ಯುವತಿಯ ಸೋಶಿಯಲ್ ಮೀಡಿಯಾದಲ್ಲಿಯ ಫೋಟೋಗಳನ್ನು ನೋಡಿದ ನಂತರ ಮನೆ ಬಾಡಿಗೆ ಹೆಚ್ಚಿಸಿದ ಮಾಲೀಕ! ಯಾಕೆ? ಏನಿತ್ತು? ಆ ಫೋಟೋ…

ನಾವು ಮಾಡುವ ಕೆಲಸಗಳು ಒಮ್ಮೊಮ್ಮೆ ನಮಗೆ ಕುತ್ತು ತರುತ್ತವೆ ನಿಜ ಅಲ್ವೇ? ಸುಳ್ಳೆನಿಸಿದರೆ ಈ ಆರ್ಟಿಕಲ್ ಓದಿ ಗೊತ್ತಾಗುತ್ತದೆ. ವರದಿಯ ಪ್ರಕಾರ, ಮನೆ ಮಾಲಿಕನೊಬ್ಬ ತನ್ನ ಮನೆಯಲ್ಲಿ ಬಾಡಿಗೆ ಇರುತ್ತಿದ್ದ ಯುವತಿಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ನಂತರ, ಆಕೆ ವಾಸಿಸುತ್ತಿದ್ದ ಮನೆಯ ಬಾಡಿಗೆಯನ್ನು ಆಕಸ್ಮಿಕವಾಗಿ ಹೆಚ್ಚಿಸಿದ್ದಾನೆ.

ಸುಂದರ ಯುವತಿಯರನ್ನು ನೋಡಿದ ನಂತರ ಹೆಚ್ಚುವರಿ ಜನ ಮನೆ ಮಾಲೀಕರು ಬಾಡಿಗೆಯನ್ನು ಕಡಿಮೆ ಮಾಡುತ್ತಾರೆ. ಆದರೆ ಈ ಮಾಲೀಕ ಬಾಡಿಗೆ ಕಡಿಮೆ ಮಾಡುವದರ ಬದಲಾಗಿ ತುಂಬಾ ಹೆಚ್ಚಿಸಿದ್ದಾನೆ. ಇದನ್ನು ಕೇಳಿದ ನಂತರ ಎಲ್ಲರಿಗೂ ಒಂದು ಸಾಮಾನ್ಯ ಪ್ರಶ್ನೆ ನಿರ್ಮಾಣವಾಗುತ್ತದೆ ಅದೇನೆಂದರೆ ಬಾಡಿಗೆ ಹೆಚ್ಚು ಮಾಡಲು ಕಾರಣವೇನು?

ವ್ಯಕ್ತಿಯು ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಮನೆಯಲ್ಲಿ ಬಾಡಿಗೆ ಇರುವ ಯುವತಿಯ ಫೋಟೋಗಳನ್ನು ನೋಡಿದ್ದಾನೆ. ತದನಂತರ ಆಕೆಯ ಮನೆಯ ಬಾಡಿಗೆ ಒಮ್ಮೆಲೆ ಎರಡು ಪಟ್ಟು ಹೆಚ್ಚಿಗೆ ಮಾಡಿದ್ದಾನೆ. ಇದರ ಹಿಂದಿನ ಕಾರಣವೇನು ಇಲ್ಲಿ ನೋಡಿ…

ಪ್ರಸ್ತುತ ಮಹಿಳೆ ಒಂದು ವೆಬ್ ಸೈಟ್ ನಲ್ಲಿ ತುಂಬಾ ಜನಪ್ರಿಯವಾಗಿದ್ದಾಳೆ. ಆಲ್ಲಿ ಆಕೆ ತನ್ನ ಇಂಟಿಮೆಂಟ್ ಫೋಟೋಗಳನ್ನು ಶೇರ್ ಮಾಡುತ್ತಾಳೆ. ಯುವತಿಯ ಮನೆ ಮಾಲೀಕ ಆನ್ ಲೈನ್ ನಲ್ಲಿ ಆಕೆಯ ಫೋಟೋ ಮತ್ತು ವಿಡಿಯೋಗಳನ್ನು ನೋಡಿದ್ದಾನೆ. ಇದೆಲ್ಲ ಗಮನಿಸಿದ ನಂತರ ಬಾಡಿಗೆಯನ್ನು ಹೆಚ್ಚು ಮಾಡಿದ್ದಾನೆ.

