ಲಾಕ್ ಡೌನ್!! ದೇಶದೆಲ್ಲಡೆ ಸಿಕ್ಕಿ ಹಾಕಿಕೊಂಡ ಜನರು ಮನೆಗೆ ಹೋಗುವ ದಾರಿ ರೆಡಿ; ಮೇ 4 ರಿಂದ ಜಾರಿ.

ಕೋರೊನಾ ವೈರಸ್ ಸಂಕಟದಿಂದ ಹೊರಗೆ ಬರಲು ದೇಶತುಂಬೆಲ್ಲಾ ಮೇ 3 ರ ವರೆಗೆ ಲಾಕ್ಡೌನ್ ಘೋಷಣೆಮಾಡಲಾಗಿದೆ. ಈ ಲಾಕ್ಡೌನ್ ದಿಂದಾಗಿ ದೇಶದ ತುಂಬೆಲ್ಲಾಎಷ್ಟೋ ಜನರು ತಾವು ಕೆಲಸ ಮಾಡುವ ಸ್ಥಳದಲ್ಲಿ, ಅಭ್ಯಾಸ ಮಾಡುವ ಸ್ಥಳದಲ್ಲಿಂದ ಮರಳಿ ತಮ್ಮ ಊರಿಗೆ ಹೋಗಲು ಸಾಧ್ಯವಾಗದ ಕಾರಣ ಅಲ್ಲಿಯೇ ಸಿಲುಕಿ ಕೊಂಡಿದ್ದಾರೆ. ಇವರಲ್ಲಿ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಕರು ಮತ್ತು ಪರ್ಯಟಕರ ಸಮಾವೇಶ ವಿದೆ. ಇವರೆಲ್ಲರನ್ನು ತಮ್ಮ ಮನೆಗೆ ತೆರಳುವ ದಾರಿ ತೆರೆಯಲಾಗಿದೆ ಅಂದರೆ ಅವರನ್ನು ಮನೆಗೆ ತಲುಪಿಸುವ ವ್ಯವಸ್ಥೆ ಸರ್ಕಾರ ಮಾಡುವದಿದೆ. ಗೃಹ ಮಂತ್ರಾಲಯವು ಸಿಲುಕಿಬಿದ್ದ ಜನರನ್ನು ಅವರ ಮನೆಗೆ ತಲುಪಿಸಲು ಹೊಸ ಗೈಡ್ ಲೈನ್ ಜಾರಿಯಲ್ಲಿ ತಂದಿದೆ. ಇದರ ಅನುಸಾರ ದೇಶದಬೇರೆ ಬೇರೆ ಭಾಗದಲ್ಲಿ ಸಿಲುಕಿಕೊಂಡ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಪರ್ಯಟಕರು ಮತ್ತು ಅಂತರರಾಜ್ಯದ ಪ್ರವಾಸದ ಸಲುವಾಗಿ ಮೇ 4 ರಂದು ಅನುಮತಿ ನೀಡುತ್ತಿದೆ.

ಪ್ರಧಾನಮಂತ್ರಿ ಮೋದಿ ಇವರಜೊತೆಗೆ ನಡೆದ ವಿಡಿಯೋಕಾನ್ಫೆರೆನ್ಸ್ ನಲ್ಲಿ ಅನೇಕ ರಾಜ್ಯದ ಮುಖ್ಯಮಂತ್ರಿಗಳು ಇದರ ಬಗ್ಗೆ ಅನುಮತಿಯನ್ನು ಕೇಳಿದ್ದರು. ರಾಜ್ಯದ ಅಥವಾ ದೇಶದ ಬೇರೆ ಬೇರೆ ಭಾಗಗಳಲ್ಲಿ ಸಿಲುಕಿಕೊಂಡ ಜನರನ್ನು ಅವರ ಮನೆಗೆ ತಲುಪಲು ಕೇಂದ್ರ ಸರ್ಕಾರ ಅದರ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿಕೊಂಡಿದ್ದರು. ಅದರ ನಿಟ್ಟಿನಲ್ಲಿ ರಾಜ್ಯದ ಬೇಡಿಕೆಯ ನಂತರ ಕೇಂದ್ರೀಯ ಗೃಹ ಮಂತ್ರಾಲಯ ಹೊಸ ಗೈಡ್ ಲೈನ್ ಜಾರಿಗೆ ತಂದಿದೇ ಆ ಹೊಸ ಗೈಡ್ ಲೈನ್ ಏನಿದೆ ಎಂಬುದು ತಿಳಿದುಕೊಳ್ಳಿ.

ಕೇಂದ್ರೀಯ ಗೃಹಮಂತ್ರಾಲಯದ ಗೈಡ್ ಲೈನ್ಸ್.

