆ ಹೋಗುವದುಂಟು. ಮ್ಯಾಗಿಯ ಹಾಗೆ ಅನೇಕ ಕಂಪನಿಗಳು ಇದೆ ರೀತಿಯ ಪಾಕೆಟ್ ಫುಡ್ ಗಳನ್ನು ಮಾರ್ಕೆಟ್ಟಿನಲ್ಲಿ ತಂದಿದೆ.
ಹೀಗೆ ಈ ರೀತಿಯಾಗಿ ಎಲ್ಲರದ್ದೂ ಎಲ್ಲವೂ ಚೆನ್ನಾಗಿ ನಡೆದಿರುವಾಗ 2017 ರಲ್ಲಿ ಮ್ಯಾಗಿಯ ಬಗ್ಗೆ ಒಂದು ಸುದ್ದಿ ಬಂತು. ಮ್ಯಾಗಿಯೂ ಆರೋಗ್ಯಕ್ಕೆ ಘಾತಕವಾಗಿದೆ ಎಂದು. ಆಗ ಎಷ್ಟೋ ಜನ ಮ್ಯಾಗಿಯನ್ನು ತಿನ್ನುವದನ್ನೇ ಬಿಟ್ಟಾಗ ಸಾವಿರಾರು ಟನ್ ಮ್ಯಾಗಿ ಕೋರ್ಟಿನ ಆದೇಶದ ಮೇರೆಗೆ ನಾಶ ಮಾಡಲಾಯಿತು.
ಇಷ್ಟಾದರೂ ನೆಸ್ಲೆ ಕಂಪನಿಯು ಮ್ಯಾಗಿಯನ್ನು ಮತ್ತೆ ಬಜಾರಿನಲ್ಲಿ ತಂದಿತು, ಮತ್ತೆ ಅದೇ ಕಥೆ ಜನ ಎಲ್ಲವನ್ನು ಮರೆತು ಮತ್ತೆ ತಿನ್ನಲು ಶುರು ಮಾಡಿದರು.

ಈ ಮೊದಲು ನೆಸ್ಲೆ ಕಂಪನಿಯ ಮೇಲೆ ಈ ಆರೋಪವಿತ್ತು. ಮ್ಯಾಗಿಯಲ್ಲಿ ಲೆಡ್ ಅಂಶ, ಹಾಗೂ MSG ಅಂದ್ರೆ ಮೊನೊಸೋಡಿಯಮ್ ಗ್ಲುಟಾಮೇಟ್ ದೊರಕಿತ್ತು. ವಿಶೇಷವೆಂದರೆ ನೆಸ್ಲೆ ಕಂಪನಿಯು ತಮ್ಮ ಇನ್ಸ್ಟಂಟ್ ಮ್ಯಾಗಿಯಲ್ಲಿ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಈ ಪದಾರ್ಥಗಳು ಇವೆ ಎಂದು ಒಪ್ಪಿಕೊಂಡಿತ್ತು. CFTRI ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ ಸಹಿತ ಮಾಡಿದ ಸ್ಯಾಂಪಲ್ ಟೆಸ್ಟ್ ನಲ್ಲಿ ಮೇಲಿನ ಬೇಡವಾದ ಪದಾರ್ಥಗಳು ಕಂಡು ಬಂದಿದ್ದವು.
ನೆಸ್ಲೆ ಕಂಪನಿಯು ಈ ಮಾತನ್ನು ಒಪ್ಪಿಕೊಂಡರೂ ತನ್ನ ಈ ಪ್ರಾಡಕ್ಟ್ ನಲ್ಲಿ ಲಿಮಿಟೆಡ್ ಸ್ವರೂಪದಲ್ಲಿ ಈ ಅಂಶಗಳನ್ನು ಬಳಸಲಾಗಿದೆ ಎಂದು ಹೇಳುತ್ತದೆ. ಆದರೂ ವಿಷ ಮಾತ್ರ ವಿಷವೇ ಅಲ್ಲವೇ? ಸ್ವಲ್ಪ ಪ್ರಮಾಣದಲ್ಲಿದ್ದರೂ ಇಂದಾಗುವ ಪರಿಣಾಮ ನಾಳೆಯಾಗಬಹುದು ಅಲ್ವಾ?
ಚಿಕ್ಕ ಮಕ್ಕಳು, ನಾಜೂಕಾದ ಮಕ್ಕಳು, ಕೋಮಲವಾದ ಮಕ್ಕಳು ಚಿಕ್ಕಂದಿನಿಂದಲೇ ಇದನ್ನು ತಿನ್ನುವದರಿಂದ ಮುಂದೆ ಭವಿಷ್ಯದಲ್ಲಿ ಅವರ ಮೇಲೆ ಅಡ್ಡ ಪರಿಣಾಮಗಳು ಆಗುವದು ಗ್ಯಾರಂಟಿಯೇ.
