ಲಂಡನ್ ಬೀದಿಗಳಲ್ಲಿ ಫುಲ್ ಜೋಶ್ ನಲ್ಲಿ ಡಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಶ್ರೀ! ವಿಡಿಯೋ ಸಖತ್ ವೈರಲ್!

ಜನಪ್ರಿಯ ಯೂ ಟ್ಯೂಬರ್ ಧನಾಶ್ರೀ ವರ್ಮಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಹೊಸ ಸೆನ್ಸೇಷನ್ ಆಗಿ ಮಾರ್ಪಟ್ಟಿದ್ದಾರೆ. ಆಕೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂಚಲನವನ್ನೇ ಸೃಷ್ಟಿ ಮಾಡುತ್ತಿದ್ದು, ಧನಾಶ್ರೀ ವರ್ಮಾ ಒಬ್ಬ ಅದ್ಬುತ ನರ್ತಕಿ ಎಂಬುದು ಸಾಬೀತಾಗಿದೆ. ಧನಾಶ್ರಿ ವರ್ಮಾ ಅವರ ಡಾನ್ಸ್ ವೀಡಿಯೋಗಳನ್ನು ನೋಡುತ್ತಾ ಅವರ ಅಭಿಮಾನಿಗಳು ಫಿದಾ ಆಗುತ್ತಿದ್ದಾರೆ.‌ ಧನಾಶ್ರೀ ವರ್ಮಾ ಇತ್ತೀಚಿಗಷ್ಟೇ ಭಾರತೀಯ ಕ್ರಿಕೆಟ್ ನ ಸ್ಪಿನ್ ಬೌಲರ್ ಯಜ್ವೇಂದ್ರ ಚಹಲ್ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆ ಫೋಟೋಗಳು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ವೃತ್ತಿಯಿಂದ ಈಕೆ ವೈದ್ಯೆಯಾದರೂ ಕೂಡಾ ನೃತ್ಯ ಆಕೆಯ ಪ್ಯಾಷನ್ ಆಗಿದ್ದು, ಕೊರಿಯೋಗ್ರಫಿ ಕೂಡಾ ಬಹಳ ಚೆನ್ನಾಗಿ ಮಾಡುವ ಈಕೆಯ ಹೊಸ ವೀಡಿಯೋ ಒಂದು ಈಗ ಮತ್ತೊಮ್ಮೆ ಸೋಶಿಯಲ್ ವೀಡಿಯೋಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.
ಈ ವೀಡಿಯೋದಲ್ಲಿ ಆಕೆ ಲಂಡನ್ ನ ಬೀದಿಗಳಲ್ಲಿ ಕುಣಿದು ಕಪ್ಪಳಿಸಿರುವ ಜೋಶ್ ಇರುವ ವೀಡಿಯೋ ಇದಾಗಿದೆ. ಧನಾಶ್ರೀ ಅವರ ಈ ಸಖತ್ ಡಾನ್ಸ್ ವೀಡಿಯೋವನ್ನು ಈಗಾಗಲೇ 42 ಲಕ್ಷ ಮಂದಿ ವೀಕ್ಷಣೆ ಮಾಡಿದ್ದು, ಇನ್ನೂ ಕೂಡಾ ಈ ವೀಡಿಯೋ ನೋಡುತ್ತಲೇ ಇದ್ದಾರೆ. ಈ ನೃತ್ಯದಲ್ಲಿ ಧನಾಶ್ರೀ ಅವರು ತಮ್ಮ ಡಾನ್ಸ್ ಪಾರ್ಟ್ನರ್ ಜೊತೆಗೆ ಸೆನೊರಿಟಾ ಹಾಡಿಗೆ ಸ್ಟೆಪ್ ಗಳನ್ನು ಹಾಕಿದ್ದು, ಲಂಡನ್ ಬೀದಿಗಳಲ್ಲಿ ಸೆನೊರಿಟಾ ಹಾಡಿಗೆ ಹಾಕಿರುವ ಹೆಜ್ಜೆಗಳು ಡಾನ್ಸ್ ಎಂದ್ರೆ ಇಷ್ಟಪಡುವವರನ್ನು ಹುಚ್ಚೆದ್ದು ಕುಣಿಸುವಂತೆ ಮೂಡಿ ಬಂದಿದೆ.

ಕ್ರಿಕೆಟಿಗ ಯುಜುವೇಂದ್ರ ಚಹಲ್ ಅವರು ತಮ್ಮ ಆಟದಿಂದ ಜನಪ್ರಿಯರಾಗಿದ್ದರೆ, ಈಗ ಅವರ ಭಾವೀ ಪತ್ನಿ ತನ್ನ ಡಾನ್ಸ್ ನಿಂದಾಗಿ ಸಂಚಲನವನ್ನು ಸೃಷ್ಟಿಸಿದ್ದಾರೆ, ಜನಪ್ರಿಯ ಯೂ ಟ್ಯೂಬರ್ ಆಗಿದ್ದಾರೆ ಹಾಗೂ ವೃತ್ತಿಯಿಂದ ವೈದ್ಯೆ ಕೂಡಾ ಆಗಿ ತಾನೊಬ್ಬ ಬಹುಮುಖ ಪ್ರತಿಭಾವಂತೆ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ.‌ ಧನಾಶ್ರೀ ಅವರು ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದು, ಒಂದು ವಿಭಿನ್ನವಾದ ಹೆಸರು ಹಾಗೂ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡು ಸಾಗುತ್ತಿದ್ದಾರೆ. ಧನಾಶ್ರೀ ವರ್ಮಾ ಅವರ ಡಾನ್ಸ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ನೋಡಿ…

ಧನಾಶ್ರೀ ಅವರು ವೀಡಿಯೋಗಳ ಮೂಲಕ ಸಾಕಷ್ಟು ಹೆಸರನ್ನು ಮಾಡಿದ್ದು, ಆಕೆಯ ವೀಡಿಯೋಗಳನ್ನು ನೋಡುವ ಮಂದಿ ಕೂಡಾ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದು, ವೀಡಿಯೋಗಳನ್ನು ಶೇರ್ ಮಾಡುವ ಮೂಲಕ ಅವರು ಧನಾಶ್ರೀ ಅವರ ವೀಡಿಯೋಗಳು ಎಲ್ಲಾ ಕಡೆ ಸದ್ದು ಮಾಡುವಂತೆ ಮಾಡಿದ್ದಾರೆ. ದಿನೇ ದಿನೇ ಧನಾಶ್ರೀ ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಏರುತ್ತಾ ಸಾಗಿದೆ‌. ಧನಾಶ್ರೀ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂಚಲವನ್ನು ಹುಟ್ಟು ಹಾಕಿರುವುದು ಮಾತ್ರ ವಾಸ್ತವವಾಗಿದೆ.