ರೀಲ್ ನಲ್ಲಿ ಗೋಡೆ ಹತ್ತುವ ಸ್ಪೈಡರ್ ಮ್ಯಾನ್ ಬಿಡಿ; ಈ ‘ರಿಯಲ್’ ಸ್ಪೈಡರ್ ಗೋಟ್ (ಮೇಕೆ) ಗೋಡೆ ಹತ್ತುವ ಸ್ಟೈಲ್ ಸ್ವಲ್ಪ ನೋಡಿಯೇ ಬಿಡಿ!
ನಿಸರ್ಗ ಪ್ರತಿಯೊಂದು ಜೀವಿಗೆ ಏನಾದರೊಂದು ಅದ್ಭುತ ಶಕ್ತಿಯನ್ನು ದಯಪಾಲಿಸಿದೆ. ಅದರಲ್ಲಿ ಮಾನವನಿಗಂತೂ ಅದ್ಭುತವಾದ ಬುದ್ಧಿ ಶಕ್ತಿ ನೀಡಿದ್ದಾನೆ. ಇಂದು ಅದರ ಬಲದಿಂದಲೇ ಮನುಷ್ಯ ಪೃಥ್ವಿಯ ಮೇಲಿನ ಎಲ್ಲಾ ಪ್ರಾಣಿಗಳ ಮೇಲೆ ದರ್ಬಾರು ನಡೆಸುತ್ತಿದ್ದಾನೆ.
ಇರಲಿ, ಆದರೆ ಇಲ್ಲಿ ಇಂದಿನ ವಿಡಿಯೋದಲ್ಲಿ ಮೇಕೆಯ ಚಾಕಚಕ್ಯತೆಯನ್ನು ನೋಡಿದಾಗ ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಕಾರಣ ಆ ರೀತಿಯಲ್ಲಿ ಇದು ಗೋಡೆಯೊಂದನ್ನು ಸಹಜವಾಗಿ ಮತ್ತು ಅಷ್ಟೇ ವೇಗವಾಗಿ ಏರಿ ಮೇಲೆ ಹೋಗಿದೆ.
ಹಾಗೆ ನೋಡಲಾಗಿ ಮೇಕೆಗಳು ಯಾವಾಗಲೂ ಸಹಜವಾಗಿಯೇ ತುಂಬಾ ಕಷ್ಟಕರವಾದ ಮತ್ತು ಏರಲು ಅಸಾಧ್ಯವಾದ ಆಯಕಟ್ಟಿನ ಸ್ಥಳಗಳಲ್ಲಿ ಹೋಗಿ ಮೇಯುತ್ತ ನಿಂತಿರುತ್ತವೆ. ಆ ಸಂದರ್ಭದಲ್ಲಿ ಅವುಗಳನ್ನು ಗಮನಿಸಿದಾಗ ನಮಗೂ ಆಶ್ಚರ್ಯವಾಗುತ್ತದೆ. ಜೊತೆಗೆ ಈ ಮೇಕೆ ಅಂಥಾ ಸ್ಥಳಕ್ಕೆ ಹೇಗೆ ಹೋಗಿರಬೇಕು ಎಂಬ ಪ್ರಶ್ನೆ ಮನದಲ್ಲಿ ಮೂಡದೇ ಇರದು.
ಆದರಿಲ್ಲಿ ಮೇಕೆಯು ಗೋಡೆಯ ಮೇಲೆ ಏರಿದ ಸ್ಟೈಲ್ ನೋಡಿದಾಗ ಮಾತ್ರ ದಂಗಾಗುವದು ಖಚಿತ. ಮೇಕೆಯು ಏರುವ ಮೊದಲು ಆ ಸ್ಥಳದ ನಿರೀಕ್ಷೆ ಮಾಡುತ್ತದೆ. ನಂತರ ಸ್ವಲ್ಪ ಹಿಂದೆ ಸರಿದು ಟಾಪ್ ಗೇರ್ ನಲ್ಲಿ ಪಿಕ್ ಅಪ್ ತೆಗೆದುಕೊಳ್ಳುವದರ ಜೊತೆಗೆ ಕ್ಷಣದಲ್ಲಿ ಮೇಲೆ ಹೋಗಿ ನಿಲ್ಲುತ್ತದೆ.
ಇದು ಚಲನಚಿತ್ರಗಳಲ್ಲಿ ಸ್ಪೈಡರ್ ಮ್ಯಾನ್ ಗೋಡೆ ಹೇಗೆ ಏರುತ್ತಾನೋ ಅದಕ್ಕಿಂತಲೂ ಸರಳವಾಗಿ ಮತ್ತು ಕ್ಷಣಾರ್ಧದಲ್ಲಿ ಈ ಮೇಕೆಯು ಗೋಡೆಯನ್ನು ಹಬ್ಬಿ ಮೇಲೆ ನಿಂತಿದೆ.
ನೋಡಿ ಈ ಸ್ಪೈಡರ್ ಗೋಟ್ ನ ಕಮಾಲ್ ಪ್ರಸ್ತುತ ವಿಡಿಯೋದಲ್ಲಿ…
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ biltekpluss ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ಸ್ಪೈಡರ್ ಗೋಟಿನ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 6.6 ಮಿಲಿಯನ್ ಜನ ಲೈಕ್ಸ್ ಮಾಡಿದ್ದಾರೆ.