ರೋಹಿತ್ ಶರ್ಮಾ ಮಾಡಿರುವ 264 ರನ್ ದಾಖಲೆ ಮುರಿಯುವ ಸಾಮರ್ಥ್ಯ ಹೊಂದಿರುವ 5 ಜನ ಬ್ಯಾಟ್ಸ್ಮನ್ ಗಳು ಇವರೇ ನೋಡಿ
ಏಕದಿನ ಕ್ರಿಕೆಟ್ ನಲ್ಲಿ 3 ಡಬಲ್ ಶತಕಗಳನ್ನು ಬಾರಿಸಿದ ಏಕೈಕ ಆಟಗಾರ ಎಂದರೆ ಅವರು ಟೀಮ್ ಇಂಡಿಯಾದ ದಿಗ್ಗಜ ಬ್ಯಾಟ್‌ಮ್ಯಾನ್ ಆಗಿರುವ ರೋಹಿತ್ ಶರ್ಮಾ ಅವರು. 2014ರಲ್ಲಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ರೋಹಿತ್ ಶರ್ಮಾ 264 ರನ್ ಗಳ ಮಾಡಿದ್ದು, ಏಕದಿನ ಕ್ರಿಕೆಟ್ ಪಂದ್ಯಗಳ ಇತಿಹಾಸದಲ್ಲಿ ಇದು ಅತಿ ದೊಡ್ಡ ಇನ್ನಿಂಗ್ಸ್ ಎನ್ನಲಾಗಿದೆ. ರೋಹಿತ್ ಶರ್ಮ ಅವರು ಮಾಡಿರುವ ಈ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭವಾದ ಕೆಲಸ ಖಂಡಿತ ಅಲ್ಲ. ಆದರೆ ಭವಿಷ್ಯದಲ್ಲಿ ರೋಹಿತ್ ಶರ್ಮಾ ಅವರ ಈ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯವುಳ್ಳ 5 ಜನ ದಿಗ್ಗಜ ಕ್ರಿಕೆಟ್ ಆಟಗಾರರ ಕುರಿತಾಗಿ ಈ ಲೇಖನದ ಮೂಲಕ ನಾವು ತಿಳಿಸಲು ಹೊರಟಿದ್ದೇವೆ.
1 ಡೇವಿಡ್ ವಾರ್ನರ್ :

ಆಸ್ಟ್ರೇಲಿಯಾದಸ್ಫೋಟಕ ಬ್ಯಾಟ್ಸ್ ಮನ್ ಎನಿಸಿಕೊಂಡಿರುವ ಇವರಿಗೆ ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯವಿದೆ. ಏಕದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಡೇವಿಡ್ ವಾರ್ನರ್ ಅವರ ಅತ್ಯುತ್ತಮ ಸ್ಕೋರ್ ಎಂದರೆ 179 ರನ್ ಗಳಾಗಿವೆ. ಅವರ ಹೆಸರಿನಲ್ಲಿ ಯಾವುದೇ ಡಬಲ್ ಶತಕಗಳ ದಾಖಲೆ ಇಲ್ಲದೆ ಇರಬಹುದು, ಆದರೆ ಭವಿಷ್ಯದಲ್ಲಿ ಒಂದು ಅತ್ಯುತ್ತಮವಾದ ದಿನದಂದು ಅವರು ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿಯಬಹುದು ಎಂದು ಹೇಳಲಾಗುತ್ತದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಇವರು ಟ್ರಿಪಲ್ ಶತಕಗಳನ್ನು ಬಾರಿಸಿದ್ದು ಅವರು ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.
2 ಜೇಸನ್ ರಾಯ್ :

ಇಂಗ್ಲೆಂಡ್ ನ ಕ್ರಿಕೆಟ್ ಆಟಗಾರನಾಗಿರುವ ಇವರು ಏಕದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸ್ಪೋಟಕ ಓಪನರ್ ಎನಿಸಿಕೊಂಡಿದ್ದಾರೆ. ಇವರು ನೂರಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ಗಳನ್ನು ಹೊಂದಿದ್ದಾರೆ. ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಜೇಸನ್ ರಾಯ್ ಅವರ ಸ್ಟ್ರೈಕ್ ರೇಟ್ 107.15 ಆಗಿದ್ದು, ಅವರ ಅತ್ಯುತ್ತಮ ಸ್ಕೋರ್ 180 ರನ್ ಗಳಾಗಿವೆ. ಇವರು ಸಹ ಮುಂದೊಂದು ದಿನ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮರೆಯಬಹುದಾದ ಸಾಮರ್ಥ್ಯ ಹೊಂದಿದ್ದಾರೆ ಎನ್ನಲಾಗಿದೆ.
3 ವಿರಾಟ್ ಕೊಹ್ಲಿ:

ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಅವರನ್ನು ಚೇಸ್ ಮಾಸ್ಟರ್ ಎಂದು ಕರೆಯಲಾಗುತ್ತದೆ. ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ 43 ಶತಕ ಗಳಿದ್ದರೆ ಅವರ ಸರಾಸರಿ 59.07 ಆಗಿದೆ. ಟೀಮ್ ಇಂಡಿಯಾದಲ್ಲಿ ಅವರು ಮೂರನೇ ನಂಬರ್ ನಲ್ಲಿ ಬ್ಯಾಟ್ಸ್ ಮ್ಯಾನ್ ಆಗಿದ್ದಾರೆ. ಒಂದು ವಿಶೇಷ ದಿನ ಅಬರು ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿಯಬಹುದು ಎನ್ನುವ ನಿರೀಕ್ಷೆ ಇದೆ.
4 ಎವೆನ್ ಲೂಯಿಸ್:

ವೆಸ್ಟ್ ಇಂಡೀಸ್ ತಂಡದ ಓಪನರ್ ಆಗಿರುವ ಇವರು ಮೊದಲ ಬಾಲ್ ನಿಂದಲೇ ಕ್ರೀಸ್ ಅನ್ನು ಹೊಡೆಯುತ್ತಾರೆ. ಟಿ-ಟ್ವೆಂಟಿ ಮತ್ತು ಒನ್ ಡೇ ಕ್ರಿಕೆಟ್ ನಲ್ಲಿ ಅವರು ಒಂದೇ ರೀತಿಯಲ್ಲಿ ಆಟವನ್ನು ಆಡುತ್ತಾರೆ. ಏಕದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಅವರ ಅತ್ಯುತ್ತಮ ಸ್ಕೋರ್ 176 ರನ್ ಗಳಾಗಿದ್ದಾರೆ, ಅವರ ಸ್ಟ್ರೈಕ್ ರೇಟ್ ಟಿ20 ಕ್ರಿಕೆಟ್ ನಲ್ಲಿ 155 ಕ್ಕಿಂತ ಹೆಚ್ಚಾಗಿದೆ.
5 ಎರಾನ್ ಫಿಂಚ್:

ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರಾದ ಇವರಲ್ಲಿ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿಯುವ ಸಾಮರ್ಥ್ಯವಿದೆ ಎನ್ನಲಾಗುತ್ತಿದೆ. ಏಕದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಇವರ ಹೆಸರಿನಲ್ಲಿ 17 ಶತಕಗಳು, ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಇವರ ಅತ್ಯುತ್ತಮ ಸ್ಕೋರ್ 172 ರನ್ ಗಳಾಗಿವೆ. ಇದನ್ನು ಗಮನಿಸಿದಾಗ ಇವರು 50 ಓವರ್ ಗಳಲ್ಲಿ ಬಹಳ ಬೇಗ ದ್ವಿಶತಕ ವನ್ನು ಬಾರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಬಹುದಾಗಿದೆ.