ರೀಟೆನ್ ಮಾಡದ ಕಾರಣಕ್ಕಾಗಿ ಯಜುರ್ವೇಂದ್ರ ಚಹಲ್ ಉದಾಸ; ಮ್ಯಾಚ್ ನಲ್ಲಿ ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿಯೇ ಹೊರ ಹಾಕಿದ ವಿಡಿಯೋ ವೈರಲ್…

ಐಪಿಎಲ್ ನ 15ನೇ ಹಂಗಾಮ ಭರ್ಜರಿಯಾಗಿ ಪ್ರಾರಂಭವಾಗಿದೆ. ರಾಜಸ್ಥಾನ, ಲಖನೌ, ಗುಜರಾತ ತಂಡಗಳು ಐಪಿಎಲ್ ನಲ್ಲಿ ತುಂಬು ಉತ್ಸಾಹ ಮತ್ತು ಗೆಲುವಿನಿಂದ ಮುಂದೆ ಹೆಜ್ಜೆ ಹಾಕುತ್ತಿವೆ. ಪಂದ್ಯಗಳಲ್ಲಿ ದಿನನಿತ್ಯ ಹೊಸ ಹೊಸ ಘಟನೆಗಳು ನೋಡಲು ಸಿಗುತ್ತಿರುವಾಗಲೇ ರಾಜಸ್ಥಾನದ ವಿರುದ್ಧ ಆರ್ಸಿಬಿ ಪಂದ್ಯದಲ್ಲಿ ಒಂದು ವಿಚಿತ್ರ ದೃಶ್ಯ ನೋಡಲು ಸಿಕ್ಕಿತು. ಫ್ರೆಂಚೈಸಿ ತನ್ನನ್ನು ತಂಡಕ್ಕಾಗಿ ಮರುಆಯ್ಕೆ ಅಥವಾ ತಂಡದಲ್ಲಿ ಉಳಿಸಿಕೊಳ್ಳದ ಸಿಟ್ಟು ಸ್ಪಷ್ಟವಾಗಿ ಆಟಗಾರ ತೋರಿಸಿದ್ದಾನೆ.

ಸದ್ಯದ ಹಂಗಾಮಿನಲ್ಲಿ ಒಟ್ಟು 10 ತಂಡಗಳು ಕಣದಲ್ಲಿವೆ. ಹೀಗಾಗಿ ತಂಡಗಳಲ್ಲಿ ಅನೇಕ ಆಟಗಾರರ ಬದಲಾವಣೆಯಾಗಿದೆ. ಇದೇ ಸಂದರ್ಭದಲ್ಲಿ ಬೆಂಗಳೂರು ತಂಡವು ಚಹಲ್ ಅವರಿಗೆ ರಿಟೆನ್ ಮಾಡಿಕೊಳ್ಳಲಿಲ್ಲ. ಹಾಗೂ ವಿರಾಟ್ ಕೊಹ್ಲಿ ಅವರು ಸಹ ತಂಡದ ನಾಯಕತ್ವವನ್ನು ತ್ಯಜಿಸಿದರು. ಸದ್ಯ ತಂಡವನ್ನು ಪಾಪ್ ಡುಪ್ಲೆಸಿಸ್ ಮುನ್ನಡೆಸುತ್ತಿದ್ದಾರೆ. ಚಹಲ್ ಅವರು ಕಳೆದ ಬಾರಿ ತಂಡಕ್ಕಾಗಿ ಒಳ್ಳೆಯ ಪ್ರದರ್ಶನ ನೀಡಿದ್ದರು.

