ರೋಲ್ಸ್ ರಾಯ್ಸ್ ಕಾರಿನ ಲೋಗೋ ಕದಿಯಲು ಹೋದರೆ ಏನಾಗುತ್ತೆ ಮಾಹಿತಿ ಇದೆಯಾ? ನೋಡಿ ಈ Video
ಕಾರುಗಳ ಬಗ್ಗೆ ತಲೆಕೆಡಿಸಿಕೊಳ್ಳುವವರಿಗೆ ಅಥವಾ ಕಾರಿನ ಬಗ್ಗೆ ಜ್ಞಾನವಿದ್ದವರಿಗೆ ರೋಲ್ಸ್ ರಾಯ್ಸ್ ಕಾರು ಎಂದರೇನು ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ಖರೀದಿಸುವುದು ಬಿಡಿ ಕನಸು ಕಾಣಲು ಸಹ ತುಂಬಾ ದುಬಾರಿಯಾಗಿದೆ ಈ ಕಾರು. ಕಾರಣ ಕನಸಿನಲ್ಲಿಯೂ ಈ ಕಾರು ಬರುವುದು ತುಂಬಾ ವಿರಳ. ಈ ಕಾರು ಉಪಯೋಗಿಸುವ ಭಾಗ್ಯ ಆಗರ್ಭ ಶ್ರೀಮಂತರಿಗಷ್ಟೇ ಎಂದರೆ ತಪ್ಪಲ್ಲ. ಯಾಕೆಂದರೆ ಈ ಕಾರಿನ ಬೆಲೆ ಸಾಮಾನ್ಯ ಮನುಷ್ಯನಿಗೆ ಎಂದಿಗೂ ಕೈಗೆಟುಕುವದಿಲ್ಲ. ಈ ಕಾರುಗಳ ಬೆಲೆ ಕೋಟಿ ಕೋಟಿ ರೂಪಾಯಿಗಳಲ್ಲಿ ಇದೆ. ಹೇಗೆ ಈ ಗಾಡಿಯ ಬೆಲೆ ಇದೆಯೋ ಹಾಗೆಯೇ ಈ ಗಾಡಿಯ ಕ್ವಾಲಿಟಿಯು ಸಹ ಇದೆ.
ಈ ಗಾಡಿಯನ್ನು ರಸ್ತೆಯ ಮೇಲೆ ಓಡಾಡುವುದನ್ನು ಕಂಡರೆ ಜನರು ಕಣ್ಣುರೆಪ್ಪೆಗಳನ್ನು ಬಡಿಯದೆ ಹಾಗೆಯೇ ನೋಡುತ್ತಲೇ ನಿಲ್ಲುತ್ತಾರೆ. ಅನೇಕ ಜನರು ಈ ಗಾಡಿಯನ್ನು ಖರೀದಿಸುವ ಕನಸು ನೋಡುತ್ತಾರೆ, ಆದರೆ ಆ ಅದೃಷ್ಟ ಎಲ್ಲರಿಗೂ ಒಲಿಯುವುದಿಲ್ಲ. ಈ ವಾಹನದ ಬರೀ ಚಿಕ್ಕ ಲೋಗೋ ಲಕ್ಷ ಲಕ್ಷ ರೂಪಾಯಿಗಳ ಬೆಲೆ ಹೊಂದಿದೆ.
ಕಂಪನಿಯು ಈ ಲೋಗೋವನ್ನು ಮಾರಾಟ ಮಾಡುವುದಿಲ್ಲ. ಇದನ್ನು ಮಾರಾಟ ಮಾಡುವವರು ಬರೀ ಕಳ್ಳರು ಮಾತ್ರ. ಯಾವುದೇ ಕಂಪನಿಯ ಲೋಗೋ ಆ ಕಂಪನಿಯ ಕಾರಿನ ಬಾನೆಟ್ ಮೇಲೆ ಅಥವಾ ಮುಂದುಗಡೆ ಅಳವಡಿಸಿರುತ್ತಾರೆ. ರೋಲ್ಸ್ ರಾಯ್ಸ್ ಲೋಗೋ ಗೆ spirit of ecstasy ಎನ್ನುತ್ತಾರೆ.
ಈ ಲೋಗೋದಲ್ಲಿ ಒಬ್ಬಳು ಮಹಿಳೆಯ ಮೂರ್ತಿ ಇದೆ. ಗಾಳಿಗೆ ಆಕೆಯ ಹಾರುತ್ತಿರುವ ಬಟ್ಟೆಗಳಿಂದ ಅದು ಬಟ್ಟೆಯಲ್ಲದೆ ಆಕೆಯ ರೆಕ್ಕೆಗಳಂತೆ ಕಾಣಿಸುತ್ತವೆ. ಈ ಲೋಗೋ ತುಂಬಾ ಬೆಲೆಬಾಳುವ ದುಬಾರಿ ವಸ್ತುವಾಗಿದೆ. ಕೆಲವು ದಿನಗಳ ಹಿಂದೆ ಈ ಲೋಗೋದ ಕಳ್ಳತನ ಹೆಚ್ಚಾಗಿತ್ತು. ಹೀಗಾಗಿಯೇ ಮಾಧ್ಯಮಗಳಲ್ಲಿ ಇದರ ಬಗ್ಗೆ ತುಂಬಾ ಚರ್ಚೆಯಾಗುತ್ತಿತ್ತು.
ವೀಡಿಯೊ ನೋಡಿ
ಈ ವಾಹನದ ಲೋಗೋದ ಆಗುತ್ತಿರುವ ಕಳ್ಳತನವನ್ನು ನಿಲ್ಲಿಸಲು ಕಂಪನಿಯು ಒಂದು ಸುಂದರವಾದ ಐಡಿಯಾ ಜಾರಿಗೆ ತಂದಿತು. ಈ ಐಡಿಯಾ ಏನಿದೆ ಎಂಬುದು ಈ ವಿಡಿಯೋ ಮುಖಾಂತರ ನಿಮಗೆ ಗೊತ್ತಾಗುತ್ತದೆ ನೋಡಿ ಈ ವಿಡಿಯೋ. ಕಾರಣ ಯಾರೇ ಆಗಲಿ ಲೋಗೊಕ್ಕೆ ಬರೀ ಕೈ ಹಚ್ಚಿದರೆ ಸಾಕು ಅದು ತಕ್ಷಣ ಕಣ್ಮರೆಯಾಗಿ ಬಿಡುತ್ತದೆ. ಒಂದು ವೇಳೆ ವ್ಯಕ್ತಿ ದುರದೃಷ್ಟನಾಗಿದ್ದರೆ ಆತನ ಕೈಗೆ ಗಾಯವಾಗಬಹುದು. ಯಾಕೆಂದರೆ ರೋಲ್ಸ್ ರೊಯ್ಸ್ ಕಂಪನಿಯ ಎಷ್ಟು ತನ್ನ ವಾಹನದ ಕಾಳಜಿಯನ್ನು ತೆಗೆದುಕೊಳ್ಳುತ್ತದೆ ಅಷ್ಟೇ ಕಾಳಜಿಯನ್ನು ಅದು ತನ್ನ ಲೋಗೋ ಮೇಲೆಯೂ ತೋರುತ್ತದೆ.