ರಸ್ತೆಯಲ್ಲಿಯೇ ಹೆರಿಗೆ, ಹಸುಗೂಸನ್ನು ಕಂಕುಳಲ್ಲಿ ಹೊತ್ತು ಮತ್ತೆ ನಡೆದೇ ಬಿಟ್ಟಳು ವಲಸಿಗ ತಾಯಿ!!

ಕೋರೊನಾ ಇಂದು ಜಗತ್ತಿನಾದ್ಯಂತ ತನ್ನ ಪ್ರಕೋಪವನ್ನು ಬೀರಿದೆ. ಇದರಿಂದ ಇಡೀ ಜಗತ್ತೇ ಅಲ್ಲೋಲ-ಕಲ್ಲೋಲವಾಗಿದೆ. ಪ್ರತಿ ದೇಶದಲ್ಲಿ ಜನರು ಈ ಸೋಂಕಿನಿಂದ ತುಂಬಾ ಗಾಬರಿಯಿಂದ ಬದುಕುತ್ತಿದ್ದಾರೆ ಏಕೆಂದರೆ ಇದುವರೆಗೆ ಈ ವೈರಸ್ ಮೇಲೆ ಯಾವುದೇ ಪ್ರಕಾರದ ಲಸಿಕೆ ಕಂಡು ಹಿಡಿದಿಲ್ಲ ಸುಮಾರು ಪ್ರಯತ್ನ ಪಟ್ಟರು ಸಹ ಯಾವುದೇ ಲಸಿಕೆ ಯಶಸ್ಸು ವಾಗಿಲ್ಲ. ಇದನ್ನು ತಡೆಯುವ ಸಲುವಾಗಿ ಪ್ರತಿಯೊಂದು ದೇಶದಲ್ಲಿ ಲಾಕ್ಡೌನ್ ನಂತಹ ಉಪಕ್ರಮಗಳನ್ನು ಜಾರಿಯಲ್ಲಿ ತಂದಿವೆ. ಆದರೆ ಈ ಲಾಕ್ಡೌನ್ ನಿಂದಾಗಿ ಎಷ್ಟೋ ಜನರು ತಮ್ಮ ದೈನಂದಿನ ಊಟ ಹಾಗೂ ನೀರಿನ ಸಲುವಾಗಿ ಎಷ್ಟೋ ಪರದಾಡುವ ಸಮಯ ಬಂದಂತಾಗಿದೆ. ಪಟ್ಟಣದಲ್ಲಿದ್ದ ವಲಸೆ ಕಾರ್ಮಿಕರು ಲಾಕ್ಡೌನ್ ನಿಂದಾಗಿ ಮರಳಿ ತಮ್ಮ ಊರಿಗೆ ಹೋಗುವ ಸಮಯ ಬಂದಿದೆ ಏಕೆಂದರೆ ತಾವು ಮಾಡುತ್ತಿರುವ ಕೆಲಸಗಳು ಲಾಕ್ಡೌನ್ ನಿಂದಾಗಿ ನಿಂತು ಹೋಗಿವೆ ಅದರಿಂದ ಅವರಿಗೆ ಸಿಗುವ ಸಂಬಳ ನಿಂತು ಹೋಗಿದೆ. ಹೀಗಿರುವಾಗ ಅವರಿಗೆ ತಿನ್ನಲು ಆಹಾರವು ಸಹ ಸಿಗದಂತಾಗಿ ಅವರು ಪಟ್ಟಣದಿಂದ ಮರಳಿ ತಮ್ಮ ಊರಿಗೆ ಹೊರಟಿದ್ದಾರೆ.

ಮೊನ್ನೆ ನಡೆದ ಒಂದು ಘಟನೆ ತುಂಬಾ ಆಶ್ಚರ್ಯ ಹಾಗೂ ದುಃಖದಾಯಕ ವಾಗಿದೆ. ಅದೇನೆಂದರೆ ಲಾಕ್ಡೌನ್ ನಿಂದಾಗಿ ಮರಳಿ ತಮ್ಮ ಊರಿಗೆ ನಡೆದುಕೊಂಡು ಹೋಗಿತ್ತಿರುವಾಗ ಒಬ್ಬ ಗರ್ಭಿಣಿ ಮಹಿಳೆ ನಡುರಸ್ತೆಯಲ್ಲಿಯೇ ಮಗಿವಿಗೆ ಜನ್ಮ ನೀಡಿದ್ದಾಳೆ.

