ರತನ್ ಟಾಟಾ ಕೂಡ ಮದುವೆಯಾಗಲು ನಿರ್ಧರಿಸಿದ್ದರು ಆದರೆ ….; ಟಾಟಾ ಅವರ ಅಪೂರ್ಣ ಪ್ರೇಮಕಥೆ!
ಭಾರತೀಯ ಉದ್ಯೋಗ ಕ್ಷೇತ್ರದಲ್ಲಿಯ ಎಲ್ಲಕ್ಕೂ ದೊಡ್ಡ ವ್ಯಾಪಾರ ಸಮೂಹ ರತನ್ ಟಾಟಾ ಅವರದು. ಜಮಶೇಡಜಿ ಟಾಟಾ ಅವರು ಮೊದಲು ಇದರ ಸ್ಥಾಪನೆ ಮಾಡಿದ ನಂತರ ಅವರ ಮಗ ಮೊಮ್ಮಗ ಹೀಗೆ ಪರಿವಾರದಿಂದ ಪರಿವಾರ ತಮ್ಮ ಬಿಜಿನೆಸ್ ನ್ನು ವಿಸ್ತಾರದ ಜೊತೆಗೆ ಬಲ ತುಂಬುತ್ತಾ ಬಂದರು. ಟಾಟಾ ಉದ್ಯೋಗ ಸಮೂಹ ಭಾರತೀಯ ಉದ್ಯೋಗ ಕ್ಷೇತ್ರದಲ್ಲಿ ಸದಾ ಹೊಳೆಯುವ ನಕ್ಷತ್ರ ಎಂದರೆ ತಪ್ಪಾಗಲಾರದು. ಹಾಗೆ ನೋಡಿದರೆ ಟಾಟಾ ಅವರ ಅನೇಕ ಕಥೆಗಳು ಇವೆ. ಅದರಲ್ಲಿಯೇ ಅವರ ಮದುವೆಯ ಕಥೆಯೊಂದು ತುಂಬಾ ಕುತೂಹಲಕರವಾಗಿದೆ. ಟಾಟಾ ಅವರು ಮದುವೆ ಯಾಕೆ ಆಗಲಿಲ್ಲ ಎಂಬ ಸ್ವಾರಸ್ಯಕರ ವಿಷಯದ ಬಗ್ಗೆ ತಿಳಿಯುವಾ.
ರತನ್ ಟಾಟಾ ಅವರು ಇನ್ನೂ ಅವಿವಾಹಿತರಾಗಿದ್ದಾರೆ. ಅವರ ವಯಸ್ಸು ಈಗ 80 ಇದೆ. ಫೆಬ್ರುವರಿಯಲ್ಲಿ ಒಂದು ಫೇಸ್ ಬುಕ್ ಪೇಜ್ ದಲ್ಲಿ ಟಾಟಾ ಅವರ ವೈಯಕ್ತಿಕ ವಿಷಯಗಳ ಬಗ್ಗೆ ಅನೇಕ ಮಾಹಿತಿ ಶೇರ್ ಮಾಡಿದ್ದರು. ಅವರ ತಾಯಿ ತಂದೆ ಮತ್ತು ತಂಗಿಯರ ಬಗ್ಗೆ ಸಾಕಷ್ಟು ಮಾಹಿತಿ ಕೊಟ್ಟಿದ್ದರು. ಹಾಗೆಯೇ ಟಾಟಾ ಅವರು ಮದುವೆ ಯಾಕಾಗಲಿಲ್ಲ ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದರು.

ರತನ್ ಅವರು ಲಾಸ್ ಏಂಜೆಲಿಸ್ ನಲ್ಲಿ ಆರ್ಕಿಟೆಕ್ಚರ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ತದನಂತರ ಅವರು ಉಚ್ಚಶಿಕ್ಷಣ ಸಹಿತ ತೆಗೆದುಕೊಂಡರು. ಶಿಕ್ಷಣ ಪೂರ್ಣಗೊಳಿಸಿದ ನಂತರ ಟಾಟಾ ಅವರು ಅಲ್ಲಿಯೇ ಒಂದು ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾಗ ಅಲ್ಲಿ ಅವರ ಪರಿಚಯದ ಒಂದು ಹುಡುಗಿ ಇತ್ತು. ಇಬ್ಬರಲ್ಲಿ ಒಳ್ಳೆಯ ಮಿತ್ರತ್ವ ಇತ್ತು. ಕ್ರಮೇಣ ಇಬ್ಬರ ಮೈತ್ರಿ ಪ್ರೇಮದಲ್ಲಿ ಅಂಕುರಿಸಿತು. ನಿಧಾನವಾಗಿ ಮದುವೆಯ ಕಡೆಗೆ ಹೆಜ್ಜೆ ಇಡುತ್ತಿರುವಾಗಲೇ ಟಾಟಾ ಅವರ ತಂಗಿಯ ಪೃಕೃತಿ ಹದಗೆಟ್ಟಿದ ಕಾರಣ ಟಾಟಾ ಅವರು ಮರಳಿ ಭಾರತಕ್ಕೆ ಬಂದರು. ಅದರ ನಂತರ ಮಾತ್ರ ರತನ್ ಟಾಟಾ ಅವರ ಜೀವನದಲ್ಲಿ ನಡೆದದ್ದು ಮಾತ್ರ ತುಂಬಾ ಖೇದಜನಕವಾಗಿದೆ.