ನ್ಯಾಯಾಲಯವು ಸಹಿತ ಇದೆ ಪ್ರಶ್ನೆಯನ್ನು ಮಂಡಿಸಿತು. ಎಷ್ಟೇ ಪ್ರಮಾಣದಲ್ಲಿ ದೇಹಕ್ಕೆ ಹಾನಿಯುಂಟು ಮಾಡುವ ಈ ವಿಷಯುಕ್ತ ಪದಾರ್ಥವು ಇದ್ದರೆ ಮನುಷ್ಯರು ಅದನ್ನು ಯಾಕೆ ತಿನ್ನಬೇಕು? ಅಂತ.
WHO ದ ಪ್ರಕಾರ ಸೀಸವು ಕ್ಯೂಮಿಲೇಟಿವ್ ಟಾಕ್ಸಿಕಾಂಟ್ ಅಂದರೆ ಶರೀರದಲ್ಲಿ ಸಂಚಿತವಾಗುವ ವಿಷಯುಕ್ತ ಪದಾರ್ಥವಾಗಿದೆ. ಇದು ದೇಹದ ಯಕೃತ್ ಮತ್ತು ಮೂತ್ರಪಿಂಡದ ಮೇಲೆ ದುಷ್ಪರಿಣಾಮವನ್ನು ಮಾಡುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳ ಮೇಲೆ ಮತ್ತು ಸ್ತ್ರೀಯರ ಮೇಲೆ ತುಂಬಾ ವೇಗದಲ್ಲಿ ಕೆಟ್ಟ ಪರಿಣಾಮ ಬೀರುವದು.

ಸರಳ ಭಾಷೆಯಲ್ಲಿ ಹೇಳಬೇಕಾದರೆ MSG ಅಂದರೆ ಅಜಿನೊಮೋಟೋ ಸೇವನೆಯಿಂದ ಶರೀರದ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ. ಈ ಪದಾರ್ಥದ ಅತಿಯಾದ ಸೇವನೆಯಿಂದ ತಲೆನೋವು, ಬೆವರು ಹರಿಯುವದು, ಹೊಟ್ಟೆಯಲ್ಲಿ ತಳಮಳ, ಎದೆಯಲ್ಲಿ ನೋವು, ಕುತ್ತಿಗೆ ಮತ್ತು ಬೇರೆ ಬೇರೆ ಜಾಗಗಳಲ್ಲಿ ಜುಮ್ ಹಿಡಿಯುವದು ಹೇಗೆ ಅನೇಕ ರೀತಿಯ ವಿಕಾರಗಳು ಕಂಡು ಬರುತ್ತವೆ. ಡಾಕ್ಟರ್ ಗಳ ಹೇಳಿಕೆಯ ಪ್ರಕಾರವಂತೂ ಇದರಿಂದ ದಮ್ಮು ಸಹ ಹತ್ತುವದು. ಕೆಲವೊಮ್ಮೆ ಮೆದಳು ಸಹಿತ ಕೆಲಸ ಮಾಡುವದಿಲ್ಲ.
ಬೇಗ ಎನ್ನುವ ಮತ್ತು ಸ್ವಾದದ ಹೆಸರಿನಲ್ಲಿ ಹೂವಿನಂಥ ನಮ್ಮ ಮಕ್ಕಳಿಗೆ ಯಾವ ಇಂಥ ಜಟ್ ಪಟ್ ಆಹಾರವನ್ನು ಹಾಕುತ್ತಿದ್ದೇವೆ ಎಂಬುದನ್ನು ಮೊದಲು ವಿಚಾರ ಮಾಡಿ ಆಮೇಲೆ ಮಕ್ಕಳಿಗೆ ತಿನ್ನಲು ಕೊಡಬೇಕು. ಯಾಕೆಂದರೆ ಅವರ ನಾಜೂಕಾದ ಶರೀರದ ಮೇಲೆ ಬೇಗನೆ ಅಡ್ಡ ಪರಿಣಾಮಗಳು ಆಗುತ್ತವೆ.
ಆದ್ದರಿಂದ ನಮ್ಮ ಮನೆಯ, ನಮ್ಮ ರಾಜ್ಯದ, ನಮ್ಮ ದೇಶದ ತುಂಬಾ ಶಕ್ತಿಯುತ ಆಹಾರಗಳನ್ನೇ ಪಾರಂಪರಿಕವಾದ ಆಹಾರ ಪದಾರ್ಥಗಳನ್ನೇ ಮಕ್ಕಳಿಗೆ ತಿನ್ನುವದನ್ನು ಕಲಿಸಿ ಎಂಬುದೇ ನಮ್ಮ ವಿನಂತಿ.