ಲಾಕ್ಡೌನ್ ಸಮಯದಲ್ಲಿ ಒಂದು ಕುಟುಂಬ ನಾಸಿಕ ದಿಂದ ತಮ್ಮ ಊರಿಗೆ ಅಂದರೆ ಮಧ್ಯ ಪ್ರದೇಶಕ್ಕೆ ಏನು ಸಾರಿಗೆಯ ಸೌಲಭ್ಯವಿರದ ಕಾರಣ ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಲು ಪ್ರಾರಂಭಿಸಿದರು ಆದರೆ ವಿಚಿತ್ರವೇನೆಂದರೆ ಅವರಲ್ಲಿ ಎಂಟು ಸಣ್ಣ ಮಕ್ಕಳು ಮತ್ತು ಇಬ್ಬರು ಕಾರ್ಮಿಕರ ಹೆಂಡತಿಯರು ಗರ್ಭಿಣಿ ಇದ್ದರು. ಈ ಕೋರೊನಾಕ್ಕೆ ಹೆದರಿ ತಮ್ಮ ಗರ್ಭಿಣಿ ಹೆಂಡತಿಯರನ್ನು ಕರೆದುಕೊಂಡು ಹಾಗೆ ಹೊರಟಿದ್ದರು. ನಾಸಿಕದಿಂದ ಸುಮಾರು 30 ಕಿಲೋಮೀಟರ್ ದೂರ ನಡೆದುಕೊಂಡು ಬಂದರು ತದನಂತರ ಹಾಗೆ ನಡೆಯುತ್ತ ಹೊರಟರು ಆದರೆ ಅದೇ ಸಂದರ್ಭದಲ್ಲಿ ಶಕುಂತಲಾ ಎಂಬ ಗರ್ಭಿಣಿ ಮಹಿಳೆಗೆ ಹೊಟ್ಟೆಯಲ್ಲಿ ತುಂಬಾ ನೋವು ಮಾಡಲು ಶುರುವಾಯಿತು ನಡು ರಸ್ತೆಯಲ್ಲಿ ಹೊರಟಿದ್ದ ಇವರಿಗೆ ಬದಿಯಲ್ಲಿ ಯಾವುದೇ ಪ್ರಕಾರದ ಆಸ್ಪತ್ರೆ.ಸಹ ಇರಲಿಲ್ಲ ಇನ್ನೇನು ಮಾಡುವದು ಎಂದು ಈ ಮಹಿಳೆಯನ್ನು ಕರೆದುಕೊಂಡು ಬದಿಯ ಮರದ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿಯೇ ಕೂಡಿಸಿದರು.

ಈ ಮಹಿಳೆಯ ನೋವು ಕೇಳಿ ರಸ್ತೆಯ ಮೇಲೆ ಹೊರಟಿದ್ದ ಮಹಿಳೆಯರು ಇವಳ ಕಡೆಗೆ ಬಂದರು ಅವರು ಬಂದ ತಕ್ಷಣವೇ ತಮ್ಮ ಬಳಿಯಲಿದ್ದ ಸೀರೆಗಳನ್ನು ಹೊರಗಡೆ ತಗೆದು ಅವಳಿಗೆ ಮರುವು ಮಾಡಿದರು. ಸುಮಾರು ಅರ್ಧ ಗಂಟೆಯ ನಂತರ ಅವಳು ಮಗುವಿಗೆ ಜನ್ಮ ನೀಡಿದಳು ಇದಕ್ಕೆ ಹೇಳುವದು ದೇವರು ತುಂಬಾ ದೊಡ್ಡವನು ಅಂತ ಅಲ್ಲಿ ಒಂದು ಆಸ್ಪತ್ರೆ ಇಲ್ಲ, ಒಬ್ಬ ಡಾಕ್ಟರ್ ಇಲ್ಲ, ಹೆರಿಗೆಗೆ ಬೇಕಾಗುವ ಯಾವುದೇ ಸೌಲಭ್ಯ ಇಲ್ಲ ಆದರೂ ಸಹ ನಡು ರಸ್ತೆಯಲ್ಲಿ ಒಂದು ಮಗುವಿಗೆ ಯವುದೇ ತೊಂದರೆ ಇಲ್ಲದೆ ಜನ್ಮ ನೀಡಿದಳು ಈ ತಾಯಿ. ಸೀರೆಗಳ ಮಧ್ಯದಲ್ಲಿ ಜನ್ಮ ನೀಡಿದ ತಾಯಿಯನ್ನು ಕಂಡು ಆಕೆಯ ಪತಿ ತುಂಬಾ ಖುಷಿ ಪಟ್ಟ ಆದರೆ ಅವನಿಗೆ ಗೊತ್ತಿತ್ತು ಇನ್ನು ಇದಕ್ಕಿಂತ ದೊಡ್ಡ ಸಮಸ್ಯೆ ಮುಂದಿದೆ ಅಂತ. ಹೆರಿಗೆಯ ನಂತರ ಮಗುವಿಗೆ ಯಾವುದೇ ಚಿಕಿತ್ಸೆ ಇಲ್ಲ, ತಾಯಿಗೆ ಯಾವುದೇ ಚಿಕಿತ್ಸೆ ಇಲ್ಲ ಆದರೂ ಆ ಮಹಿಳೆ ಎರಡು ಗಂಟೆಗಳ ವರೆಗೆ ವಿಶ್ರಾಂತಿ ತಗೆದುಕೊಂಡು ಮಗುವಿಗೆ ಹಾಲುಣಿಸಿ ಮತ್ತೆ ಹೊರಡಲು ತಯಾರಾದಳು ಒಂದು ಕಡೆ ಮಗುವಿಗೆ ಜನ್ಮ ನೀಡಿದ್ದರಿಂದ ಖುಷಿ ಪಡುವುದೋ ಇನ್ನೊಂದು ಕಡೆ ಮನೆಗೆ ಹೇಗೆ ಹೋಗುವದೋ ಎಂದು ಚಿಂತೆ ಪಡಬೇಕೋ ಏನೂ ಅರಿಯದೆ ಈ ಮಹಿಳೆ ಮತ್ತೆ ಹಸುಳೆಯನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು ಹೊರಡಲು ಪ್ರಾರಂಭಿಸಿದರು.

