ರಿಷಿ ಕಪೂರ್ ಮೂರು ವರ್ಷಗಳ ಹಿಂದೆ ಸಿಟ್ಟಿನಲ್ಲಾಡಿದ ಆ ಮಾತುಗಳು; ದುರ್ದೈವದಿಂದ ಸತ್ಯವಾಯಿತು.

ಬಾಲಿವುಡ್ ಚಾಕ್ಲೆಟ್ ಬಾಯ್ ರಿಷಿ ನಮ್ಮೆಲ್ಲರನ್ನು ಬಿಟ್ಟು ದೂರ ಹೋದರು. ರಿಷಿ ಕಪೂರ್ ಅವರ ಫ್ಯಾನ್ಸ್ ಗಳು ಕೊನೆತನಕ ಅವರಿಗೆ ಅಪಾರ ಪ್ರೇಮವನ್ನು ನೀಡಿದರು. 2018 ರಲ್ಲಿ ಅವರಿಗೆ ಮೊದಲು ಕ್ಯಾನ್ಸರ್ ಇದ್ದದ್ದು ಖಚಿತವಾಗಿತ್ತು. ನಂತರ ಅಮೆರಿಕೆಯಲ್ಲಿ ಉಪಚಾರ ಪ್ರಾರಂಭವಾಯಿತು. 2019 ರಲ್ಲಿ ಭಾರತಕ್ಕೆ ಮರಳಿದರು. 67 ನೇ ವಯಸ್ಸಿಗೆ ಅವರ ಪ್ರಾಣ ಪಕ್ಷಿ ಹಾರಿ ಹೋಯಿತು. ಏತನ್ಮಧ್ಯೆ 3 ವರ್ಷಗಳ ಹಿಂದೆ ಸೋಶಿಯಲ್ ಮಿಡಿಯಾದಲ್ಲಿ ವ್ಯಕ್ತ ಮಾಡಿದ ಅವರ ಮಾತುಗಳು ನೂರಕ್ಕೆ 100 ರಷ್ಟು ನಿಜವಾಯಿತು.

ರಿಷಿ ಕಪೂರ್ ಅವರು ಮೂರು ವರ್ಷಗಳ ಮುಂಚೆ ಸಿಟ್ಟಿನಲ್ಲಿ ಆಡಿದ ಮಾತು ನಿಜವಾಯಿತು ಇದು ದುರ್ದೈವವೇ ಎನ್ನಬೇಕು. 27 ಏಪ್ರಿಲ್ 2017 ರಂದು ಬಾಲಿವುಡ್ ನಟ ವಿನೋದ್ ಖನ್ನಾ ಅವರ ನಿಧನ ಕ್ಯಾನ್ಸರ್ ದಿಂದಲೇ ಆಗಿತ್ತು. ಎರಡನೆಯ ದಿನ ಅಂತಿಮ ದರ್ಶನಕ್ಕೆ ಫಿಲ್ಮ್ ಇಂಡಸ್ಟ್ರಿಯ ಹೊಸ ತಲೆಮಾರಿನ ಕಲಾಕಾರರು ನಟರು ಯಾರು ಉಪಸ್ಥಿತರಿರಲಿಲ್ಲ. ಇದೇ ಅವರ ಕೋಪಕ್ಕೆ ಮುಖ್ಯ ಕಾರಣವಾಗಿತ್ತು.

“ನಿಮಗೆ ನಾಚಿಕೆಯಾಗಬೇಕು, ವಿನೋದ್ ಖನ್ನಾ ಅವರ ಅಂತ್ಯ ಯಾತ್ರೆಗೆ ಹೊಸ ತಲೆಮಾರಿನ ಒಬ್ಬ ನಟನೂ ಶಾಮೀಲಾಗಿರಲಿಲ್ಲ. ಯಾವಾಗ ನಾನು ಸಾಯುತ್ತೇನೆ ಆಗ ಇಂಥ ಸ್ಥಿತಿಗೆ ನನ್ನ ಮನಸ್ಸಿನ ತಯಾರಿ ನಾನು ಮಾಡಿಕೊಳ್ಳಲೇಬೇಕು. ನನಗೆ ಯಾರು ಹೆಗಲು ಕೊಡಬೇಡಿ” ಎಂದು ಹೊಸ ನಟರ ಬಗ್ಗೆ ಖಾರವಾಗಿಯೇ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಈಗ ಮೂರು ವರ್ಷಗಳ ನಂತರ ಅವರಾಡಿದ ಮಾತುಗಳು ಅಕ್ಷರಶಃ ಸತ್ಯವಾಗಿದೆ. ಲಾಕ್ ಡೌನ್ ನಿಂದ ಇಚ್ಛೆ ಇದ್ದರೂ ಸಹಿತ ಅವರ ಅಂತ್ಯ ಯಾತ್ರೆಯಲ್ಲಿ ಭಾಗವಹಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಕೆಲವೇ ಕೆಲವು ವ್ಯಕ್ತಿಗಳಷ್ಟೇ ಹೋಗಿದ್ದರು.

ವಿನೋದ್ ಖನ್ನಾ ಅವರ ಅಂತಿಮ ಯಾತ್ರೆಯಲ್ಲಿ ತಮಗೆ ಸರಿ ಬರದ ವಿಷಯಕ್ಕೆ ಕೋಪಗೊಂಡು ಟ್ವೀಟ್ ಮಾಡಿದಾಗ ರಿಷಿ ಅವರಿಗಿನ್ನೂ ಕ್ಯಾನ್ಸರ್ ಆಗಿರಲಿಲ್ಲ. ಅವರಾಡಿದ ಮಾತು ಕೊನೆಗಾಲದಲ್ಲಿ ಅವರಿಗೆ ನೆನಪು ಸಹಿತ ಇರಲಿಕ್ಕಿಲ್ಲ. ಆದರೆ ಅಂದು ಕೋಪದಲ್ಲಾಡಿದ ಮಾತು ಮಾತ್ರ ಈಗ ನಿಜವಾಗಿ ಹೋಗಿದೆ.