ರತನ್ ಅವರು ತನ್ನ ತಂಗಿಯ ಕಾರಣದಿಂದ ಭಾರತಕ್ಕೆ ಬಂದಾಗ ಸರಿಯಾಗಿ ಅದೇ ಸಮಯಕ್ಕೆ ಭಾರತ ಚೀನಾ ನಡುವೆ ಯುದ್ಧ ಪ್ರಾರಂಭವಾಯಿತು. ಇದೇ ವೇಳೆಯಲ್ಲಿ ಹುಡುಗಿಯ ಕುಟುಂಬದವರು ರತನ್ ಜೊತೆಗೆ ಮದುವೆಯನ್ನು ನಿರಾಕರಿಸಿ ಬೇರೆ ಹುಡುಗನ ಜೊತೆಗೆ ಮದುವೆ ಮಾಡಿ ಕೊಟ್ಟರು. ಈ ಎಲ್ಲ ಕಾರಣಗಳಿಂದ ರತನ್ ಅವರು ಜೀವನವಿಡೀ ಅವಿವಾಹಿತರಾಗಿಯೇ ಉಳಿದರು.

ರತನ್ ಅವರ ತಾಯಿ ತಂದೆಯ ಘಟಸ್ಫೋಟವಾಗಿತ್ತು. ಆ ಕಾರಣದಿಂದ ಅವರು ಸ್ವಲ್ಪ ನೊಂದಿದ್ದರು.ಅವರ ಬಾಲ್ಯ ತುಂಬಾ ಸುಂದರವಾಗಿತ್ತು. ಆದರೆ ತಾಯಿ ತಂದೆಯ ಘಟಸ್ಫೋಟದಿಂದ ತುಂಬಾ ನೊಂದಿದ್ದರು. ಆ ನಂತರ ರತನ್ ಅವರಿಗೆ ಅವರ ಅಜ್ಜಿಯೇ ಪೋಷಸಿದಳು. ಜೀವನದ ಮೌಲ್ಯಗಳನ್ನು ಅವರಿಗೆ ಅವರ ಅಜ್ಜಿಯೇ ಕಲಿಸಿದಳು ಎಂದು ಹೇಳಲಾಗುತ್ತದೆ.
ರತನ್ ಅವರ ಹೆಸರು ದೇಶದ ಜೊತೆಗೆ ಜಗತ್ತಿನಲ್ಲಿಯೂ ದೊಡ್ಡದಾಗಿದೆ. ಟಾಟಾ ಬ್ರಾಂಡ್ ದ ಅನೇಕ ಮೋಟರ್ ಗಳು ಮಾರ್ಕೆಟ್ ನಲ್ಲಿವೆ. ಇವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ವರ್ಕರ್ಸ್ ಗಳ ಬಗ್ಗೆ ಮೆತ್ತನೆಯ ಧೋರಣೆ ಹೊಂದಿದ್ದಾರೆ. ಹಾಗೆಯೇ ದೇಶದ ಮೇಲೆ ಸಂಕಟ ಎರಗಿದಾಗ ಟಾಟಾ ಅವರು ಯಾವತ್ತೂ ಮುಕ್ತ ಹಸ್ತದಿಂದ ದೇಶಕ್ಕೆ ಸಹಾಯ ಮಾಡುತ್ತಾರೆ.

ಸದ್ಯ ದೇಶ ಕೊರೊನ ಸಂಕ್ರಮಿಕ ರೋಗದಿಂದ ತತ್ತರಿಸಿರುವಾಗ ರತನ್ ಅವರು ಮುಕ್ತ ಮನಸ್ಸಿನಿಂದ ಒಂದು ವರೆ ಸಾವಿರ ಕೋಟಿ ರೂಪಾಯಿಗಳ ಸಹಾಯ ಮಾಡಿದ್ದಾರೆ. ಅದಲ್ಲದೆ ಇನ್ನೂ ಮುಂದೆಯೂ ಸಹ ದೇಶಕ್ಕಾಗಿ ಏನೂ ಬೇಕಾದರೂ ಸಹಾಯ ನೀಡಬಲ್ಲೆ ಎಂದು ಪ್ರಾಮಾಣಿಕವಾಗಿ ಮತ್ತು ನಯವಾಗಿ ಹೇಳಿದ್ದಾರೆ.