ರೋಹಿತ್ ಶರ್ಮಾ ಅವರ ಒಂದು ಬ್ಯಾಟ್ ಎಷ್ಟು ದಿನಗಳ ವರೆಗೆ ಬಾಳಿಕೆ ಬರುತ್ತೆ ನಿಮಗೆ ಗೊತ್ತಾ?
ಕೊರನಾ ಕಾರಣದಿಂದ ಐಪಿಎಲ್ ದ 13ನೇ ಆವೃತ್ತಿಯ ಪಂದ್ಯಗಳನ್ನು ದೇಶ ಬಿಟ್ಟು ಹೊರಗೆ ಆಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಟೀಮ್ ನಾಯಕ ರೋಹಿತ್ ಶರ್ಮಾ ಅವರು ಒಂದು ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ. ಯುಎಇಯಲ್ಲಿ ಆಡುತ್ತಿರುವ ಐಪಿಎಲ್ ಮ್ಯಾಚ್ ಗಳಿಗಾಗಿ ರೋಹಿತ್ ಶರ್ಮಾ ಅವರು ವಿಶೇಷ ತಯಾರಿಯನ್ನು ಮಾಡಿಕೊಂಡು ಬಂದಿದ್ದಾರೆ. ಕ್ರಿಕೆಟಿನ ಈ ಚಿಕ್ಕ ಪ್ರಕಾರದಲ್ಲಿ ರೋಹಿತ್ ಶರ್ಮಾ ಅವರೇ ಹೇಳುವ ಪ್ರಕಾರ ಅವರ ಬ್ಯಾಟ್ ಗಳು ಒಂದೂವರೆಯಿಂದ ಎರಡು ತಿಂಗಳಗಳವರೆಗೆ ಮಾತ್ರ ಬಾಳಿಕೆ ಬರುತ್ತವೆ ಅಂತೆ.
ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ದ ಅಧಿಕೃತವಾದ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ, ನನ್ನ ಬ್ಯಾಟ್ ಹೆಚ್ಚಾಗಿ ದೊಡ್ಡ ಆಕಾರದಾಗಿರುತ್ತದೆ, ಆದರೆ ಯಾವುದೇ ಬ್ಯಾಟ್ ನೀವು ಯಾವ ರೀತಿಯ ಕ್ರಿಕೆಟ್ ಆಡುತ್ತಿದ್ದೀರಿ ಅದರ ಮೇಲೆ ಬ್ಯಾಟಿನ ಬಾಳಿಕೆ ನಿಗದಿಯಾಗಿರುತ್ತದೆ. ಕ್ರಿಕೆಟಿನ ಈ ಮಿನಿ ಪ್ರಕಾರದಲ್ಲಿ ಶಾಟ್ ಗಳನ್ನು ಹೊಡೆಯುವ ಅವಶ್ಯಕತೆ ತುಂಬಾ ಇರುತ್ತದೆ. ಹಾಗೆಯೇ ಪ್ರಾಕ್ಟೀಸ್ ಮಾಡುವಾಗ ಸಹಿತ ಇದೇ ರೀತಿ ಆಡುವ ಅವಶ್ಯಕತೆ ಇರುತ್ತದೆ. ಅಂದಾಗ ನಿಮ್ಮಬ್ಯಾಟ್ ಒಡೆದು ಹೋಗುವ ಸಾಧ್ಯತೆ ಇರುತ್ತದೆ.
ಅಂತರರಾಷ್ಟ್ರೀಯ ಟಿ20 ಸ್ಪರ್ಧೆಗಳಲ್ಲಿ ಮತ್ತು ಐಪಿಎಲ್ ಗಳಂತಹ ಸ್ಪರ್ಧೆಗಳಲ್ಲಿ ಹೆಚ್ಚೆಂದರೆ, ನನ್ನ ಬ್ಯಾಟ್ ಎರಡು ತಿಂಗಳಷ್ಟೇ ಬಾಳಿಕೆ ಬರುತ್ತದೆ. ಈ ಎಲ್ಲ ಕಾರಣಗಳಿಂದ ಮತ್ತು ಕುರಿಯರ್ ಸಹಿತ ಸಮಯಕ್ಕೆ ಸರಿಯಾಗಿ ಬರುತ್ತದೋ ಇಲ್ಲವೋ ಅಂತ ನಾನು ನನ್ನ ಜೊತೆಗೆ 9 ಬ್ಯಾಟ್ ಗಳನ್ನು ತಂದಿದ್ದೇನೆ.
ಹಿಂದಿನ ವರ್ಷದ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಗಳಿಂದ ಮೊದಲ ಪಂದ್ಯದಲ್ಲಿ ಸೋತು ಮುಖಭಂಗ ಅನುಭವಿಸಬೇಕಾಯಿತು. ಆನಂತರ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೋಹಿತ್ ಶರ್ಮಾ ಅವರು ಭರ್ಜರಿ 80 ರನ್ಗಳ ಆಟವಾಡಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೊದಲ ಗೆಲುವನ್ನು ದಾಖಲಿಸಿ ಕೊಟ್ಟಿದ್ದಾರೆ. ಆದರೆ ಸೆಪ್ಟೆಂಬರ್ 28ರಂದು ಬೆಂಗಳೂರು ವಿರುದ್ಧ ಮ್ಯಾಚ್ ಟೈ ಆಗಿ ನಂತರ ಸೂಪರ್ ಓವರ್ ನಲ್ಲಿ ಆರ್ಸಿಬಿ ತಂಡ ಗೆಲುವು ದಾಖಲಿಸಿ ಮುಂಬೈ ಇಂಡಿಯನ್ಸ್ ಗೆ ಸೋಲಿನ ಕಹಿಯನ್ನು ಉಣಿಸಿತು.