ರಸ್ತೆ ಬದಿ ನಗ್ನ ಫೋಟೋಶೂಟ್ ಮಾಡುತ್ತಿರುವ ಮಾಡಲ್ ಗೆ ಮಾಸ್ಕ್ ಧರಿಸಿಲ್ಲವೆಂದು ದಂಡ ವಿಧಿಸಿದ ಪೊಲೀಸರು!

ಲಾಕ್ ಡೌನ್ ನನ್ನು ಉಲ್ಲಂಘಿಸಿ ಮಾರಿಯಾ ಪ್ರಸಿದ್ಧ ಫುಟ್ ಬಾಲ್ ಸ್ಟೇಡಿಯಂನಲ್ಲಿ ಅನುಮತಿ ಇಲ್ಲದೆ ನಗ್ನ ಫೋಟೋಶೂಟ್ ನಡೆಸಿದ್ದಳು. ಅಷ್ಟರಲ್ಲಿ ಅಲ್ಲಿಗೆ ಪೊಲೀಸರು ಬಂದು ಅವರಿಗೆ ಈ ರೀತಿ ಫೋಟೋಶೂಟ್ ಮಾಡಲು ನಿರಾಕರಿಸಿದರು. ಈ ಸಂಪೂರ್ಣ ಘಟನೆಯಲ್ಲಿ ಪೊಲೀಸರು ಅವರಿಗೆ ಬಟ್ಟೆ ತೊಟ್ಟುಕೊಳ್ಳದ್ದಕ್ಕಾಗಿ ಅಲ್ಲದೆ ಬದಲಾಗಿ ಮಾಸ್ಕ್ ಧರಿಸದ್ದಕ್ಕಾಗಿ ದಂಡವನ್ನು ಹಾಕಿದ್ದಾರೆ.

ಮಾಸ್ಕೊ: ಯಾವತ್ತೂ ವಿವಾದದವನ್ನೇ ಹುಟ್ಟು ಹಾಕುವ ರಶಿಯಾದ ‘ನಗ್ನ ಮಾಡೆಲ್’ ಇವಾ ಮಾರಿಯಾ ಮತ್ತೆ ಚರ್ಚೆಯಲ್ಲಿ ಬಂದಿದ್ದಾಳೆ. ಈಕೆ ಯಾವಾಗಲೂ ಸ್ಟೇಡಿಯಂ, ಪಬ್ಲಿಕ್ ಪ್ಲೇಸ್, ಅಥವಾ ಧಾರ್ಮಿಕ ಸ್ಥಳಗಳಲ್ಲಿ ನಗ್ನ ಫೋಟೋಶೂಟ್ ಮಾಡುವ ಸಲುವಾಗಿ ವಿವಾದ ಸೃಷ್ಟಿಸಿದ್ದಾಳೆ. ಈ ಸಲ ಲಾಕ್ ಡೌನ್ ಉಲ್ಲಂಘಿಸಿ ಸ್ಟೇಡಿಯಂ ನಲ್ಲಿ ಅನುಮತಿ ಇಲ್ಲದೆ ಫೋಟೋಶೂಟ್ ನಡೆಸಿದಾಗ ಪೊಲೀಸರು ಬಂದು ಫೈನ್ ಹಾಕಿದ್ದಾರೆ. ಇದರಲ್ಲಿ ತಮಾಷೆಯ ವಿಷಯವೇನೆಂದರೆ, ಪೊಲೀಸರು ಆಕೆ ಬಟ್ಟೆಯನ್ನು ಧರಿಸದೆ ಹಾಗೆಯೇ ನಗ್ನ ಶೂಟ್ ಮಾಡಿದ್ದಕ್ಕಾಗಿ ಅಲ್ಲದೆ ಮುಖಕ್ಕೆ ಮಾಸ್ಕ್ ಧರಿಸದ ಕಾರಣದಿಂದಾಗಿ ದಂಡ ವಿಧಿಸಿದ್ದಾರೆ.

ಡೇಲಿ ಸ್ಟಾರ್ ನ್ಯೂಜ್ ಪ್ರಕಾರ ಇವಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಗೆ ಒಳಗಾಗಿದ್ದಾಳೆ. ಮಾರಿಯಾಳ ಜೊತೆಗೆ ನಡೆದ ಈ ಘಟನೆಯಿಂದ ನೆಟ್ಟಿಗರು ಪೊಲೀಸರಿಗೆ ಟ್ರೋಲ್ ಮಾಡುತ್ತಿದ್ದಾರೆ. ಸ್ಟೇಡಿಯಂ ಹೊರಗೆ ಶೂಟ್ ನಡೆದಾಗ ಪೊಲೀಸರು ಅಲ್ಲಿ ಹೋದಾಗ ಫೋಟೋ ಗ್ರಾಫರ್ ಜೊತೆಗೆ ವಾದವಿವಾದವಾಯಿತು. ಅಲ್ಲಿದ್ದವರೆಲ್ಲ ನಡೆದ ಘಟನೆಯಿಂದ ಸ್ವಲ್ಪ ಗಲಿಬಿಲಿಗೊಂಡರು. ಜನರ ಪ್ರಕಾರ ‘ಮಾಡೆಲ್ ಏನು ತೊಟ್ಟಿರಲಿಲ್ಲವಾದರೂ ಬರೀ ಫೇಸ್ ಮಾಸ್ಕ್ ಧರಿಸದ ಕಾರಣವನ್ನು ಮುಂದೆ ಮಾಡಿ ದಂಡ ವಿಧಿಸುವದು ಹಾಸ್ಯಾಸ್ಪದವಾಗಿದೆ’ ಎಂದಿದ್ದಾರೆ.

