ಯೂಟ್ಯೂಬ್ ನಲ್ಲಿ 65 ಲಕ್ಷ ಸಬ್ ಸ್ಕ್ರೈಬರ್ ಹಾಗೂ ತಿಂಗಳಿಗೆ 2 ಲಕ್ಷ ರೂಪಾಯಿ ಸಂಪಾದನೆ ಮಾಡುವ ಯುಟ್ಯೂಬರ್ ಅಜ್ಜಿ ಇವರು!!
ಹಣ ಗಳಿಸುವುದಕ್ಕೆ ಅನೇಕ ಮಾರ್ಗಗಳಿವೆ. ಈ ಡಿಜಿಟಲ್ ಯುಗದಲ್ಲಂತೂ ಕೇಳಲೇಬೇಡಿ, ನಿಮ್ಮಲ್ಲಿರುವ ಪ್ರತಿಯೊಂದು ಕಲೆಗೆ ಒಂದೊಂದು ಆಪ್ ಗಳು ಹಣಗಳಿಸಿ ಕೊಡುತ್ತವೆ. ಗಳಿಕೆಗೆ ವಯಸ್ಸು ಸಹಿತ ಅಡ್ಡ ಬರುವುದಿಲ್ಲವೆಂದು ಈ ಅಜ್ಜಿಯವರ ಕೆಲಸದಿಂದ ಗೊತ್ತಾಗುತ್ತದೆ.
ಯೂಟ್ಯೂಬ್ನಲ್ಲಿ ವಿಡಿಯೋವನ್ನು ಹಾಕಿ ಹಣ ಗಳಿಸುವುದು ಅಂದರೆ ಅಷ್ಟೊಂದು ಸುಲಭದ ಕೆಲಸವಲ್ಲ. ಕಾರಣ ನಾವು ಹಾಕುವ ವಿಡಿಯೋ ಏನಾದರೂ ವಿಶೇಷತೆಯನ್ನು ಹೊಂದಿರಬೇಕು.
ಈ ಲೇಖನದಲ್ಲಿ ಉಲ್ಲೇಖಿಸುತ್ತಿರುವ ಅಜ್ಜಿಯು ತಮ್ಮ ಜೀವನದಲ್ಲಿ ಎಂದಿಗೂ ಶಾಲೆಗೆ ಹೋಗಿಲ್ಲ. ಇಂದು ಯೂಟ್ಯೂಬ್ನಲ್ಲಿ ಇವರಿಗೆ 6.5 ಮಿಲಿಯನ್ ಫಾಲೋವರ್ಸ್ ಗಳಿದ್ದಾರೆ. ತಮ್ಮ ವಿಡಿಯೋಗಳ ಮುಖಾಂತರ ಈ ಅಜ್ಜಿಯು ತಿಂಗಳಿಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿಗಳವರೆಗೆ ಹಣ ಗಳಿಸುವರು.
ಇವರು ಒಂದು ಚಿಕ್ಕ ಊರಿನಲ್ಲಿ ನೆಲೆಸಿದ್ದಾರೆ. ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯಿಂದ 10 ಕಿಲೋಮೀಟರ್ ಅಂತರದಲ್ಲಿರುವ ಸಾರೊಳಾ ಕಾಸಾರ್ ಎಂಬ ಊರಿನಲ್ಲಿ ಇರುತ್ತಾರೆ. ಇವರ ಹೆಸರು ಸುಮನ್.
ಇವರು ಬರೀ ಮರಾಠಿ ಭಾಷೆಯನ್ನು ಮಾತನಾಡುತ್ತಾರೆ. ಹಿಂದಿ ಭಾಷೆ ಮಾತನಾಡಲು ಬರುವುದಿಲ್ಲ. ಅಜ್ಜಿಯು ಇಲ್ಲಿಯವರೆಗೆ 150 ಕಿಂತಲೂ ಹೆಚ್ಚು ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಶೇರ್ ಮಾಡಿದ್ದಾರೆ. ಇವರ ಮೊಮ್ಮಗ ಸುಮನ್ ಅಜ್ಜಿಗೆ ಯೂಟ್ಯೂಬ್ನಲ್ಲಿ ಚಾನಲ್ ಪ್ರಾರಂಭ ಮಾಡುವ ಐಡಿಯಾವನ್ನು ಕೊಟ್ಟನು. ಆದರೆ ಭವಿಷ್ಯದಲ್ಲಿ ಈ ಐಡಿಯಾ ಇಂಥದ್ದೊಂದು ದೊಡ್ಡ ಕೆಲಸಕ್ಕೆ ನಾಂದಿಯಾಗುತ್ತದೆ ಎಂಬುದು ಅವರಿಗೂ ಗೊತ್ತಿರಲಿಲ್ಲ.