● ಎಲ್ಲ ರಾಜ್ಯಗಳು ಯುಟಿಎಸ್ ವು ಸಿಲುಕಿಕೊಂಡ ಜನರನ್ನುಮರಳಿ ತಮ್ಮ ವಾಸಸ್ಥಳಕ್ಕೆ ಕಳುಹಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಪ್ರಮಾಣಿತ ಪ್ರೊಟೊಕಾಲ್ ಅನುಸಾರ ಈ ಪ್ರಕ್ರಿಯೆ ಮಾಡಬೇಕು. ನೋಡಲ್ ಅಧಿಕಾರಿ ತಮ್ಮ ರಾಜ್ಯದಲ್ಲಿ/ ಕೇಂದ್ರ ಶಾಶಿತ ಪ್ರದೇಶದಲ್ಲಿ ಸಿಲುಕಿಕೊಂಡ ಜನರ ನೊಂದಣಿ ಮಾಡಿಕೊಳ್ಳಬೇಕು.
● ಸಿಲುಕಿಕೊಂಡ ಜನರ ಗುಂಪು ಒಂದು ರಾಜ್ಯದಿಂದ ಅಥವಾ ಕೇಂದ್ರ ಶಾಶಿತ ಪ್ರದೇಶದಿಂದ ಬೇರೆ ರಾಜ್ಯಕ್ಕೆ ಹೋಗುವ ಇಚ್ಛೆ ಹೊಂದಿದ್ದರೆ , ಕಳುಹಿಸುವ ಮತ್ತು ಕರೆದುಕೊಳ್ಳುವ ರಾಜ್ಯಗಳು ಒಬ್ಬರಿಗೊಬ್ಬರು ಸಹಮತಿ ಇರುವದು ಅವಶ್ಯಕವಾಗಿದೆ.
● ಮರಳಿ ಕಳಿಸುವ ವ್ಯಕ್ತಿಯ ತಪಾಸಣೆ ಮಾಡಲಾಗುವದು ಮತ್ತು ಯಾವ ವ್ಯಕ್ತಿಯಲ್ಲಿ ಕೋರೊನಾ ಸೋಂಕಿನ ಲಕ್ಷಣಗಳುಕಾಣುವದಿಲ್ಲವೋ ಅಂತ ವ್ಯಕ್ತಿಯನ್ನು ಮಾತ್ರ ಮುಂದೆ ಹೋಗಲು ಅನುಮತಿ ನೀಡಲಾಗುವದು.
● ಇವರನ್ನು ಮನೆಗೆ ತಲುಪಿಸಲು ಗುಂಪು ಮಾಡಿ ಅವರನ್ನು ಸರಕಾರಿ ಬಸ್ ಮೂಲಕ ಅವರ ಮೂಲ ಸ್ಥಳಕ್ಕೆ ಕಳುಹಿಸಲಾಗುವದು.
● ಬಸ್ ಗಳು ಸ್ವಚ್ಛಗೊಳಿಸಿ ಅದರಲ್ಲಿ ಕುಳಿತುಕೊಳ್ಳಲು ಸುರಕ್ಷಿತವಾದ ಅಂತರದ ನಿಕಷದ ಪಾಲನೆ ಮಾಡಬೇಕು.
● ಮೂಲಸ್ಥಳಕ್ಕೆ ಕರೆದುಕೊಂಡು ಹೋಗುವಾಗ ದಾರಿಯಲ್ಲಿ ಸಿಗುವ ಇತರ ರಾಜ್ಯಗಳು ಇಂಥ ವ್ಯಕ್ತಿಗಳನ್ನು ಪ್ರವಾಸ ಮಾಡಲು ಅನುಮತಿ ನೀಡುವವು.

● ಸಿಲುಕಿಕೊಂಡ ಜನರು ತಮ್ಮ ಮೂಲಸ್ಥಳಕ್ಕೆ ತಲುಪಿದ ನಂತರ ಅವರ ಮರು ತಪಾಸಣೆ ಮಾಡುವ ಸಲುವಾಗಿ ಸ್ಥಾನಿಕ ಆರೋಗ್ಯ ಅಧಿಕಾರಿಯ ಕಡೆಗೆ ಕರೆದೊಯ್ದು ಮರು ತಪಾಸಣೆ ಮಾಡಿಸಬೇಕು.

● ಇಂಥ ವ್ಯಕ್ತಿಯ ಮಾಹಿತಿಯನ್ನು ಆರೋಗ್ಯ ಸೇತು ಆಪ್ ನಲ್ಲಿ ನೋಂದಾಣಿಯನ್ನು ಮಾಡಲಾಗುವದು. ಆ ಆಪ್ ಸಹಾಯದಿಂದ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳಬಹುದು.