ರೇಖಾಳ ಬೈತಲೆಯಲ್ಲಿಯ ಸಿಂಧೂರವನ್ನು ನೋಡಿ ಜಯಾ ಬಚ್ಚನ್ ಅವರು ರೇಖಾಗೆ ಕಪಾಳಮೋಕ್ಷ ಮಾಡಿದ್ದರು. ಓದಿ ಸಂಪೂರ್ಣ ಘಟನೆಯ ವಿವರ…
ಮದುವೆಯ ಕಲಾಪ ಇದು ಎರಡು ಪವಿತ್ರ ಜೀವಿಗಳನ್ನು ಒಂದುಗೂಡಿಸುವ ಸುಂದರವಾದ ಸಮಾರಂಭ. ವ್ಯಕ್ತಿಯ ಜೀವನದಲ್ಲಿಯ ಇಂತಹ ಮಹತ್ವದ ಸಮಾರಂಭ ಪೂರ್ಣಗೊಳ್ಳಬೇಕಾದರೆ ಕೆಲವೊಮ್ಮೆ ಅನೇಕ ಅಡೆತಡೆಗಳು ಸಹಿತ ಬರುತ್ತವೆ. ಅದರ ಜೊತೆಗೆ ಈ ಮದುವೆ ಸಮಾರಂಭದಲ್ಲಿ ವಿಘ್ನ ಗಳಂತೆ ಜಗಳಗಳು ಆಗುವುದು ಸಹಜ. ಈ ಜಗಳಗಳು ಬರೀ ಸಾಮಾನ್ಯರ ಮದುವೆಯಲ್ಲಿ ಆಗುತ್ತವೆ ಎಂದಿಲ್ಲ. ಶ್ರೀಮಂತರ ಮತ್ತು ಸಿನಿತಾರೆಯರ ಮದುವೆಗಳಲ್ಲಿಯೂ ಕೆಲವೊಮ್ಮೆ ಜಗಳಗಳಾಗುತ್ತವೆ.
ಇದೇ ರೀತಿಯ ಜಗಳ 1980 ರಲ್ಲಿ ಬಾಲಿವುಡ್ ನ ಕಪೂರ್ ಫ್ಯಾಮಿಲಿಯ ದೊಡ್ಡ ಮದುವೆಯಲ್ಲಿ ಆಗಿತ್ತು.
ಕಪೂರ್ ಫ್ಯಾಮಿಲಿ ಮದುವೆಯಂದಾಗ ಕೇಳಬೇಕೆ? ಈ ಮದುವೆಯಲ್ಲಿ ಫಿಲಂ ಇಂಡಸ್ಟ್ರಿಯ ದೊಡ್ಡ ದೊಡ್ಡ ಕಲಾಕಾರರು ಉಪಸ್ಥಿತರಿದ್ದರು. ಹಾಗೆಯೇ ಎಷ್ಟೋ ಜನ ಗಣ್ಯ ವ್ಯಕ್ತಿಗಳು ಒಂದೇ ಸಮನೆ ಬರುತ್ತಲೇ ಇದ್ದರು. ಅದೇ ಸಮಯದಲ್ಲಿ ರೇಖಾ ಅವರು ಮದುವೆಗೆ ಬಂದರು. ಒಂದೇ ಕ್ಷಣದಲ್ಲಿ ಮದುವೆಯಲ್ಲಿ ಇದ್ದವರ ಕಣ್ಣುಗಳು ರೇಖಾ ಅವರ ಮೇಲೆ ನೆಟ್ಟವು. ಅದಕ್ಕೆ ಕಾರಣವು ಹಾಗೆಯೇ ಇತ್ತು.
ಅಮಿತಾಭ್ ರವರ ಜೊತೆಗೆ ಜಯಾ ಅವರು ಮದುವೆಯಾಗುವ ಮುನ್ನ ಮತ್ತು ಮದುವೆಯಾದ ನಂತರವೂ ರೇಖಾ ಅವರ ಅಫೇರ್ಸ್ ಗಳ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದ್ದವು. ಹೀಗಾಗಿ ಈ ಲಗ್ನದಲ್ಲಿ ರೇಖಾ ಅವರು ನವವಧುವಿನ ಹಾಗೆ ಸಿಂಗರಿಸಿಕೊಂಡು ತಲೆಯಲ್ಲಿ ಸಿಂಧೂರವನ್ನು ಇಟ್ಟುಕೊಂಡು ಮದುವೆಗೆ ಬಂದಿದ್ದರು. ಭಾರತೀಯ ಸಂಸ್ಕೃತಿಯಲ್ಲಿ ಸಿಂಧೂರವನ್ನು ಮದುವೆಯಾದ ಮಹಿಳೆಯರು ಮಾತ್ರ ತಲೆಯ ಬೈತಲೆಯಲ್ಲಿ ಹಚ್ಚಿಕೊಳ್ಳುತ್ತಾರೆ. ಆಗ ರೇಖಾ ಅವರ ಮದುವೆ ಇನ್ನೂ ಆಗಿರಲಿಲ್ಲ. ಹಾಗಾದರೆ ಇವರು ಯಾರನ್ನು ತನ್ನ ಗಂಡನನ್ನಾಗಿ ಮಾಡಿಕೊಂಡಿದ್ದಾರೆ ಅಥವಾ ಯಾರ ಹೆಸರಿನ ಮೇಲೆ ಸಿಂಧೂರದ ತಿಲಕವನ್ನು ತಮ್ಮ ಬೈತಲೆಯ ನಡುವೆ ಇಟ್ಟುಕೊಂಡಿದ್ದಾರೆ ಎಂಬ ಪ್ರಶ್ನೆ ಅಲ್ಲಿ ಎಲ್ಲರಿಗೂ ಉದ್ಭವಿಸಿತು. ಯಾಕೆಂದರೆ ಆಗಿನ ಸುದ್ದಿಗಳ ಪ್ರಕಾರ ಅಮಿತಾಬ್ ಮತ್ತು ರೇಖಾ ಇಬ್ಬರು ಗುಪ್ತವಾಗಿ ಮದುವೆಯಾಗಿದ್ದರಂತೆ.