ಸುಮನ್ ಅಜ್ಜಿಯ ಮೊಮ್ಮಗ ಯಶ್ ಹೇಳುವ ಪ್ರಕಾರ ಒಂದು ದಿನ ಅಜ್ಜಿಗೆ ಪಾವ್ ಭಾಜಿ ಡಿಶ್ ಮಾಡಲು ಗೊಗರೆದನು. ಆದರೆ ಅದು ಅಜ್ಜಿಗೆ ತಯಾರಿಸಲು ಬರುತ್ತಿರಲಿಲ್ಲ. ಆಗ ಯಶ್ ಅಜ್ಜಿಗೆ ಯೂಟ್ಯೂಬ್ನಲ್ಲಿ ಪಾವ್ ಬಾಜಿ ಮಾಡುವ ಪದ್ಧತಿಯನ್ನು ತೋರಿಸಿಕೊಟ್ಟನು. ಇದನ್ನು ನೋಡಿದ ಅಜ್ಜಿಯು ಅಯ್ಯೋ ಇದೇನು ಮಹಾ? ನಾನು ಇದಕ್ಕಿಂತಲೂ ಚೆನ್ನಾಗಿ ಮಾಡಿ ತೋರಿಸುವೆ ಎಂದು ಹೇಳಿ ಮಾಡಿಯೇ ಬಿಟ್ಟಳು. ಅಂದು ಅಜ್ಜಿಯು ಮಾಡಿದ ಪಾವ್ ಭಾಜಿ ನಿಜಕ್ಕೂ ತುಂಬಾ ಚೆನ್ನಾಗಿ ಮತ್ತು ಟೇಸ್ಟಿ ಆಗಿತ್ತು. ಅವತ್ತೆ ನಾನು ವಿಚಾರಮಾಡಿ ಅಜ್ಜಿಯ ಹೆಸರಿನಲ್ಲಿ ಒಂದು ಯುಟ್ಯೂಬ್ ಚಾನೆಲ್ ಪ್ರಾರಂಭಿಸಬೇಕೆಂದು ನಿಶ್ಚಯಿಸಿದೆ. ನಂತರ ನವೆಂಬರ್ 2019 ರಲ್ಲಿ ಯುಟ್ಯೂಬ್ ಚಾನಲ್ ನ್ನು ಪ್ರಾರಂಭಿಸಿಯೇ ಬಿಟ್ಟೆ. ಅದಾದ ನಂತರ ಮುಂದೆ ಹಾಗಲಕಾಯಿ ಪಲ್ಲೆ ಯನ್ನು ತಯಾರಿಸುವ ರೆಸಿಪಿ ಶೇರ್ ಮಾಡಿದೆವು. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ 1 ಮಿಲಿಯನ್ ಜನರು ವೀಕ್ಷಿಸಿದರು. ಸದ್ಯಕ್ಕೆ ಅದೇ ವಿಡಿಯೋ ಆರು ಮಿಲಿಯನ್ ಗಿಂತಲೂ ಹೆಚ್ಚು ಜನರು ನೋಡಿದ್ದಾರೆ.
ತಮಾಷೆಯ ವಿಷಯವೆಂದರೆ ಯಾವಾಗ ಯುಟ್ಯೂಬ್ ಚಾನೆಲ್ ಪ್ರಾರಂಭಿಸಬೇಕೆಂದು ಇದ್ದೆವು ಆಗ ನಮ್ಮಜ್ಜಿ ತುಂಬಾ ಹೆದರಿ ಕೊಂಡಿದ್ದರು ಎಂದು ಯಶ್ ಹೇಳುತ್ತಾನೆ. ಏಕೆಂದರೆ ಅಜ್ಜಿಗೆ ಮೊಬೈಲ್ ಮತ್ತು ಯೂಟ್ಯೂಬ್ ನಲ್ಲಿ ಏನು ತಿಳಿಯುತ್ತಿರಲಿಲ್ಲ.
ಇಲ್ಲಿಯವರೆಗೆ ಅಜ್ಜಿ ಎಂದು ಕ್ಯಾಮೆರಾ ಫೇಸ್ ಮಾಡಿರಲಿಲ್ಲ. ಸದ್ಯ ಅಜ್ಜಿಗೆ ಇದೆಲ್ಲಾ ನಾರ್ಮಲ್ ಆಗಿದೆ. ಅಜ್ಜಿಯು ಯೂಟ್ಯೂಬ್ ಕ್ರಿಯೇಟರ್ ಅವಾರ್ಡ್ ಸಹ ಪಡೆದಿದ್ದಾರೆ. ಈಗ ಪ್ರತಿ ತಿಂಗಳು ಅಜ್ಜಿಗೆ ಒಂದೂವರೆಯಿಂದ ಎರಡು ಲಕ್ಷಗಳ ರೂಪಾಯಿಗಳವರೆಗೆ ಆದಾಯ ಯೂಟ್ಯೂಬ್ ಕಡೆಯಿಂದ ಬರುತ್ತದೆ.
ಇದರ ಹೊರತಾಗಿ ಯೂಟ್ಯೂಬ್ ಕಡೆಯಿಂದ ಸುಮನ್ ಅಜ್ಜಿಗೆ ಸಿಲ್ವರ್ ಪ್ಲೇ ಬಟನ್ ಸಹಿತ ದೊರಕಿದೆ. ಯಾಕೆಂದರೆ ಅವರಿಗೆ ಯೂಟ್ಯೂಬ್ನಲ್ಲಿ 6.5 ಮಿಲಿಯನ್ ಸಬ್ ಸ್ಕ್ರೈಬರ್ ಇದ್ದಾರೆ. ಅಜ್ಜಿಗೆ ಕೆಲವು ಇಂಗ್ಲಿಷ್ ಶಬ್ದಗಳು ಸಹಿತ ಉಚ್ಚರಿಸಲು ಬರುತ್ತಿರಲಿಲ್ಲ. ಉದಾಹರಣೆಗೆ ಕೆಚಪ್, ಮಿಕ್ಸರ್, ಬೇಕಿಂಗ್ ಪೌಡರ್ ಈ ರೀತಿಯ ಅನೇಕ ಇಂಗ್ಲಿಷ್ ಶಬ್ದಗಳನ್ನು ಅವರ ಮೊಮ್ಮಗ ಅವರಿಗೆ ಕಲಿಸಿದ್ದಾನೆ.