ರಾತ್ರಿ ಮಲಗುವ ಮುಂಚೆ ಇದಿಷ್ಟು ಮಾಡಿ ಸಾಕು, ಕೇವಲ 15 ದಿನಗಳಲ್ಲೇ ಅದ್ಭುತ ಬದಲಾವಣೆ ಅನುಭವಿಸುರಿ..!

ತ್ವಚೆಯ ಕಾಂತಿಯು ವ್ಯಕ್ತಿ ನಿರೋಗಿ ಮತ್ತು ಆನಂದವಾಗಿರುವ ಲಕ್ಷಣಗಳನ್ನು ತೋರಿಸುತ್ತದೆ. ಮುಖದ ಮೇಲಿನ ತ್ವಚೆ ಕಾಂತಿಯುತವಾಗಿ ಕಾಣಬೇಕೆಂದು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ದಿನವೆಲ್ಲ ನಮ್ಮ ತ್ವಚೆ ಬಿಸಿಲು, ಧೂಳು ಮತ್ತು ಪ್ರದೂಷಣೆಯನ್ನು ಫೇಸ್ ಮಾಡುತ್ತದೆ. ಆದರೆ ದೇಹವು ರಾತ್ರಿ ಇದನ್ನೆಲ್ಲ ತುಂಬಿ ತೆಗೆಯುತ್ತದೆ. ಮತ್ತು ಮುಖಕ್ಕೆ ಹೊಸ ಕಾಂತಿಯನ್ನು ನೀಡಲು ಪ್ರಯತ್ನಿಸುತ್ತದೆ.

ಎಷ್ಟೋ ಸಲ ನಾವು ಮುಖದ ಕಾಳಜಿಯನ್ನು ತೆಗೆದುಕೊಳ್ಳಲು ಮರೆತುಬಿಡುತ್ತೇವೆ. ಒಂದು ವೇಳೆ ನಾವು ರಾತ್ರಿ ಮುಖದ ಮೇಕಪ್ ಮತ್ತು ತ್ವಚೆಗೆ ಪೋಷಣೆಯನ್ನು ನೀಡದೆ ಹಾಗೆಯೇ ಮಲಗಿದರೆ ನಮ್ಮ ತ್ವಚೆ ನಿರ್ಜೀವವಾಗುವಾದರ ಜೊತೆಗೆ ಕಾಂತಿಹೀನವಾಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ಕೆಲವೊಂದು ಉಪಾಯಗಳನ್ನು ಅಳವಡಿಸಿಕೊಂಡರೆ ಮುಖದ ತ್ವಚೆಯು ಕಾಂತಿಯುತವಾಗಿ ಹೊಳೆಯಲು ಪ್ರಾರಂಭಿಸುತ್ತದೆ. ಆ ಉಪಾಯಗಳು ಈ ಕೆಳಗಿನಂತಿವೆ.

ಮೇಕಪ್ ತೊಳೆದುಕೊಂಡು ಮಲಗಿ:- ಮಲಗುವ ಮುನ್ನ ಮುಖದ ಮೇಲಿನ ಮೇಕಪ್ ಲೇಪವನ್ನು ತೆಗೆದು ತೊಳೆದುಕೊಂಡು ಮಲಗುವುದು ತುಂಬಾ ಮುಖ್ಯವಾಗಿದೆ. ಈ ಮೇಕಪ್ ನ್ನು ತೆಗೆಯುವ ಸಲುವಾಗಿ ಮೆತ್ತಗಿನ ಮೇಕಪ್ ರಿಮೂವರ್ ಅಥವಾ ಶುದ್ಧ ನೀರಿನ ಉಪಯೋಗ ಮಾಡಿಕೊಳ್ಳಬಹುದು. ಇದು ಮುಖದ ಮೇಲಿನ ನಿರ್ಜೀವ ತ್ವಚೆಯನ್ನು ತೆಗೆದುಹಾಕುತ್ತದೆ. ಇದರಿಂದ ಹೊಸ ಕಾಂತಿಯುತ ತ್ವಚೆ ಬರಲು ಸಹಾಯವಾಗುತ್ತದೆ.

ಮುಖಕ್ಕೆ ಸಾಕಷ್ಟು ಪೋಷಣೆಯನ್ನು ನೀಡಿ:- ಮಲಗುವ ಮುನ್ನ ಮುಖಕ್ಕೆ ಸಾಕಷ್ಟು ಪೋಷಣೆಯನ್ನು ನೀಡಲು ಬದಾಮಿಯನ್ನು ತಿನ್ನಬೇಕು. ಅದರ ಜೊತೆಗೆ ಎಂಟಿ ಎಕ್ಸಿಡೆಂಟ್ ದಿಂದ ಸಮೃದ್ಧವಾಗಿರುವ ಸ್ಟ್ರಾಬೆರಿ ಮತ್ತು ಬ್ಲೂಬೆರಿ ಹಣ್ಣುಗಳನ್ನು ತಿನ್ನಬೇಕು. ಈ ರೀತಿಯ ಆಹಾರವನ್ನು ತಿನ್ನುವುದರಿಂದ ಮುಖಕ್ಕೆ ಕಾಂತಿ ಲಭಿಸುತ್ತದೆ.

