ಲಯನ್ ಪ್ರಾಂಕ್ ವೀಡಿಯೋಗೆ ರಿಮೋಟ್ ಕಾರ್ ಬಳಿಸಿ ಮಾಡಿದ್ರು ವಿಡಿಯೋ: ನಾಯಿಗಳ ಪ್ರತಿಕ್ರಿಯೆ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ರು ನೆಟ್ಟಿಗರು!

ಪ್ರಾಂಕ್ ವೀಡಿಯೋಗಳು ಅಂದ್ರೆ ಇತ್ರೀಚಿನ ದಿನಗಳಲ್ಲಿ ಒಂದು ಕ್ರೇಜ್. ಯೂಟ್ಯೂಬ್ ನಲ್ಲಿ ಹಾಕೋ ಪ್ರಾಂಕ್ ವೀಡಿಯೋಗಳು ಕಡಿಮೆ ಅವಧಿಯಲ್ಲೇ ಸಿಕ್ಕಾಪಟ್ಟೆ ವೈಎಲ್ ಆಗೋದನ್ನು ನೋಡಿದಾಗಲೇ ಅದಕ್ಕೆ ಯಾವ ಮಟ್ಟಕ್ಕೆ ಕ್ರೇಜ್ ಇದೆ ಅನ್ನೋದನ್ನು ತಿಳ್ಕೊಬಹುದು ನಾವು‌. ನಿತ್ಯ ಜೀವನದ ಜಂಜಾಟಗಳಲ್ಲಿ ಬೇಸತ್ತ ಮನಸ್ಸಿಗೆ ಹಾಸ್ಯವನ್ನು ಕಣ್ಮುಂದೆ ಇಡೋ ಪ್ರಾಂಕ್ ವೀಡಿಯೋ ಗಳು ಮುಖದಲ್ಲಿ ಒಂದು ನಗುವನ್ನು ಮೂಡಿಸೋದು ಮಾತ್ರಾನೇ ಅಲ್ದೇ ಮೈಂಡ್ ಸ್ವಲ್ಪ ರಿಲ್ಯಾಕ್ಸ್ ಆಗೋಕೆ, ಮನಸ್ಸಿನ ಭಾರ ಸ್ವಲ್ಪ ಕಡಿಮೆ ಆಗೋಕೆ ಖಂಡಿತ ಸಹಾಯ ಮಾಡುತ್ತೆ. ಆದ್ರೆ ಪ್ರಾಂಕ್ ವೀಡಿಯೋ ಗಳು ಕೂಡಾ ಹಿತ ಮಿತ ಎನಿಸುವ ಹಾಗೆ ಜನರನ್ನು ಪ್ರಾಣಿಗಳನ್ನು ಫೂಲ್ ಮಾಡಿದ್ರೆ ಓಕೆ, ಮಿತಿ ದಾಟಿದಾಗ ಅಯ್ಯೋ ಎಂತ ವೀಡಿಯೋನಪ್ಪ ಇದು ಎನಿಸಿ ಬಿಡುತ್ತೆ‌.

ಪ್ರಾಂಕ್ ವೀಡಿಯೋಗಳ ವಿಷಯಕ್ಕೆ ಬಂದ್ರೆ ಇಲ್ಲಿ ಅನೇಕರು ಅನೇಕ ರೀತಿಯ ಆಲೋಚನೆಗಳನ್ನ ಮಾಡಿ ತಮ್ಮದೇ ಆದ ಸ್ಟೈಲ್ ನಲ್ಲಿ ವೀಡಿಯೋಗಳನ್ನು ಮಾಡಿ ಹಾಕ್ತಾರೆ. ಕೆಲವರು ಜನರನ್ನು ಪ್ರಾಂಕ್ ಮಾಡ್ತಾರೆ, ಆದರೆ ಇನ್ನೂ ಕೆಲವರು ಜನರ ಜೊತೆ ಪ್ರಾಂಕ್ ಮಾಡೋಕೆ ಹೋಗಿ ಮತ್ತೆ ಸಮಸ್ಯೆ ಯಾಕೆ ಅಂತಾನೋ ಏನೋ, ಪ್ರಾಣಿಗಳ ಮೇಲೆ ಪ್ರಾಂಕ್ ವೀಡಿಯೋಸ್ ಮಾಡ್ತಾರೆ. ಅಂತಹವುಗಳಲ್ಲಿ ಟೈಗರ್ ಮತ್ತೆ ಲಯನ್ ಪ್ರಾಂಕ್ ವೀಡಿಯೋಗಳು ಹೆಚ್ಚು ಜನಪ್ರಿಯತೆ ಪಡೆದಿದೆ. ನಾಯಿಗಳಿಗೆ ಗೊತ್ತಾಗದ ಹಾಗೆ ಅವುಗಳ ಹತ್ತಿರ ಸಿಂಹ ಅಥವಾ ಹುಲಿಯ ಬೊಂಬೆಗಳನ್ನು ಇಟ್ಟು ನಂತರ ಅವುಗಳ ರಿಯಾಕ್ಷನ್ ರೆಕಾರ್ಡ್ ಮಾಡಿ ಶೇರ್ ಮಾಡೋ ವೀಡಿಯೋಗಳು ಎಷ್ಟೇ ಬಂದ್ರೂ ಕೂಡಾ ವೈರಲ್ ಆಗುತ್ತೆ.

