ಲಾಕ್’ಡೌನ್ ನಲ್ಲಿ ಬಾಯ್’ಫ್ರೆಂಡ್ ಜೊತೆ ಇರಲು ಹೋಗಿದ್ದಳು ಹುಡುಗಿ, ಮರಳಿ ಬಂದು ಮನೆಯಲ್ಲಿಯ ‘ದೃಶ್ಯ’ ನೋಡಿ ಫುಲ್ ಶಾಕ್!

ಕೋರೊನಾ ವೈರಸ್ ಮಾಹಾಮಾರಿಯಿಂದಾಗಿ ದೇಶದ ತುಂಬೆಲ್ಲ ಲಾಕ್ಡೌನ್ ಜಾರಿಯಲ್ಲಿ ತರಲಾಗಿದೆ. ಇದರಿಂದ ಹೆಚ್ಚಾಗುತ್ತಿರುವ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ಈ ಉಪಾಯ ಯೋಜನೆ ಮಾಡಲಾಗಿದೆ. ಲಾಕ್ಡೌನ್ ಸಮಯದಲ್ಲಿ ಎಲ್ಲ ಜನರು ತಮ್ಮ ಪಟ್ಟಣದಲ್ಲಿ ಮನೆಯನ್ನು ತೊರೆದು ತಮ್ಮ ಊರಿನ ಕಡೆಗೆ ಹೋಗಿದ್ದಾರೆ. ಕೆಲವು ದಿವಸಗಳ ಹಿಂದೆ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಒಬ್ಬ ಮಹಿಳೆಯು ಲಾಕ್ಡೌನ್ ನಲ್ಲಿ ತಮ್ಮ ಮನೆಯನ್ನು ಬಂದ್ ಮಾಡಿ ಕೆಲವು ತಿಂಗಳ ಸಲುವಾಗಿ ಬೇರೆ ಕಡೆಗೆ ಹೋಗಿದ್ದಳು. ತದನಂತರ ಮರಳಿ ಬಂದಾಗ ಮನೆಯ ಬಾಗಿಲ ತಗೆದು ಮನೆಯ ಪರಸ್ಥಿತಿ ನೋಡಿ ಆಶ್ಚರ್ಯಗೊಂಡಳು.

ವಾಸ್ತವವಾಗಿ ನಡೆದದ್ದು ಏನೆಂದರೆ, ಫ್ರಾನ್ಸ್ ದ ಒಬ್ಬ ಮಹಿಳೆ ಲಾಕ್ಡೌನ್ ನಲ್ಲಿ ತನ್ನ ಫ್ಲ್ಯಾಟ್ ನ್ನು ಲಾಕ್ ಮಾಡಿ ಹೋದಳು. ಯಾವಾಗ ಆಕೆ ಮೂರು ತಿಂಗಳ ನಂತರ ಮರಳಿ ಬಂದಾಗ ಕೀಚನ್ ರೂಮ್ ನಲ್ಲಿಯ ಪರಸ್ಥಿತಿ ನೋಡಿ ತುಂಬಾ ಆಶ್ಚರ್ಯಗೊಂಡಳು. ಅವಳು ಕೀಚನ್ ರೂಮ್ ನಲ್ಲಿ ಕಂಡಿದ್ದೇನೆಂದರೆ ಅಲ್ಲಿ ಗುಲಾಬಿ ಬಣ್ಣದ ಗೆರೆಗಳು ಕಾಣಿಸುತ್ತಿದ್ದವು. ಅವು ಒಂದು ಎಲಿಯನ್ ಟ್ರೀ ತರಹ ಕಾಣುತ್ತಿದ್ದವು. ಅವುಗಳನ್ನು ನೋಡಿದ ತಕ್ಷಣವೇ ಮಹಿಳೆ ತುಂಬಾ ಗಾ’ಬರಿಯಾದಳು. ತದನಂತರ ಅವುಗಳನ್ನು ಇನ್ನೊಂದು ಸಲ ಸೂಕ್ಷ್ಮವಾಗಿ ಪರೀಕ್ಷಣೆ ಮಾಡಿ ನೋಡಿದಾಗ ಅವು ಎಲಿಯನ್ ಟ್ರೀ ಇದ್ದಿರಲಿಲ್ಲ ಹೊರತಾಗಿ ಆಲೂಗಡ್ಡೆಯ ಟ್ರೀ ಆಗಿದ್ದವು.
ಫ್ರಾನ್ಸ್ ನ ಈ ಮಹಿಳೆಯ ಹೆಸರು ಡೋನಾ ಪರಿ ಇದೆ. ಅವಳ ವಯಸ್ಸು ಕೇವಲ 22 ಇದೆ. ಅವಳು ಟ್ವಿಟ್ಟರ್ ನಲ್ಲಿ ಕೀಚನ್ ನಲ್ಲಿ ಬೆಳೆದ ಸಸಿಗಳ ಫೋಟೋಗಳನ್ನು ಶೇರ್ ಮಾಡಿದ್ದಾಳೆ. ಡೋನಾ ಅವರ ಹೇಳಿದ್ದಾರೆ, ಮಾರ್ಚ್ ತಿಂಗಳ ಲಾಕ್ಡೌನ್ ನಲ್ಲಿ ಆಲೂಗಡ್ಡೆ ಖರೀದಿಸಿ ಇಟ್ಟಿದ್ದರು. ತದನಂತರ ಅವರು ತಮ್ಮ ಬಾಯ್ ಫ್ರೆಂಡ್ ನ ಜೊತೆಗೆ ಸೆಲ್ಫ್ ಐಸೋಲೇಶನ್ ಇರುವ ನಿರ್ಧಾರವನ್ನು ತಗೆದುಕೊಂಡರು.

ಮೂರು ತಿಂಗಳ ವರೆಗೆ ಬಾಯ್ ಫ್ರೆಂಡ್ ಜೊತೆಯಲ್ಲಿದ್ದು ಮರಳಿ ಮನೆಗೆ ಬಂದು ಅಡುಗೆಯ ಮನೆಯನ್ನು ತಗೆದು ನೋಡಿದಾಗ ಗೋಡೆಯ ಮೇಲೆ ಒಂದು ವಿಚಿತ್ರವಾದ ಆಕಾರ ಕಾಣಿತು. ಅದೊಂದು ಅಸಾಧಾರಣವಾದ ದೃಶ್ಯ ವಾಗಿತ್ತು. ಮೊಳಕೆಯೊಡೆದ ಆಲೂಗಡ್ಡೆಯ ಸಸಿ ಅಲ್ಲಿದ್ದ ಫರ್ನಿಚರ್ ಸಹ ತುಂಡಾಗಿ ಮಾಡಿತ್ತು.

ಡೋನಾ ಅವರ ಹೇಳಿದ್ದಾರೆ, ಆಲೂಗಡ್ಡೆಯ ಮೊಳಕೆಯನ್ನು ಗೋಡೆಯ ಮೇಲಿಂದ ತಗೆಯಲು ಸುಮಾರು ಒಂದು ಗಂಟೆಗಳ ಕಾಲಾವಕಾಶ ತಗೆದುಕೊಂಡಿತು. ಅದು ಅವಳಿಗಾಗಿ ತುಂಬಾ ಸರಳವಾಗಿರಲಿಲ್ಲ. ಅವಳು ಕತ್ತರಿಯ ಸಹಾಯದಿಂದ ಆ ಮೊಳಕೆಗಳ ಭಾಗಗಳು ಕತ್ತರಿಸಿ ಹಾಕಿದಳು. ಡೋನಾ ಅವರು ಅವುಗಳ ಫೋಟೋ ಟ್ವಿಟ್ಟರ್ ಮೇಲೆ ಪೋಸ್ಟ್ ಮಾಡಿದ್ದಾರೆ. ಶೇರ್ ಮಾಡುತ್ತಾ ಅದರಲ್ಲಿ, ಮುಂದೆ ಎಂದಾದರೂ ಮನೆಯನ್ನು ಕೆಲವು ತಿಂಗಳಗಳ ವರೆಗೆ ಬಿಟ್ಟು ಹೋಗುವದಿದ್ದರೆ ಮನೆಯಲ್ಲಿ ಆಲೂಗಡ್ಡೆ ಮಾತ್ರ ಇಡಬೇಡಿ” ಎಂದು ಬರೆದಿದ್ದಾರೆ.