ಮುಖದ ಮೇಲಿನ ತೇವಾಂಶದ ಕಾಳಜಿ ತೆಗೆದುಕೊಳ್ಳಿ:- ಮುಖದ ಮೇಲೆ ತೇವಾಂಶವು ಸತತವಾಗಿ ಇರುವುದಕ್ಕಾಗಿ ನೀರಿಗಿಂತಲೂ ಬೇರೊಂದು ಒಳ್ಳೆಯ ವಸ್ತು ಯಾವುದಿಲ್ಲ. ಆದ್ದರಿಂದ ಸಾಯಂಕಾಲದ ಹೊತ್ತಿನಲ್ಲಿ ಸಾಕಷ್ಟು ನೀರನ್ನು ಕುಡಿಯಬೇಕು. ಇದಕ್ಕಾಗಿ ಒಂದು ನೈಟ್ ಕ್ರೀಮ್ ಸಹ ಉಪಯೋಗಿಸಬಹುದು. ಅದರಲ್ಲಿ ಹಾಯ್ಲ್ಯುರಾನಿಕ್ ಎಸಿಡ್ ಇದ್ದರೆ ಒಳ್ಳೆಯದು. ಇದು ಮುಖದ ಮೇಲಿನ ರಂದ್ರಗಳನ್ನು ತೆರೆದಿಡಲು ಮತ್ತು ತೇವಾಂಶ ಹಿಡಿದಿಡಲು ಸಹಾಯ ಮಾಡುತ್ತದೆ.

ಯೋಗ ಮಾಡುವುದು:- ಮಲಗುವ ಮುನ್ನ ಸ್ವಲ್ಪ ಸಮಯ ಯೋಗ ಮಾಡಿ ಮಲಗಬೇಕು. ಇದರಿಂದ ಮನಸ್ಸಿಗೆ ಶಾಂತಿ ಲಭಿಸುವುದು. ದೇಹಕ್ಕೆ ವಿಶ್ರಾಂತಿ ಸಿಗುವುದು. ಹೀಗೆ ಮಾಡುವುದರಿಂದ ಮುಖಕ್ಕೆ ಗ್ಲೋ ಸಿಗುವುದರ ಜೊತೆಗೆ ಮುಂಜಾನೆ ತ್ವಚೆಯು ತಾಜಾತನದಿಂದ ಕೂಡಿರುತ್ತದೆ.

ನಿಗದಿಪಡಿಸಿದ ಸಮಯಕ್ಕೆ ಮಲಗಿ:- ರಾತ್ರಿ ನಿದ್ರೆ ಸರಿಯಾಗಿ ಆಗದಿದ್ದರೆ ಮುಖದ ಮೇಲೆ ಅದರ ದುಷ್ಪರಿಣಾಮ ಕಂಡುಬರುತ್ತದೆ. ಒಂದು ವೇಳೆ ನಿದ್ರೆ ಸರಿಯಾಗಿ ಆಗದಿದ್ದರೆ ಮುಖದ ಕಾಂತಿಗಾಗಿ ಯಾವುದೇ ಉಪಾಯ ಕೆಲಸಕ್ಕೆ ಬರುವುದಿಲ್ಲ. ದಿನಂಪ್ರತಿ ಏಳರಿಂದ ಎಂಟು ಗಂಟೆ ನಿದ್ರೆ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಒಂದು ಸಂಶೋಧನೆಯ ಪ್ರಕಾರ ನಿದ್ರೆಯ ನಿಗದಿತ ಸಮಯ ನಮ್ಮ ತ್ವಚೆಗೆ ಮತ್ತು ಅದರ ಕಾರ್ಯಕ್ಕೆ ತುಂಬಾ ಲಾಭಕಾರಿ ಆಗಿದೆ. ನಮ್ಮ ತ್ವಚೆಯ ದುರಸ್ತಿಯ ಕೆಲಸವನ್ನು ದೇಹವು ರಾತ್ರಿ 11 ರಿಂದ ಮಧ್ಯರಾತ್ರಿಯವರೆಗೆ ಮಾಡುತ್ತಿರುತ್ತದೆ ಎಂಬುದು ಈ ಸಂಶೋಧನೆಯಲ್ಲಿ ಕಂಡುಬಂದಿದೆ.