ರೋಹಿತ್ ಎಂದರೆ ಭಾರತದ ಇಂಜಮಾಮ್, ಇವರಿಗೆ ಪಾಕಿಸ್ತಾನದಲ್ಲಿ ವಿರಾಟ್ ಗಿಂತಲೂ… ಶೋಯಬ್ ಅವರ ಪ್ರತಿಕ್ರಿಯೆ ನೋಡಿ.
T20 ವರ್ಲ್ಡ್ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸಮರವನ್ನು ನೋಡಲು ಎರಡು ದೇಶದ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ನಾಳೆಯ ರವಿವಾರ 24 ಅಕ್ಟೋಬರ್ ಎರಡು ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಮುನ್ನ ಪಾಕಿಸ್ತಾನದ ಮಾಜಿ ಪೆಸರ್ ಶೋಯಬ್ ಅಖ್ತರ್ ಅವರ ಜೀನ್ಯೂಸ್ ಜೊತೆಗೆ ಮಾತನಾಡುವಾಗ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಭಾರತದ ಇಂಜಮಾಮ್-ಉಲ್-ಹಕ್ ತರ ಎಂಬ ಮಾತನ್ನು ಹೇಳುತ್ತಾರೆ.
ತಮ್ಮ ಅಭಿಪ್ರಾಯದಲ್ಲಿ ಮುಂದೆ ಹೀಗೂ ಹೇಳುತ್ತಾರೆ, ಭಾರತ ತಂಡ ಬಲಿಷ್ಠವಾಗಿಲ್ಲ ಎಂದು ಪಾಕಿಸ್ತಾನದಲ್ಲಿ ಅನ್ನುವವರು ಯಾರು ಇಲ್ಲ. ಸದ್ಯದ ಭಾರತ ತಂಡವನ್ನು ಮುಕ್ತವಾಗಿ ಹೊಗಳುತ್ತಾರೆ. ವಿರಾಟ್ ಕೊಹ್ಲಿ ಅವರಿಗೆ ಮಹಾನ್ ಆಟಗಾರ ಮತ್ತು ರೋಹಿತ್ ಶರ್ಮಾ ಅವರಂತೂ ವಿರಾಟ್ ಗಿಂತಲೂ ಮಹಾನ್ ಆಟಗಾರನೆಂದು ತಿಳಿಯುತ್ತಾರೆ. ರೋಹಿತ್ ಶರ್ಮಾ ಅಂದರೆ ಭಾರತದ ಇಂಜಮಾಮ್-ಉಲ್-ಹಕ್ ಎಂದು ಸಂಬೋಧಿಸುತ್ತಾರೆ. ರಿಷಬ್ ಪಂತ್ ಆಸ್ಟ್ರೇಲಿಯಾದಲ್ಲಿ ಆಡಿದ ರೀತಿಯನ್ನು ನೋಡಿ ಅವರಿಗೂ ಸಹ ತುಂಬಾ ಹೊಗಳುತ್ತಾರೆ. ಅದರನಂತರ ಸೂರ್ಯಕುಮಾರ ಯಾದವ ಅವರು ಸಹ ಪಾಕಿಸ್ತಾನದಲ್ಲಿ ಹೊಗಳಿಕೆಗೆ ಪಾತ್ರವಾಗಿದ್ದಾರೆ. ನಮ್ಮ ಪಾಕಿಸ್ತಾನದಲ್ಲಿ ಭಾರತ ತಂಡದ ಬಗ್ಗೆ ಸಾಕಷ್ಟು ಧನಾತ್ಮಕ ಮತ್ತು ಒಳ್ಳೆಯ ವಿಷಯಗಳನ್ನು ಚರ್ಚೆ ಮಾಡಲಾಗುತ್ತದೆ.
ಮುಂದೆ ಅವರು ಹೀಗೂ ಹೇಳುತ್ತಾರೆ, ಒಂದು ವೇಳೆ ನೀವೂ ನನ್ನ ವಿಡಿಯೋಗಳನ್ನು ನೋಡಿದಾಗ ನಿಮಗೆ ಗೊತ್ತಾಗುತ್ತದೆ ಆ ವಿಡಿಯೋಗಳಲ್ಲಿ ಒಂದು ವಿಡಿಯೋ ಸಹ ದ್ವೇಷ ಮತ್ತು ಮತ್ಸರದಿಂದ ಕೂಡಿಲ್ಲ. ಒಂದು ಮಾಜಿ ಕ್ರಿಕೆಟ್ ಆಟಗಾರ, ಬ್ರಾಂಡ್ ಅಂಬಾಸಿಡರ್ ಮತ್ತು ಮನುಷ್ಯನಾಗಿ ನಾನು ಮಾತನಾಡುವ ಮಾತುಗಳಲ್ಲಿ ಒಳ್ಳೆಯ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನಾನು ಕಾಮೆಂಟ್ಗಳನ್ನು ಮಾಡುತ್ತೇನೆಂದು ಜನ ಮಾತನಾಡುತ್ತಾರೆ, ಆದರೆ ಇದು ನಿಜವಲ್ಲ. ಭಾರತದ ತುಂಬಾ ನನ್ನ ಅಭಿಮಾನಿಗಳಿದ್ದಾರೆ. ನಾನೊಬ್ಬ ಭಾಗ್ಯವಂತ ಪಾಕಿಸ್ತಾನಿ ನಾಗರಿಕನಾಗಿದ್ದೇನೆ. ಯಾಕೆಂದರೆ ನಾನು ಭಾರತೀಯರಿಗೆ ಇಷ್ಟವಾಗುತ್ತೆನೆ ಇದರಲ್ಲಿ ಯಾವುದೇ ಸಂಶಯವಿಲ್ಲ. ನಾನು ಅವರ ಮತ್ತು ನನ್ನ ಭಾವನೆಗಳಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ವರ್ತಿಸಲು ಇಚ್ಛಿಸುವೆ.