ಲಾಕ್ ಡೌನ್ ನಲ್ಲಿ ಲವ್ ಮ್ಯಾರೇಜ್ ಮಾಡಿಕೊಂಡ ವಧು, 10 ದಿನಗಳಲ್ಲಿ ಕೋಣೆಯಲ್ಲಿ ಬಿದ್ದ ರೀತಿ ನೋಡಿದರೆ ಕರಳು ಕಿತ್ತಿ ಬರುವದು.
ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯಲ್ಲಿ ಜೋಡಿಯೊಂದರ 10 ದಿವಸಗಳ ಮುನ್ನವೇ ಲಾಕ್ ಡೌನ್ ನಲ್ಲಿ ಮದುವೆಯಾಗಿತ್ತು. ಕೈಗಳೆರಡಕ್ಕೂ ಹಚ್ಚಿದ ಮದರಂಗಿಯ ಬಣ್ಣ ಇನ್ನು ಇಳಿದಿರಲಿಲ್ಲ. ಶುಕ್ರವಾರ ಅವಳು ಶವವಾಗಿ ಕೋಣೆಯಲ್ಲಿ ನೇಣು ಹಾಕಿಕೊಂಡು ನೇತಾಡುತ್ತಿದ್ದಳು. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
ವರದಿಯ ಪ್ರಕಾರ ಹರಚಂದಪುರ ಪೊಲೀಸ್ ವ್ಯಾಪ್ತಿಯ ಡಿಡೌಲಿ ಊರಿನಲ್ಲಿಯ ಘಟನೆ ಇದಾಗಿದೆ. ಹತ್ತು ದಿವಸಗಳ ಮೊದಲು ಮದುವೆಯಾಗಿ ನವವಧುವಾಗಿ ಮನೆಗೆ ಬಂದವಳು ಇಂದು ಹೆಣವಾಗಿ ನೇಣಿಗೆ ಜೋತು ಬಿದ್ದಿದ್ದಳು.

ಮೇ 24 ರಂದು ಮದುವೆಯಾಗಿತ್ತು.
ರಿಪೋರ್ಟ್ ಪ್ರಕಾರ ಮೇ 24 ರಂದು ಹರಚಂದಪುರ್ ಠಾಣೆಯ ಘೋಸರಿ ಊರಿನ ನಿವಾಸಿಯಾದ ಸ್ವಾತಿ ಸಿಂಹಳ ಮದುವೆ ಡಿಡೌಲಿ ಊರಿನ ನಿವಾಸಿ ಧೀರಜ್ ಸಿಂಹನ ಜೊತೆಗೆ ಆಗಿತ್ತು.
ಕಳೆದ ಕೆಲವು ವರ್ಷಗಳಿಂದ ಇಬ್ಬರಲ್ಲಿಯೂ ಪ್ರೀತಿ ಅಂಕುರಿಸಿತ್ತು. ಇದೇ ಕಾರಣದಿಂದ ಹಿರಿಯರ ಸಮ್ಮತಿ ಪಡೆದು ಅವರದೇ ಸಮ್ಮುಖದಲ್ಲಿ ಮದುವೆಯಾಗಿತ್ತು. ಇಷ್ಟೆಲ್ಲ ಆಗಿಯೂ ಮದುವೆಯಾಗಿ 10 ದಿನಗಳಲ್ಲಿ ಅವಳ ಶವ ನೇತಾಡುತ್ತಿತ್ತು.
ಗಂಡನ ಮನೆಯವರ ಮೇಲೆ ಹತ್ಯೆಯ ಆರೋಪ.
ವಧುವಿನ ಕುಟುಂಬದವರು ಮಗಳ ಗಂಡನ ಕಡೆಯವರ ಮೇಲೆ ಹತ್ಯೆಯ ಆರೋಪ ಮಾಡಿದ್ದಾರೆ. ಅದರಲ್ಲಿ ಹುಡುಗಿಯ ಕಡೆಯವರು ಬಡವರಾಗಿದ್ದಾರೆ. ಮದುವೆ ನಂತರದಿಂದಲೇ ಹುಡುಗಿಗೆ ಪೀಡಿಸಲು ಪ್ರಾರಂಭಿಸಿದ್ದಾರೆ. ಶುಕ್ರವಾರ ಮುಂಜಾನೆ ಸತ್ತವಳ ಗಂಡ ಆಕೆಯ ಮನೆಯವರಿಗೆ ಫೋನ್ ಮಾಡಿ ಸುದ್ದಿ ಮುಟ್ಟಿಸಿದ್ದಾನೆ. ಆನಂತರ ಪೊಲೀಸರು ಬಂದು ಶವವನ್ನು ವಶಕ್ಕೆ ತೆಗೆದುಕೊಂಡು ಎರಡೂ ಮನೆಯವರ ವಿಚಾರಣೆ ಮಾಡಿ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ತನಿಖೆ ತೀವ್ರ ಗೊಳಿಸುವ ಬಗ್ಗೆ ಹೇಳಿದ್ದಾರೆ.