ಇವರಿಗೆ ಮಹಾರಾಷ್ಟ್ರದ ನಾಸಿಕದಿಂದ ಮಧ್ಯಪ್ರದೇಶದ ಸೆಂಧವಾ ಊರಿಗೆ ಹೋಗುವದಿತ್ತು. ಈ ಮಹಿಳೆ ಮಹಾರಾಷ್ಟ್ರದ ಪೀಪರಿ ಗಾವ ನಲ್ಲಿ ಜನ್ಮ ನೀಡಿದ್ದಾಳೆ. ತನ್ನ ಹಸುಗುಸನ್ನು ಹೊತ್ತಿಕೊಂಡು ಸುಮಾರು ಹನ್ನೆರಡು ದಿವಸಗಳ ನಂತರ ತಮ್ಮ ಊರಿಗೆ ತಲುಪಲು ಇನ್ನೇನು ಸ್ವಲ್ಪ ದೂರವಿದ್ದರು ಅಷ್ಟರಲ್ಲಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಬಾರ್ಡರ್ ನಲ್ಲಿ ಕಾರ್ಯನಿರತವಾಗಿದ್ದ ಪೊಲೀಸ್ ಅಧಿಕಾರಗಳು ಇವರನ್ನು ನೋಡಿದರು. ತದನಂತರ ಅವರನ್ನು ವಿಚಾರಣೆ ಮಾಡಿದರು ನಡೆದ ಘಟನೆಯನ್ನು ಕೇಳಿದ ಕೂಡಲೇ ಅಲ್ಲಿದ್ದ ಅಧಿಕಾರಿ ವರ್ಗದವರು ಇವರನ್ನು ಅಲ್ಲಿಯೇ ಕ್ವಾರಂಟೈನ್ ಸೆಂಟರ್ ತಯಾರಿಸಿ ಅಲ್ಲಿ ಉಳಿದುಕೊಳ್ಳಲು ತಿಳಿಸಿದರು. ತದನಂತರ ಮಗುವಿಗೆ ಜನ್ಮ ನೀಡಿದ ತಾಯಿ ಮತ್ತು ಅವಳ ಜೊತೆಗಿದ್ದ 8 ತಿಂಗಳ ಗರ್ಭಿಣಿ ಮಹಿಳೆಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಿದರು.

ಈ ನಡೆದ ಘಟನೆಯಲ್ಲ ಆಕೆಯ ಪತಿ ಪೊಲೀಸರಿಗೆ ತಿಳಿಸಿದ್ದಾನೆ. ನಾಸಿಕ ದಿಂದ ತನ್ನ ಊರಿಗೆ ಬರುವಾಗ ಬಂದಂತಹ ಕಷ್ಟಗಳು ವಿವರಿಸಿದಾಗ ಅಲ್ಲಿ ಕಾರ್ಯರತವಾಗಿದ್ದ ಪೊಲೀಸ್ ಅಧಿಕಾರಿ ಧನಗರ್ ಅವರು ಈ ಕುಟುಂಬಕ್ಕೆ ತಮ್ಮ ಊರಿಗೆ ಸುಖಕರವಾಗಿ ತಲುಪಿಸಲು ಅಲ್ಲಿದ್ದ ಅಧಿಕಾರಿಗಳಿಗೆ ಆದೇಶ ನೀಡಿದರು. ಈಗ ಅವರ ಕುಟುಂಬ ತುಂಬಾ ಸಂತೋಷದಿಂದ ಜೀವನ ನಡೆಸುತ್ತಿದೆ. ಕೋರೊನಾ ವೈರಸ್ ನಷ್ಟ ವಾಗುವ ವರೆಗೆ ಇನ್ನು ಏನೇನು ಕಷ್ಟ ಪಡಬೇಕಾಗುವದು ಎಂಬುದು ಕಾದು ನೋಡಬೇಕು. ಅದಕ್ಕೆ ಹೇಳೋದು ನಿಮ್ಮ ಮನೆಯಲ್ಲಿ ನೀವು ಸುರಕ್ಷಿತ ವಾಗಿದ್ದೀರಿ, ಅತ್ಯವಶ್ಯಕ ಕೆಲಸ ವಿದ್ದರೆ ಮಾತ್ರ ಹೊರಗಡೆ ಬನ್ನಿ.