ರಿಷಬ್ ಪಂತ್ ಊರ್ವಶಿ ರೌತೇಲಾಗೆ ವಾಟ್ಸಾಪ್ ಲ್ಲಿ ಬ್ಲಾಕ್ ಮಾಡಿದ್ದೇಕೆ? ಹಿಂದಿನ ಕಾರಣ ಈಗ ಬಂತು ಬೆಳಕಿಗೆ!

ಬಾಲಿವುಡ್ ನಟಿ ಊರ್ವಶಿ ರೌತೆಲ ಅವರು ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಇಂಟರ್ಯಾಕ್ಟಿವ್ ಸೆಷನ್ ಮಾಡಿದ್ದರು. ಈ ಸೆಷನ್ ನಲ್ಲಿ ಅವರ ಅಭಿಮಾನಿಗಳು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಊರ್ವಶಿಯವರು ಅವುಗಳಲ್ಲಿಯ ಒಂದು ಪ್ರಶ್ನೆಗೆ ನೀಡಿದ ಉತ್ತರ ದೇಶದ ಅನೇಕ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿಗೊಳಿಸಿತ್ತು.

ಒಬ್ಬ ಅಭಿಮಾನಿಯು ನಿಮ್ಮ ನೆಚ್ಚಿನ ಕ್ರಿಕೆಟರ್ ಯಾರು? ಎಂದು ಕೇಳಿದ ಪ್ರಶ್ನೆಗೆ ಊರ್ವಶಿ ಅವರು ನನಗೆ ಯಾವ ಕ್ರಿಕೆಟರ್ ಗೊತ್ತಿಲ್ಲ ಎಂದಿದ್ದರು, ಕಾರಣ ಅವರು ಕ್ರಿಕೆಟ್ ನೋಡುವುದಿಲ್ಲ. ಆದರೆ ಊರ್ವಶಿ ಅವರು ಹೇಳುವ ಪ್ರಕಾರ, ಅವರ ಮನಸ್ಸಿನಲ್ಲಿ ಇಂಡಿಯನ್ ಕ್ರಿಕೆಟ್ ಲಿಜೆಂಡ್ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಗೌರವದ ಸ್ಥಾನ ಇದೆಯಂತೆ.

ಮೀಡಿಯಾ ರಿಪೋರ್ಟ್ ಗಳ ಪ್ರಕಾರ, ಕೆಲವೇ ವರ್ಷಗಳ ಹಿಂದೆ ಉರ್ವಶಿ ರೌತೆಲ ಮತ್ತು ಟೀಮ್ ಇಂಡಿಯಾ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ರಿಷಬ್ ಪಂತ್ ಇವರಿಬ್ಬರು ರಿಲೇಶನ್ ನಲ್ಲಿ ಇದ್ದಾರೆ ಎಂಬ ಗಾಳಿಸುದ್ದಿಗಳು ಹರಡಿದ್ದವು. ಆದರೆ ರಿಷಬ್ ಪಂತ್ ಅವರು 2018 ರಲ್ಲಿ ಊರ್ವಶಿ ಯವರ ವಾಟ್ಸಪ್ ನಂಬರ್ ಬ್ಲಾಕ್ ಮಾಡಿದ್ದರು. ಈ ಸಂಬಂಧವಾಗಿ ರಿಷಬ್ ಪಂತ್ ಅವರು ಇನ್ನಷ್ಟು ಗಾಳಿಸುದ್ದಿಗಳು ಹರಡಬಾರದೆಂಬ ಉದ್ದೇಶದಿಂದ ಹೀಗೆ ಮಾಡಿದ್ದರು. ಈ ಗಾಸಿಪ್ ಗಳ ಬಗ್ಗೆ ರಿಷಬ್ ಮತ್ತು ಊರ್ವಶಿ ಎಲ್ಲಿಯೂ ಮಾತನಾಡಿಲ್ಲ. ಆದರೆ ಒಂದು ಮಾತು ನಿಜ, ಈ ಗಾಳಿಸುದ್ದಿಗಳ ನಡುವೆಯೇ ರಿಷಬ್ ಪಂತ್ ಅವರು ಈಶಾ ನೇಗಿ ಅವರ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಒಪ್ಪಿಕೊಂಡಿದ್ದರು. ಈ ಬಗ್ಗೆ ರಿಷಬ್ ಪಂತ್ ಅವರು ತಮ್ಮ ಆಫೀಸಿಯಲ್ ಇನ್ಸ್ಟಾಗ್ರಾಂ ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದರು. ನಾನು ನಿನ್ನನ್ನು ಸಂತೋಷವಾಗಿ ಇಡಲು ಆಶಿಸುತ್ತೇನೆ, ಕಾರಣ ನಾನು ನಿನ್ನಿಂದ ಸಂತೋಷವಾಗಿದ್ದೇನೆ. ಇದಕ್ಕೆ ಪೂರಕವಾಗಿ ಈಶಾ ನೇಗಿಯೂ ಸಹಿತ ರಿಷಬ್ ಅವರ ಜೊತೆಗಿನ ಒಂದು ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಮಾಯ್ ಮ್ಯಾನ್, ನನ್ನ ಗೆಳೆಯ, ನನ್ನ ಜೀವನ, ನನ್ನ ಪ್ರೀತಿ ಎಂದು ಬರೆದಿದ್ದರು.

ಬಾಲಿವುಡ್ ನ ಈ ನಟಿ ಉರ್ವಶಿ ರೌತೆಲ ತಮ್ಮ ಲುಕ್ ನಿಂದಾಗಿ ಯಾವಾಗಲೂ ಚರ್ಚೆಯಲ್ಲಿ ಇರುತ್ತಾರೆ. ಇತ್ತೀಚೆಗೆ ಅವರು ಒಂದು ಮಾಸ್ಕ್ ಗೆ ಸಂಬಂಧಿಸಿದ ವಿಡಿಯೋದಿಂದಾಗಿ ತುಂಬಾ ಸುದ್ದಿಯಲ್ಲಿದ್ದರು. ಊರ್ವಶಿ ಅವರು ಯಾವಾಗಲೂ ತಮ್ಮ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಊರ್ವಶಿ ಯವರು ಇಂಥದ್ದೇ ಒಂದು ಸುಂದರವಾದ ವಿಡಿಯೋವನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಕ್ಯಾಪ್ಷನ್ ನೀಡಲು ಸೂಚಿಸಿದ್ದಾರೆ.