ರಿಯಲ್ ಟಾಮ್ & ಜೆರ್ರಿ; ಸಾವಿನ ದವಡೆಯಲ್ಲಿ ಸಿಕ್ಕರೂ ಬೆಕ್ಕಿಗೆ ಪೆದ್ದು ಮಾಡಿ ಪಲಾಯನ ಮಾಡಿದ ಜಾಣ ಇಲಿಯ ವೈರಲ್ ವಿಡಿಯೋ…

ಟಾಮ್ ಅಂಡ್ ಜೆರ್ರಿ ಕಾಮಿಡಿ ಶೋ ನೋಡದವರು ಯಾರು? ಈ ಟಿವಿ ಶೋ ಎಲ್ಲರಿಗೂ ಸಾಕಷ್ಟು ಇಷ್ಟವಾಗುತ್ತದೆ. ಮಕ್ಕಳು ಬಿಡಿ, ದೊಡ್ಡವರು ಸಹ ಇದನ್ನು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಈ ಶೋನಲ್ಲಿ ಪ್ರತಿಸಲ ಜೆರ್ರಿ (ಇಲಿಯು) ಟಾಮ್ ಗೆ (ಬೆಕ್ಕಿಗೆ) ಪೆದ್ದನನ್ನಾಗಿ ಮಾಡಿ ತನ್ನ ಜಾಣತನವನ್ನು ಮೆರೆಯುತ್ತದೆ. ಈ ಶೋ ಇಷ್ಟಪಡುವವರಿಗೆ ಮುಖ್ಯವಾಗಿ ಇಷ್ಟವಾಗುವುದು ಇದೇ ದೃಶ್ಯ. ಇದನ್ನು ನೋಡುವಾಗ ಮಕ್ಕಳ ಜೊತೆಗೆ ದೊಡ್ಡವರು ಸಹ ಬಿದ್ದು ಬಿದ್ದು ನಗುತ್ತಾರೆ. ಈಗ ಸರಿಯಾಗಿ ಇದೇ ರೀತಿಯ ಇನ್ಸಿಡೆಂಟ್ ಬೆಕ್ಕು ಮತ್ತು ಇಲಿಯ ನಡುವೆ ರಿಯಲ್ ನಲ್ಲಿ ನಡೆದಿದೆ ಎಂದರೆ ನೀವು ವಿಶ್ವಾಸವಿಡಲಿಕ್ಕಿಲ್ಲ.

ಆದರೆ ಪ್ರಸ್ತುತ ವಿಡಿಯೋ ಒಂದರಲ್ಲಿ ಸೇಮ್ ಟು ಸೇಮ್ ಟಾಮ್ ಅಂಡ್ ಜೆರ್ರಿ ಟಿವಿ ಶೋ ತರವೇ ರಿಯಲ್ ಆಗಿ ನಡೆದಿದೆ. ವಿಡಿಯೋದಲ್ಲಿ ಕಂಡುಬರುವ ಹಾಗೆ ಒಂದು ಇಲಿಯು ಗೋಡೆಯ ಮೇಲೆ ಕುಳಿತಿರುತ್ತದೆ. ಅದನ್ನು ಗಮನಿಸಿದ ಬೆಕ್ಕು ಗೋಡೆಯ ಮೇಲೆ ಜಂಪ್ ಮಾಡಿ ಅದನ್ನು ಹಿಡಿಯುತ್ತದೆ. ಗೋಡೆಯ ಮೇಲಿನ ಇಲಿಯನ್ನು ಬೆಕ್ಕು ಕ್ಯಾಚ್ ಮಾಡಿ ಹಿಡಿದು ಕೆಳಗೆ ಹಾರುವುದರಲ್ಲಿ ಅದರ ಕೈಯಿಂದ ಇಲಿಯು ಬಿಡಿಸಿಕೊಂಡು ಓಡುವದರಲ್ಲಿ ಸಫಲವಾಗುತ್ತದೆ. ಆದರೂ ಬೆಕ್ಕು ಮತ್ತೆ ಅದನ್ನು ಬೆನ್ನಟ್ಟಿ ಇಳಿಗೆ ಇಕ್ಕಟ್ಟಿನಲ್ಲಿ ಸಿಲುಕಿಸಿ ನಿಲ್ಲಿಸುತ್ತದೆ. ಆಗ ಇಲಿಯು ಇನ್ನೇನು ನನ್ನ ಕತೆ ಮುಗಿಯಿತೆಂದು ಬೆಕ್ಕಿನ ಮುಂದೆ ಕೈಜೋಡಿಸಿ ನಿಂತಿರುವ ಹಾಗೆ ಮುಗ್ಧವಾಗಿ ನಿಂತಿದೆ. ಆದರೆ ಬೆಕ್ಕು ಮಂಗವಾಗಿದ್ದು ಅಲ್ಲಿಯೇ. ಇಲಿಯು ಹೇಗೂ ನನ್ನ ಹಿಡಿತದಲ್ಲಿ ಸಿಕ್ಕಿದೆ ಎಂದು ತಿಳಿದು ಬೆಕ್ಕು ಒಂದೇ ಒಂದು ಕ್ಷಣ ಇಲಿಯ ಮೇಲಿನ ದೃಷ್ಟಿ ತೆಗೆದು ಅತ್ತಿತ್ತ ನೋಡುವಷ್ಟರಲ್ಲಿ, ತಪ್ಪಿಸಿಕೊಳ್ಳಲು ಇದೇ ಯೋಗ್ಯ ಸಮಯವೆಂದು ತಿಳಿದ ಇಲಿ ಅಲ್ಲಿಂದ ಕ್ಷಣದಲ್ಲಿ ಮಾಯವಾಗಿದೆ.

ವಿಡಿಯೋ ನೋಡಿ

ಈ ದೃಶ್ಯ ನೋಡಲು ನಿಜವಾಗಿಯೂ ತುಂಬಾ ತಮಾಷೆಯದ್ದಾಗಿದೆ. ಈ ದೃಶ್ಯವನ್ನು ನೋಡಿದಾಗ ಟಾಮ್ ಅಂಡ್ ಜೆರ್ರಿ ನೆನಪಾಗುವುದು ನಿಶ್ಚಿತ. ಈ ವೀಡಿಯೋವನ್ನು ‘ನೇಚರ್ ವೈಲ್ಡ್ಸ್’ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.