ರೇಲ್ವೆ ಜಾರಿಗೊಳಿಸಿತು ಟಿಕೆಟ್ ಮಾಸ್ಟರ್ (TTE) ಗಳಿಗಾಗಿ ಹೊಸ ಮಾರ್ಗಸೂಚಿ. ಜೂನ್ 1 ರಿಂದ ಕೋಟ್ ಗಳಲ್ಲಿ ಕಾಣುವದಿಲ್ಲ TTE.

ಲಾಕ್ ಡೌನ್ 4.0(Lockdown 4.0) ಮುಗಿಯುತ್ತಿದ್ದಂತೆ ಜೂನ್ 1 ರಿಂದ ಕೆಲವು ರೈಲುಗಳು ಪ್ರಾರಂಭವಾಗಲಿವೆ. ಇದಕ್ಕೆ ಪೂರ್ವತಯಾರಿಯಂತೆ TTE ಗಳಿಗಾಗಿ ರೇಲ್ವೆ ತನ್ನ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ.

ದೇಶಾದ್ಯಂತ ಕೊರೊನ ವೈರಸ್ ಹಿನ್ನೆಲೆಯಿಂದ ರೈಲು ಸೇವೆ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಸದ್ಯಕ್ಕೆ ಭಾರತದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು ಮೇ 31 ಕ್ಕೆ ಇದು ಮುಗಿಯಲಿದೆ. ಆದ್ದರಿಂದ ರೇಲ್ವೆ ನಿಧಾನವಾಗಿ ತನ್ನ ಪೂರ್ವ ಪಥದ ಮೇಲೆ ತರುವದಕ್ಕಾಗಿ ಸರಕಾರ ಚಿಂತನೆ ನಡೆಸಿ ರೈಲಿನಲ್ಲಿ ಟಿಕೆಟ್ ಚೆಕ್ ಮಾಡುವರಿಗಾಗಿ (TTE) ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಿಂದ TTE ಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಕೊರೊನ ಸಂಕ್ರಮಣದಿಂದ ಬಚಾವಾಗಲು ಕೆಲವೊಂದು ಗೈಡ್ ಲೈನ್ಸ್ ಗಳನ್ನು ಹಾಕಿದೆ. ಅವು ಹೀಗಿವೆ.

● ಜೂನ್ 1 ರಿಂದ 100 ಟ್ರೇನ್ ಗಳಲ್ಲಿ ಟಿಕೆಟ್ ಚೆಕ್ ಮಾಡುವ (TTE) ಅಧಿಕಾರಿಗಳು ಟಾಯ್ ಮತ್ತು ಕೋಟ್ ಧರಿಸುವ ಅಗತ್ಯವಿಲ್ಲ.

● ಟ್ರೇನ್ ನಲ್ಲಿ ಬರುವ ಟಿಕೆಟ್ ಮಾಸ್ತರ್ ಗಾಗಿ (TTE) ಭೂತಗನ್ನಡಿಯನ್ನು ಒದಗಿಸಲಾಗುವದು. ಕಾರಣ ಅವರು ದೂರದಿಂದಲೇ ಟಿಕೆಟ್ ವಿವರಣೆಯನ್ನು ನೋಡಬಹುದು, ಹಾಗೂ ವ್ಯಕ್ತಿಗಳ ಮದ್ಯದ ಅಂತರವನ್ನು ಕಾಯ್ದುಕೊಳ್ಳಲು ಅಥವಾ ಶರೀರದ ಸಂಪರ್ಕತೆಯಿಂದ ಬಚಾವಾಗಲು ಸಾಧ್ಯವಾಗುತ್ತದೆ.

● ಟ್ರೇನ್ ನಲ್ಲಿ ಸಂಚರಿಸುವ ಟಿಕೆಟ್ ಮಾಸ್ಟರ್ (TTE) ಗೆ ಸಂರಕ್ಷಣೆಯ ಸಲುವಾಗಿ ಮಾಸ್ಕ್, ಫೇಸ್ ಶೀಲ್ಡ್, ಕೈಗವಜುಗಳು, ತಲೆ ಮುಚ್ಚಲು ಸಹಾಯವಾಗುವ ಕವರ್, ಸ್ಯಾನಿಟೈಜರ್, ಸೋಪ್ ಸಮೇತ ಇತರ ವಸ್ತುಗಳು ಲಭ್ಯವಾಗಲಿವೆ.