ರಸ್ತೆಯ ಬದಿಗೆ ನಿಸರ್ಗದ ಮಡಿಲಲ್ಲಿ, ಕಾರಿನ ಪಕ್ಕ ನಿಂತು ಕಚ್ಚಾ ಬಾದಾಮ್ ಹಾಡಿನ ಮೇಲೆ ಬಳುಕಿದಳು ಭರ್ಜರಿಯಾಗಿ ಯುವತಿ! ವಿಡಿಯೋ ಆಯಿತು ವೈರಲ್…

ಕಚ್ಚಾ ಬಾದಾಮ್ ಹಾಡಿಗೆ ಸದ್ಯಕ್ಕಂತೂ ಯಾವುದೇ ಪರಿಚಯದ ಅಗತ್ಯವಿಲ್ಲ. ಕಾರಣ ಇನ್ಸ್ಟಾಗ್ರಾಮ್ ನಲ್ಲಿ ಈ ಹಾಡಿನ ಮೇಲೆ ಇಲ್ಲಿಯವರೆಗೆ ಎಲ್ಲಕ್ಕೂ ಹೆಚ್ಚು reels ಗಳು ತಯಾರಾಗಿವೆ ಎನ್ನಬಹುದು. ಬಂಗಾಳದ ಕಡಲೆಕಾಯಿ ಮಾರಾಟ ಮಾಡುವವನು ಹಾಡಿದ ಈ ಹಾಡು ಅಷ್ಟೊಂದು ಇಂಟರ್ನೆಟ್ ನಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಈ ಹಾಡು ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಮನುಷ್ಯನಿಗೂ ಮೋಡಿ ಮಾಡುವದರಲ್ಲಿ ಯಶಸ್ವಿಯಾಗಿದೆ.

ಪ್ರವಾಸ ಮಾಡುವಾಗ ಮಧ್ಯೆ ಸ್ವಲ್ಪ ಬ್ರೇಕ್ ತೆಗೆದುಕೊಂಡು ಈಗ ಇದೇ ಹಾಡಿಗೆ ಯುವತಿಯೊಬ್ಬಳು ರಸ್ತೆಯ ಬದಿಗೆ ಕಾರು ನಿಲ್ಲಿಸಿ ಅಲ್ಲಿಯೇ ಹೆಜ್ಜೆ ಹಾಕಿ ಬಳುಕಿದ್ದಾಳೆ. ಆಕೆಯ ಈ ಬಳುಕಾಟ ನೇಟಿಜನ್ಸ್ ಗಳಿಗೆ ತುಂಬಾನೇ ಹಿಡಿಸಿದೆ. ಇನ್ನೇನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಸಮಯ ಬೇಕೆ? ಶೇರ್ ಮೇಲೆ ಶೇರ್ ಆಗುವದಷ್ಟೇ ತಡ ವಿಡಿಯೋ ಭರ್ಜರಿಯಾಗಿ ಮೂವ್ ಆಗುತ್ತಿದೆ.

ಇಲ್ಲಿಯವರೆಗೆ ಸೆಲೆಬ್ರಿಟಿಗಳು ಮತ್ತು ಸ್ಪೋರ್ಟ್ಸ್ ಪರ್ಸ್ ನ್ಯಾಲಿಟಿ ಗಳು ಕಚ್ಚಾ ಬಾದಾಮ್ ಹಾಡಿನ ಮೇಲೆ ಡ್ಯಾನ್ಸ್ ಮಾಡುವದನ್ನು ನೋಡಿ ಸಾಕಾಗಿರಬೇಕು ಈಗ ಸಾಮಾನ್ಯ ಯುವತಿಯೊಬ್ಬಳು ಭರ್ಜರಿಯಾಗಿ ಕಚ್ಚಾ ಬಾದಾಮ್ ಹಾಡಿನ ಮೇಲೆ ಮೈ ಬಳುಕಿಸಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾಳೆ.

ವಿಡಿಯೋ ನೋಡಿ

 

View this post on Instagram

 

A post shared by bharati hegde (@bharati_hegde_)

ಪ್ರಸ್ತುತ ವಿಡಿಯೋವನ್ನು ಭಾರತಿ ಹೆಗಡೆ ಹೆಸರಿನ ಅಕೌಂಟ್ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ನ್ಯೂಸ್ ಬರೆಯುವ ಹೊತ್ತಿಗೆ ಈ ವೀಡಿಯೋಗೆ ಇಲ್ಲಿವರೆಗೆ ಸುಮಾರು 3 ಲಕ್ಷಗಳ ಸಮೀಪ ವೀಕ್ಷಣೆ ಸಿಕ್ಕಿದೆ. ಮತ್ತು ಅಷ್ಟೇ ಲೈಕ್ಸ್ ಗಳು ಸಹ ಬಂದಿವೆ.

ಇನ್ನು ಈ ಹಾಡಿನ ಮತ್ತು ಗಾಯಕನ ಬಗ್ಗೆ ಹೇಳಬೇಕಾದರೆ, ಈ ಹಾಡು ಹಾಡಿದ ವ್ಯಕ್ತಿ ಯಾವುದೇ ಪ್ರಸಿದ್ಧ ಗಾಯಕ ಅಥವಾ ಸೆಲೆಬ್ರಿಟಿ ಇರದೆ ರಸ್ತೆಯ ಮೇಲೆ ಹಾಡು ಹಾಡಿಕೊಂಡು ಕಡಲೆಕಾಯಿ ಮಾರುವ ಸಾಮಾನ್ಯ ವ್ಯಕ್ತಿಯಾಗಿದ್ದಾನೆ. ಆತನ ಹೆಸರು ಭುವನ್ ಬದ್ಯಾಕರ್ ಅಂತ ಇದೆ. ಈತನು ಹಾಡುತ್ತಾ ತನ್ನ ಕಸಬನ್ನು ಮಾಡಿಕೊಂಡಿದ್ದಾಗ ಯಾವನೋ ಒಬ್ಬನು ಆತನ ಹಾಡಿನ ಯೂನಿಕ್ ಸ್ಟೈಲ್ ನೋಡಿ ವಿಡಿಯೋ ಮಾಡಿ ಇಂಟರ್ನೆಟ್ ನಲ್ಲಿ ವೈರಲ್ ಮಾಡಿದ್ದಾನೆ. ಇದರ ನಂತರ ಈ ಹಾಡಿನ ಮೇಲೆ ಸಾಮಾನ್ಯ ಜನರು ಮತ್ತು ಸೆಲೆಬ್ರಿಟಿಗಳು reels ಮತ್ತು ಡ್ಯಾನ್ಸ್ ಮಾಡಿ ಭುವನ್ ಗೆ ಒಂದೇ ರಾತ್ರಿಯಲ್ಲಿ ಪ್ರಸಿದ್ಧಿಯನ್ನು ತಂದುಕೊಟ್ಟು ಆತನ ಜೀವನವನ್ನೇ ಬದಲಾಯಿಸಿದರು.