ಮಹಿಳೆಯ ಹೆಸರು ರೋಮಿ ಚೆಸ್ ಇದ್ದು ಈಕೆ 29 ವರ್ಷದವಳಾಗಿದ್ದಾಳೆ. ಅಮೆರಿಕೆಯ ಮಿಯಾಮಿ (ಫ್ಲೋರಿಡಾ) ಯಲ್ಲಿ ಒಂದು ಬಾಡಿಗೆಯ ಮನೆಯಲ್ಲಿ ವಾಸ ಮಾಡುತ್ತಾಳೆ. ಇಲ್ಲಿ ಒಂದು ವರ್ಷ ವಾಸ ಮಾಡಿದ ನಂತರ ಮಾಲೀಕ ಈಗ ಬಾಡಿಗೆಯಲ್ಲಿ ತುಂಬಾನೇ ಹೆಚ್ಚು ಮಾಡಿದ್ದಾನೆ. ಮೊದಲು ತಿಂಗಳಿಗೆ ಸುಮಾರು 1 ಲಕ್ಷ 75 ಸಾವಿರ ಬಾಡಿಗೆ ನೀಡುತ್ತಿದ್ದಳು. ಮನೆ ಮಾಲೀಕ ಈಗ ತಿಂಗಳಿಗೆ 3 ಲಕ್ಷ 66 ಸಾವಿರ ರೂಪಾಯಿಗಳನ್ನು ಮಾಡಿದ್ದಾನೆ. ಮನೆಯಲ್ಲಿ ಒಟ್ಟು 4 ಬೆಡ್ ರೂಮ್ ಗಳಿದ್ದು ಮನೆ ತುಂಬಾ ದೊಡ್ಡದಾಗಿದೆ. ಹೀಗಾಗಿ ಈ ಮನೆಗೆ ಬಾಡಿಗೆ ಜಾಸ್ತಿ ಇತ್ತು.

ಮನೆ ಮಾಲೀಕ ಏನು ಹೇಳಿದ…

ಕಳೆದ ವರ್ಷ ನವೆಂಬರ್ ನಲ್ಲಿ ಮನೆ ಮಾಲೀಕ ತನ್ನ ಫ್ಲ್ಯಾಟ್ ನೋಡುವ ಉದ್ದೇಶದಿಂದ ಆಕಸ್ಮಿಕ ಭೇಟಿ ನೀಡಲು ಬಂದಿದ್ದನು. ಆಗ ಆತ ನನ್ನ ಕಡೆಗೆ ಒಂದೇ ಸವನೆ ಕಣ್ಣು ಮಿಟುಕಿಸದೇ ನೋಡಿಯೇ ನೋಡುತ್ತಿದ್ದ. ಸ್ವಲ್ಪ ಸಮಯದ ನಂತರ ಆತ ನನಗೆ ನಿನ್ನ ಇನ್ಸ್ಟಾಗ್ರಾಮ್ ಅಕೌಂಟ್ ದೊರಕಿದೆ. ನೀನು ಯಾವ ವೆಬ್ ಸೈಟ್ ಗಾಗಿ ಕೆಲಸ ಮಾಡುತ್ತಿರುವೆ ಆ ಎಲ್ಲ ಲಿಂಕ್ಸ್ ಗಳನ್ನು ನಾನು ನೋಡಿದ್ದೇನೆ. ನೀನು ತುಂಬಾ ಜನಪ್ರಿಯವಾಗಿದ್ದು ಇನ್ನು ಮೇಲೆ ನೀನು ನನಗೆ ಹೆಚ್ಚಿಗೆ ಬಾಡಿಗೆ ಕೊಡಬೇಕಾಗುತ್ತದೆ ಎಂದು ಹೇಳಿದನಂತೆ, ಎಂದು ಯುವತಿ ಹೇಳಿಕೆ ಒಂದು ನೀಡಿದ್ದಾಳೆ.