ರೈಲಿಗಿಂತಲೂ ಸ್ಪೀಡ್! ನಾಯಿಯ ಓಡುವ ವೇಗವನ್ನು ನೋಡಿದರೆ ಆಶ್ಚ#ರ್ಯವಾಗುತ್ತೆ: ನೋಡಿ ವೈರಲ್ Video
ಎಲ್ಲಕ್ಕಿಂತ ವೇಗವಾಗಿ ಓಡುವ ಪ್ರಾಣಿ ಯಾವುದು ಎಂದು ಕೇಳಿದರೆ ಚಿರತೆ ಎಂಬ ಉತ್ತರ ನಿಸ್ಸಂಶಯವಾಗಿ ಸಿಗುತ್ತದೆ. ಆದರೆ ಬೇ#ಟೆಯ ವಿಷಯಕ್ಕೆ ಬಂದರೆ ಸಿಂಹ, ಹುಲಿಗಳು ಚಿರತೆಗೆ ಸರಿ ಸಮಾನ. ಸದ್ಯಕ್ಕೆ ಚರ್ಚೆಯ ವಿಷಯವೇನೆಂದರೆ ನಾಯಿಯು ಓಡುತ್ತಿರುವ ವೇಗ. ಪ್ರಸ್ತುತ ನಾಯಿಯ ಓಡುತ್ತಿರುವ ಬಗೆಯನ್ನು ಕಂಡು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.
ವ್ಯಕ್ತಿಯ ಹಿಂದೆ ಅಥವಾ ಗಾಡಿಯ ಹಿಂದೆ ನಾಯಿಯು ಓಡುತ್ತಿರುವದನ್ನು ನೀವೆಲ್ಲ ನೋಡಿರಬಹುದು. ಆದರೆ ನಾಯಿ ಎಷ್ಟರ ಮಟ್ಟಿಗೆ ವೇಗವಾಗಿ ಓಡುತ್ತೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾಯಿ ಓಡುತ್ತಿರುವ ಸ್ಪೀಡ್ ನೋಡಿದರೆ ನಂಬಿಕೆಯ ಬರುವದಿಲ್ಲ.
ಪ್ರಸ್ತುತ ವಿಡಿಯೋದಲ್ಲಿ ಒಂದು ರೈಲ್ವೆ ಟ್ರ್ಯಾಕ್ ಹತ್ತಿರ ಕೆಲವು ನಾಯಿಗಳು ನಿಂತಿರುತ್ತವೆ. ಅಷ್ಟರಲ್ಲಿ ಆ ರೈಲು ಹಳಿಯ ಮೇಲಿಂದ ತುಂಬಾ ವೇಗದಿಂದ ಒಂದು ಟ್ರೆನ್ ಬರುತ್ತೆ. ರೈಲಿನ ಧ್ವನಿ ಬರುತ್ತಿದ್ದ ಹಾಗೆ ಆ ಎಲ್ಲ ನಾಯಿಗಳ ಲಕ್ಷ್ಯ ರೈಲಿನ ಕಡೆಗೆ ಹೋಗುತ್ತದೆ.
ಟ್ರೈನ್ ಸಮೀಪ ಬರುತ್ತದೆ, ಅಷ್ಟರಲ್ಲಿ ಅಲ್ಲಿದ್ದ ನಾಯಿಗಳಲ್ಲಿ ಒಂದು ನಾಯಿ ಟ್ರೈನ್ ಜೊತೆಗೆ ಓಡಲು ಪ್ರಾರಂಭ ಮಾಡುತ್ತೆ. ಅದು ಹೇಗೆ ಓಡುತ್ತೆ ಎಂದರೆ ಟ್ರೈನ್ ಮತ್ತು ನಾಯಿ ನಡುವೆ ಓಡುವ ಸ್ಪರ್ಧೆಯೇ ನಡೆದಿದೆ ಅನ್ನೋ ಹಾಗೆ ಈ ನಾಯಿ ರೈಲಿನ ಜೊತೆಗೆ ಓಡುತ್ತೆ. ಯಾವಾಗ ನಾಯಿ ಓಡಲು ಪ್ರಾರಂಭ ಮಾಡುತ್ತದೆಯೋ ಆ ಸಮಯದಲ್ಲಿ ರೈಲು ನಾಯಿಗಿಂತಲೂ ಸ್ವಲ್ಪ ಮುಂದೆ ಇರುತ್ತೆ. ಆದರೂ ಸಹ ನಾಯಿ ಗಾಳಿಯ ವೇಗದಲ್ಲಿ ಓಡಿ ರೈಲನ್ನು ಹಿಂದೆ ಹಾಕುತ್ತದೆ. ಎಷ್ಟು ಸ್ಪೀಡಾಗಿ ಓಡುತ್ತೆ ಅಂದರೆ ರೈಲಿನ ಇಂಜಿನ್ ಸಹ ಹಿಂದೆ ಹಾಕುತ್ತೇ.
ವಿಡಿಯೋ ನೋಡಿ
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ last_dog_pack ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದನ್ನು ನೋಡಿದ ಅನೇಕ ನೆಟ್ಟಿಗರು ನಾಯಿಯ ವೇಗದ ಕುರಿತು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋಗೆ ಲೈಕ್ಸ್ ಸಹ ತುಂಬಾ ಬರುತ್ತಿವೆ.