ಯುವತಿ ಚಿನ್ನದ ಸರ ಧರಿಸಿ ಜಾರೋವರೆಗೂ ಜುವೆಲ್ಲರಿ ಶಾಪ್ ಮಾಲೀಕ ಸುಸ್ತು! ಕಳ್ಳತನದ ಲೇಟೆಸ್ಟ್ ಐಡಿಯಾ CCTV ಯಲ್ಲಿ ಸೆರೆ.
ಕಳ್ಳರು ಯಾವಾಗಲೂ ಕಳ್ಳತನದ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಯಾಕೆಂದರೆ ಹಳೆಯ ಐಡಿಯಾಗಳು ಯಾವತ್ತೂ ಕೆಲಸಕ್ಕೆ ಬರುವುದಿಲ್ಲ. ಹೀಗಾಗಿ ತಮ್ಮ ಈ ಕಳ್ಳತನದ ಕಪ್ಪು ವ್ಯವಸಾಯದಲ್ಲಿ ಸದಾ ಏನಾದರೂ ಹೊಸತನವನ್ನು ಈ ಕಳ್ಳರು ತರುತ್ತಲೇ ಇರುತ್ತಾರೆ. ಇದೇ ರೀತಿ ಒಬ್ಬಳು ಯುವತಿ ಜುವೆಲ್ಲರಿ ಶಾಪ್ ಮಾಲೀಕನಿಗೆ ಅರಿವಿಲ್ಲದೆ ಆರಾಮಾಗಿ ಯಾಮಾರಿಸಿ ಚಿನ್ನದ ಸರವನ್ನು ಕೊರಳಲ್ಲಿಯೇ ಧರಿಸಿಕೊಂಡು ಪಲಾಯನ ಮಾಡಿದ್ದಾಳೆ, ಅದು ತುಂಬಾ ಈಸಿಯಾಗಿ ಹಾಗೂ ಶಾಪ್ ಮಾಲಿಕನ ಎದುರಿನಲ್ಲೇ.
ವಿಡಿಯೋದಲ್ಲಿ ಕಂಡುಬರುವ ಹಾಗೆ ಯುವತಿಯು ಒಂದು ಜ್ಯುವೆಲರಿ ಶಾಪ್ ನಲ್ಲಿ ಚಿನ್ನದ ಸರವನ್ನು ಖರೀದಿಸಲು ಹೋಗಿದ್ದಾಳೆ. ಏತನ್ಮದ್ಯೆ ಶಾಪ್ ಮಾಲೀಕ ಯುವತಿಗೆ ಚಿನ್ನದ ಸರವನ್ನು ನೀಡಿದ್ದಾನೆ. ಆಕೆ ಚಿನ್ನದ ಸರವನ್ನು ಕೊರಳಲ್ಲಿ ಹಾಕಿಕೊಂಡು ಮಿರರ್ ನಲ್ಲಿ ಒಂದೇಸವನೆ ನೋಡುತ್ತಿದ್ದಾಳೆ. ಇತ್ತ ಜುವೆಲ್ಲರಿ ಶಾಪ್ ಮಾಲೀಕ ಕೌಂಟರ್ ಒಳಗಡೆ ನಿಂತು ಆಕೆಯನ್ನು ವೀಕ್ಷಿಸುತ್ತಿದ್ದಾನೆ. ಯುವತಿ ಮಧ್ಯೆದಲ್ಲಿ ಒಮ್ಮೆಲೆ ಶಾಪ್ ಹೊರಗಡೆ ನಿಂತ ತನ್ನ ಪತಿ ಅಥವಾ ಬಾಯ್ ಫ್ರೆಂಡ್ ಗೆ ಚಿನ್ನದ ಸರ ತೋರಿಸಲು ಸಹಜವಾಗಿ ಹೊರಗೆ ಹೋಗುತ್ತಾಳೆ. ಯುವತಿ ಸರವನ್ನು ತೋರಿಸಿ ಮರಳಿ ಬರಬಹುದೆಂದು ಮಾಲೀಕ ಯಾವುದೇ ರೀತಿಯ ವಿಚಾರ ಮಾಡದೆ ಹಾಗೆಯೇ ಕೌಂಟರ್ ಒಳಗಡೆಯೇ ನಿಂತಿದ್ದಾನೆ. ಚಿನ್ನದ ಸರ ತೋರಿಸಲು ಹೊರಗಡೆ ಹೊದವಳೇ ತಡ ತನ್ನ ಜೊತೆಗಾರನ ಬೈಕ್ ಮೇಲೆ ಕ್ಷಣದಲ್ಲಿ ಪರಾರಿಯಾಗಿದ್ದಾಳೆ. ಇತ್ತ ಜುವೆಲ್ಲರಿ ಶಾಪ್ ಮಾಲೀಕ ಆಗ ದಡಬಡಾಯಿಸಿ ಎಚ್ಚೆತ್ತು ಕೌಂಟರ್ ಸುತ್ತುವರೆದು ಹೊರಗೆ ಹೋಗುವಷ್ಟರಲ್ಲಿ ಕಿಲಾಡಿ ಕಳ್ಳರು ಮಂಗಮಾಯವಾಗಿದ್ದಾರೆ.
ವಿಡಿಯೋ ನೋಡಿ
ऐसा चोरी आप ने कभी नहीं देखा होगा। pic.twitter.com/oSsXWNXsZy
— Crazy Panda (@CrazyPa50956318) November 21, 2020
ಪ್ರಸ್ತುತ ವಿಡಿಯೋವನ್ನು crezy Panda ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.