ಈ ಘಟನೆಯಿಂದ ಜಯಾ ಅವರು ಕೋಪಗೊಂಡು ಮದುವೆಯಿಂದ ಮನೆಗೆ ಹೋಗಲು ನಿರ್ಧರಿಸಿದರು. ಅದಕ್ಕಾಗಿ ಅಮಿತಾಬ್ ಕಡೆಗೆ ಹೋಗಿ ಮನೆಗೆ ಹೋಗೋಣವೆಂದು ಹೇಳಿದರು. ಆಗ ಅಮಿತಾಬ್ ಅವರು ಬಂದಿರ ತಕ್ಕಂತಹ ಅತಿಥಿಗಳಿಗೆ ಮಾತನಾಡಿಸುತ್ತಿದ್ದರು. ಅದಕ್ಕಾಗಿ ಮನೆಗೆ ಹೋಗಲು ಅಮಿತಾಬ್ ಅವರು ಒಪ್ಪಲಿಲ್ಲ. ಈ ಕಾರಣದಿಂದ ಜಯಾ ಅವರು ಒಂದು ಮೂಲೆಯಲ್ಲಿ ಹೋಗಿ ನಿಂತರು. ಈ ಸಂದರ್ಭದಲ್ಲಿ ಜಯಾ ಅವರು ರೇಖಾಳ ಕಡೆಗೆ ನೋಡಿದಾಗ, ರೇಖಾ ಮೇಲಿಂದ ಮೇಲೆ ಅಮಿತಾಬ್ ಕಡೆಗೆ ನೋಡುತ್ತಿದ್ದುದನ್ನು ಕಂಡು ಜಯಾ ಅವರು ಮತ್ತಷ್ಟು ಕೋಪಗೊಂಡರು. ಅದೇ ಕೋಪದ ಭರದಲ್ಲಿ ರೇಖಾ ಅವರ ಹತ್ತಿರ ಹೋಗಿ ಜಗಳವಾಡಲು ಶುರು ಮಾಡಿದರು. ಆ ಸಮಯದಲ್ಲಿ ಜಯಾ ಬಚ್ಚನ್ ಅವರು ಕೇಳಿದ ಪ್ರಶ್ನೆಗಳಿಗೆ ರೇಖಾ ಅವರು ಚೆನ್ನಾಗಿಯೇ ಉತ್ತರ ಕೊಟ್ಟರು. ಇದರಿಂದ ಜಯಾ ಬಚ್ಚನ್ ಅವರು ತನ್ನ ಸಂತುಲನವನ್ನು ಕಳೆದುಕೊಂಡು ರೇಖಾ ಅವರ ಕಪಾಳಕ್ಕೆ ಹೊಡೆದುಬಿಟ್ಟರು.
ಈ ಸಂದರ್ಭದಲ್ಲಿ ಅಮಿತಾಬ್ ಅವರು ಅಲ್ಲಿಯೇ ಉಪಸ್ಥಿತರಿದ್ದರು ಸಹ ಜಗಳದಲ್ಲಿ ಮಾತ್ರ ಭಾಗವಹಿಸಲಿಲ್ಲ. ಏಕೆಂದರೆ ಅವರ ಹತ್ತಿರ ಇವರಿಬ್ಬರು ಕೇಳುವ ಪ್ರಶ್ನೆಗೆ ಉತ್ತರವಿರಲಿಲ್ಲ. ಆದರೆ ಯಾವಾಗ ಜಗಳ ತುಂಬಾ ವಿಕೋಪಕ್ಕೆ ಹೋಯಿತು ಆಗಮಾತ್ರ ಅಮಿತಾಬ್ ಅವರು ಮಧ್ಯದಲ್ಲಿ ಪ್ರವೇಶಿಸಿ ಜಗಳವನ್ನು ಶಾಂತ ಮಾಡಿದರು. ನಂತರ ಅಲ್ಲಿ ಮೀಡಿಯಾದವರು ಇದ್ದ ಕಾರಣದಿಂದ ಅಮಿತಾಬ್ ಅವರ ಜಯಾ ಅವರಿಗೆ ಕರೆದುಕೊಂಡು ನೇರ ಮನೆಗೆ ಬಂದರು.
ಈ ಜಗಳವು ಮದುವೆಯಲ್ಲಿ ಒಂದು ರೀತಿಯ ತಮಾಷೆಯಾಗಿ ಹೋಯಿತು. ಅಂದಿನಿಂದ ಇಲ್ಲಿಯವರೆಗೆ ಅವರಿಬ್ಬರು ಯಾವತ್ತೂ ಎಲ್ಲಿಯೂ ಕೂಡಿರುವುದು ಕಾಣಿಸುವುದಿಲ್ಲ. ಬರೀ ವ್ಯವಸಾಯಿಕವಾಗಿ ಅಷ್ಟೇ ಕೂಡಿದ್ದೂ ಕಂಡುಬಂದಿದೆ.