ಈ ಬಾರಿ ರಾಜಸ್ಥಾನ ತಂಡವು ಚಹಲ್ ಅವರಿಗೆ 6.5 ಕೋಟಿ ರೂಪಾಯಿಗಳನ್ನು ನೀಡಿ ತಮ್ಮ ತಂಡದಲ್ಲಿ ಶಾಮೀಲು ಮಾಡಿಕೊಂಡಿದ್ದಾರೆ. ಆದರೆ ಚಹಲ್ ಅವರು ತಮ್ಮನ್ನು ಬೆಂಗಳೂರು ತಂಡದಲ್ಲಿ ಇಟ್ಟುಕೊಳ್ಳಲಿಲ್ಲ ಎಂಬ ಸಿಟ್ಟು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅದೇ ಸಿಟ್ಟನ್ನು ಮೈದಾನದಲ್ಲಿ ಚಹಲ್ ಅವರು ಪಂದ್ಯದ ಸಂದರ್ಭದಲ್ಲಿ ಹೊರಹಾಕಿದ್ದಾರೆ. ಸದ್ಯ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಕಂಡು ಬರುವ ಹಾಗೆ ಮ್ಯಾಚ್ ಮುಗಿದ ನಂತರ ಬೆಂಗಳೂರು ಟೀಮ್ ನಲ್ಲಿಯ ಆಟಗಾರರು ರಾಜಸ್ಥಾನ ತಂಡದ ಆಟಗಾರರ ಜೊತೆಗೆ ಶೇಕ್ ಹ್ಯಾಂಡ್ ಮಾಡುತ್ತಿದ್ದರು. ಆಗ ಯಜುರ್ವೇಂದ್ರ ಚಹಲ್ ಅವರು ಇಬ್ಬರೂ ಬ್ಯಾಟ್ಸ್ಮನ್ಗಳ ಕಡೆಗೆ ನಿರ್ಲಕ್ಷಿಸಿ ಶೇಕ್ ಹ್ಯಾಂಡ್ ಮಾಡದೆ ಅಲ್ಲಿಂದ ಹೊರಟು ಹೋಗಿದ್ದಾರೆ.

ವಿಡಿಯೋ ನೋಡಿ

ಹರ್ಷಲ್ ಪಟೇಲ್ ಮತ್ತು ಯಜುರ್ವೆಂದ್ರ ಚಹಲ್ ಇವರಿಬ್ಬರ ಮಧ್ಯದಲ್ಲಿ ಏನೋ ಮನಸ್ತಾಪ ನಡೆಯುತ್ತಿದೆ ಆದ್ದರಿಂದ ಚಹಲ್ ಅವರು ಆ ರೀತಿ ಮಾಡಿರಬೇಕೆಂದು ಮೀಡಿಯಾದಲ್ಲಿ ಚರ್ಚೆ ಇದೆ. ಆದರೆ ಚಹಲ್ ಅವರು ಹರ್ಷಿತ್ ಪಟೇಲ್ ಅವರ ಮೇಲೆ ಅಸಮಾಧಾನ ವಿರುವ ಬಗ್ಗೆ ಯಾವತ್ತೂ ಹೇಳಿಲ್ಲ. ಹೀಗಾಗಿ ನಿಶ್ಚಿತವಾಗಿಯೂ ಏನಾಗಿದೆ ಎಂಬುದು ತಿಳಿದುಬರುತ್ತಿಲ್ಲ. ಕಳೆದ ಹಂಗಾಮಿನ ಪಂದ್ಯಗಳಲ್ಲಿ ಚಹಲ್ ಅವರು ಬೆಂಗಳೂರಿಗೆ ಅನೇಕ ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಈ ಬಾರಿ ರಾಜಸ್ಥಾನ್ ತಂಡವು ಚಹಲ್ ಅವರಿಗೆ 6.5 ಕೋಟಿ ರೂಪಾಯಿಗಳಿಗೆ ಖರೀದಿಸಿ ಆಡುವ ಅವಕಾಶ ಮಾಡಿಕೊಟ್ಟಿತು. ಚಹಲ್ ರಾಜಸ್ಥಾನಕ್ಕೆ ಗೆಲವು ತಂದುಕೊಟ್ಟರು..