ರಶಿಯಾದಲ್ಲಿ ಮನೆಯಿಂದ ಹೊರಗೆ ಬೀಳುವಾಗ ಫೇಸ್ ಮಾಸ್ಕ್ ಧರಿಸುವದು ಕಡ್ಡಾಯವಾಗಿದೆ.

ರಶಿಯಾದಲ್ಲಿ ಕೊರೊನ ಸಂಕ್ರಮಣದ ಲಕ್ಷಾವಧಿ ಕೇಸ್ ಗಳು ಹೊರಬಂದ ನಂತರ ಮೇ 12 ರಿಂದ ಮನೆಯಿಂದ ಹೊರಗೆ ಬಿದ್ದರೆ ಮಾಸ್ಕ್ ಧರಿಸುವದು ಕಡ್ಡಾಯ ಮಾಡಿದ್ದಾರೆ. ಪೊಲೀಸರಿಗೆ ಟ್ರೋಲ್ ಮಾಡಿದ ನಂತರ ಪ್ರಸ್ತುತ ವಿಷಯದ ಬಗ್ಗೆ ಪೊಲೀಸ್ ವಕ್ತಾರ ಅರ್ಥಿಯೊಮ್ ಕೋನೋವಾಲೆಕೋ ತಮ್ಮ ವಿವರಣೆಯಲ್ಲಿ ಮಾಡೆಲ್ ಳಿಂದ ಮಾಸ್ಕ್ ಧರಿಸದ ಕಾರಣ 347 ರುಬಲ್ ದಂಡ ವಸೂಲಿ ಮಾಡಲಾಗಿದೆ. ಆದರೆ ನಗ್ನ ಫೋಟೋಶೂಟ್ ಮಾಡುವದು ಅಪರಾಧದ ಶ್ರೇಣಿಯಲ್ಲಿ ಬರುವದಿಲ್ಲವಾದ್ದರಿಂದ ಅದಕ್ಕೆ ಸಂಬಂಧಿಸಿದಂತೆ ಯಾವುದೇ ಕಾರ್ಯಾಚರಣೆಯನ್ನು ಮಾಡಿಲ್ಲ. ಕೊರೊನ ಸಂದರ್ಭದಲ್ಲಿ ಈ ತರಹದ ತಪ್ಪು ಸಂದೇಶ ಕೊಡುವದರಿಂದ ಪಬ್ಲಿಕ್ ಡಿಸೆನ್ಸಿ ಆಕ್ಟ್ ಪ್ರಕಾರ ಅವರ ಮೇಲೆ ಈ ಕಾನೂನು ಕ್ರಮ ತೆಗೆದುಕೊಳ್ಳಲಾಯಿತು.

ಮಾಡೆಲ್ ಮಾರಿಯಾಳ ಪ್ರಕಾರ, ಇಷ್ಟೊಂದು ಸಣ್ಣ ವಿಷಯಕ್ಕೆ ಇಷ್ಟು ದೊಡ್ಡ ರಾದ್ಧಾಂತ ಮಾಡುತ್ತಾರೆಂದು ನನಗನಿಸಿರಲಿಲ್ಲ. ನಾನು ಇದೇ ಪಟ್ಟಣದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅನೇಕ ಸಲ ನಗ್ನ ಫೋಟೋಶೂಟ್ ಮಾಡಿದ್ದೇನೆ ಮತ್ತು ಇದು ಕಾನೂನು ಬಾಹಿರವಾಗಿಲ್ಲ. ಇದೇ ತರ ಬೇರೊಬ್ಬ ಮಾಡೆಲ್ ಳಾದ ಮಾರಿಸಾ ಪಾಪೆನ್ ಳು ಸಹ ತುರ್ಕಿಯ ಸುಪ್ರಸಿದ್ಧ ಮಶೀದಿಯಲ್ಲಿ ಫೋಟೋಶೂಟ್ ಮಾಡಿ ವಿವಾದದಲ್ಲಿ ಸಿಕ್ಕಿ ಹಾಕಿಕೊಂಡಿದ್ದಳು. ಪಾಪೆನ್ ಳು ಸಹ ಮಾರಿಯಾಳ ಹಾಗೆ ನಗ್ನ ಫೋಟೋಶೂಟ್ ಮಾಡುವಲ್ಲಿ ಪ್ರಸಿದ್ಧಿ ಪಡೆದಿದ್ದಾಳೆ.