ರೆಂಬೆಯ ಮೇಲೆ ಕುಳಿತ ಪುಟ್ಟ ಮಂಗಕ್ಕೆ ಬಂದಿದೆ ತಡೆಯಲಾರದಷ್ಟು ಗಾಢ ನಿದ್ರೆ; ವಿಡಿಯೋ ನೋಡಿದಾಗ ಎನಿಸುತ್ತೆ ಪಾಪ, ತಾಯಿ ಎಲ್ಲಿ?

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಪ್ರಾಣಿಗಳ ವಿಡಿಯೋ ಕೆಲವೊಮ್ಮೆ ಮನಸ್ಸಿಗೆ ತುಂಬಾ ನಾಟುತ್ತವೆ. ಕಾಡಿನಲ್ಲಿ ಜೀವಿಸುವ ಪ್ರಾಣಿಗಳ ಜೀವನ ಸದಾ ಸಂಘರ್ಷದಿಂದ ಕೂಡಿರುತ್ತದೆ. ಹೀಗಾಗಿಯೇ ವೈಲ್ಡ್ ಲೈಫ್ ಇಷ್ಟಪಡುವವರು ಇಂಥ ವಿಡಿಯೋಗಳನ್ನು ಸದಾ ನೋಡುತ್ತಿರುತ್ತಾರೆ. ಈಗ ಪುಟ್ಟ ಮಂಗನ ನಿದ್ರಾಧೀನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವದು ಕಂಡುಬರುತ್ತಿದೆ.

ಈ ವಿಡಿಯೋದಲ್ಲಿ ಒಂದು ಮಂಗವು ಮರದ ರೆಂಬೆಯ ಮೇಲೆ ಕುಳಿತದ್ದು ಕಂಡುಬರುತ್ತಿದೆ. ಆ ಪುಟ್ಟ ಮಂಗಕ್ಕೆ ತಾಳಲಾರದಷ್ಟು ನಿದ್ರೆ ಬರುತ್ತಿದೆ. ಗಾಢನಿದ್ರೆಯಿಂದಾಗಿ ರೆಂಬೆಯ ಮೇಲೆ ಕುಳಿತ ಮಂಗವು ಪದೇ ಪದೇ ತನ್ನ ಬ್ಯಾಲೆನ್ಸ್ ಕಳೆದುಕೊಳ್ಳುತ್ತಿದೆ. ಅದು ಎಷ್ಟೇ ಪ್ರಯತ್ನ ಮಾಡಿದರೂ ನಿದ್ರೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಮತ್ತು ಅಲ್ಲಿಯೇ ರೆಂಬೆಯ ಮೇಲೆ ಕುಳಿತು ವಿವಿಧ ಎಂಗಲ್ ಬದಲಾಯಿಸುತ್ತಾ ಮತ್ತೆ ಮತ್ತೆ ನಿದ್ರೆಗೆ ಜಾರುತ್ತಿದೆ. ಪ್ರತಿಬಾರಿ ಬ್ಯಾಲೆನ್ಸ್ ಕಳೆದುಕೊಂಡಾಗ ಮಂಗವು ನಿದ್ರೆಯಲ್ಲಿ ತನ್ನ ತಾಯಿಗೆ ಹಿಡಿಯುವಂತೆ ಪದೇಪದೇ ಮರದ ಕಾಂಡದ ಆಸರೆಯನ್ನು ತೆಗೆದುಕೊಳ್ಳುತ್ತದೆ. ಈ ದೃಶ್ಯ ನೋಡಿದಾಗ ನೋಡುಗರ ಮನ ನಿಜಕ್ಕೂ ಕಲಕುತ್ತದೆ. ಮತ್ತು ಅಲ್ಲಿ ಅದರ ತಾಯಿ ಇದ್ದರೆ ಚೆನ್ನಾಗಿತ್ತೇನೋ ಎಂದೆನಿಸುತ್ತದೆ.

ನೋಡಿ ಈ ಸುಂದರ ವಿಡಿಯೋ…

ಈ ವಿಡಿಯೋವನ್ನು ಮೇಜರ್ ಪವನ್ ಕುಮಾರ್ ಶೌರ್ಯ ಹೆಸರಿನ ಟ್ವಿಟರ್ ಅಕೌಂಟ್ ಮುಖಾಂತರ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಎರಡುವರೆ ಲಕ್ಷ ಜನರು ವೀಕ್ಷಿಸಿದ್ದು ಸಾವಿರಾರು ಜನರು ಲೈಕ್ ಮಾಡಿದ್ದಾರೆ.