ಈಗ ಇಂತದ್ದೇ ಒಂದು ಪ್ರಾಂಕ್ ವೀಡಿಯೋಗೆ ಒಂದು ಹೊಸ ಟಚ್ ನೀಡಿದ್ದಾರೆ ಒಬ್ರು ಯೂ ಟ್ಯೂಬರ್. ಅದೇನಪ್ಪಾ ಅಂದ್ರೆ ಅವರು ಈ ಬಾರಿ ಸಿಂಹದ ಬೊಂಬೆಯನ್ನು ನಾಯಿ ಬಳಿ ಇಟ್ಟೋ ಅಥವಾ ಹುಲಿಯ ವೇಷವನ್ನು ಹಾಕ್ಕೊಂಡು ನಾಯಿಯ ಬಳಿ ಹೋಗಿನೋ ಅವುಗಳ ರಿಯಾಕ್ಷನ್ ನೋಡಿಲ್ಲ. ಬದಲಾಗಿ ಟೆಕ್ನಾಲಜಿ ಬಳಕೆ ಮಾಡಿಕೊಂಡು, ಒಂದು ಆರ್ ಸಿ ಕಾರನ್ನು ಬಳಸಿಕೊಂಡು ಅದರ ಮೇಲೆ ಸಿಂಹದ ಬೊಂಬೆಯನ್ನು ಕೂರಿಸಿ ಸೆಟ್ ಮಾಡಿ, ರಿಮೋಟ್ ಮೂಲಕ ಆಪರೇಟ್ ಮಾಡಿದ್ದಾರೆ. ಅಂದ್ರೆ ಸಿಂಹದ ಬೊಂಬೆಯನ್ನು ನಾಯಿಗಳು ಇರೋ ಕಡೆ ಹೋಗಿ ಇಡೋ ಬದಲು ದೂರದಲ್ಲೇ ನಿಂತು ಆಪರೇಟ್ ಮಾಡೋದು.

ರಿಮೋಟ್ ನ ಮೂಲಕ ನಾಯಿಗಳು ಇರೋ ಕಡೆಗೆ ಸಿಂಹದ ಬೊಂಬೆಯನ್ನು ಚಲಿಸೋ ಹಾಗೆ ಮಾಡಿ, ನಾಯಿಗಳ ಹತ್ತಿರ ಹೋದಾಗ ಸಿಂಹದ ಸೌಂಡ್, ಬೊಂಬೆ ನಾಯಿ ಕಡೆ ನುಗ್ಗೋ ಹಾಗೆ ಮಾಡೋ ಎಫೆಕ್ಟ್ ನೋಡಿ ಮಲಗಿರೋ ನಾಯಿಗಳು ಸಿಂಹಾನೇ ಬಂತೇನೋ ಅನ್ಕೊಂಡು ಎದ್ದು ಬಿದ್ದು ತಮ್ಮ ಪ್ರಾಣಾನ ಉಳಿಸಿಕೊಳ್ಳೋಕೆ ಓಡದನ್ನು ನೋಡಿದಾಗ ಎಂತಹವರಿಗೂ ಕೂಡಾ ನಗು ಬರುತ್ತೆ. ಸಿಂಹ ಹತ್ತಿರ ಬಂದಾಗ ನಾಯಿಗಳು ನೀಡೋ ಪ್ರತಿಕ್ರಿಯೆ ನೆಟ್ಟಿಗರನ್ನು ನಕ್ಕು ನಗಿಸ್ತಾ ಇದೆ‌. ಎರಡೇ ತಿಂಗಳಲ್ಲಿ ಈ ವೀಡಿಯೋನ 37 ಲಕ್ಷ ಕ್ಕೂ ಹೆಚ್ಚು ಜನ ನೋಡಿದ್ದಾರೆ.

ವಿಡಿಯೋ ನೋಡಿ

ಸುಮಾರು 59 ಸಾವಿರ ಜನ ಲೈಕ್ ಮಾಡಿರೋ ಈ ವೀಡಿಯೋಗೆ ನೂರಾರು ಜನರು ಕಾಮೆಂಟ್ ಮಾಡಿದ್ದಾರೆ.ವೀಡಿಯೋ ನೋಡಿದವರಲ್ಲಿ ಬಹುತೇಕ ಎಲ್ಲರೂ ಕೂಡಾ ವೀಡಿಯೋ ಬಹಳ ಫನ್ನಿಯಾಗಿದೆ ಎಂದೇ ಕಾಮೆಂಟ್ ಗಳನ್ನು ಮಾಡಿದ್ದಾರೆ‌. ಕೆಲವರು ಸಿಂಹವನ್ನು ಆ ರೀತಿ ರಿಮೋಟ್ ಮೂಲಕ ಆಪರೇಟ್ ಮಾಡಿರೋದು ಬೆಸ್ಟ್ ಐಡಿಯಾ ಎಂದು ಹಾಡಿ ಹೊಗಳಿದ್ದಾರೆ. ಮತ್ತೆ ಕೆಲವರು ನಿಮ್ಮ ವೀಡಿಯೋಗೆ ಕಾರಣ ಆಗಿರೋ ಆ ನಾಯಿಗಳಿಗೆ ಊಟ ಹಾಕಿಸಿ ಅಂದ್ರೆ, ಒಂದಿಬ್ಬರು ಬೀದಿ ನಾಯಿಗಳನ್ನು ಓಡಿಸೋದಕ್ಕೆ ಇದು ನಿಜಕ್ಕೂ ಬೆಸ್ಟ್ ಐಡಿಯಾ ಅಂತ ಕೂಡಾ ಹೇಳಿದ್ದಾರೆ.