ಲಾಕ್ ಡೌನ್ ನಲ್ಲಿ ವಲಸಿಗರಿಗೆ ದೇವದೂತರಾದ ಸೋನು ಸೂದ್ ಅವರು ಎಷ್ಟು ಕೋಟಿಗಳ ಒಡೆಯರು ಗೊತ್ತಾ?

ಲಾಕ್ ಡೌನ್ ನಲ್ಲಿ ಸಿಲುಕಿದ ಬಡವ ಕಾರ್ಮಿಕರು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ಅನೇಕ ಕೂಲಿ ಕಾರ್ಮಿಕರು ತಮ್ಮ ಊರು, ಮನೆಗಳಿಗೆ ಹೋಗಲು ಯಾವುದೇ ಪ್ರಯಾಣದ ಸಾಧನಗಳು ಇಲ್ಲದ್ದರಿಂದ ಬರೀ ನಡೆದುಕೊಂಡೇ ಹೋಗುವ ದಾರಿಯೊಂದೇ ಉಳಿದಿತ್ತು, ಅದನ್ನೇ ಸಾಕಷ್ಟು ಜನ ವಲಸೆ ಕಾರ್ಮಿಕರು ಅನುಸರಿಸಿದ್ದು.

ಬಡವರ ಈ ಸಂಕಷ್ಟವನ್ನು ಸೋನು ಸೂದ್ ಅವರಿಗೆ ನೋಡಲಾಗದೆ ಅವರ ಕಷ್ಟಗಳಿಗೆ ಮಿಡಿದು ಕಳೆದ ಕೆಲವು ದಿನಗಳಿಂದ ವಲಸಿಗರನ್ನು ಅವರವರ ಊರು, ಮನೆಗೆ ತಲುಪಿಸುವ ಹೊಣೆ ಹೊತ್ತು ರಾತ್ರಿ ಹಗಲು ಒಂದಾಗಿ ಸ್ಪಂದಿಸುತ್ತಿದ್ದಾರೆ. ಸೋನು ಅವರ ಈ ಕಾರ್ಯ ಎಲ್ಲರಿಗೂ ಮೆಚ್ಚುಗೆಯಾಗಿ ಒಂದೇ ಸಮನೆ ಪ್ರತಿಯೊಬ್ಬರು ಹೊಗಳಿದ್ದಾರೆ. ಇದೇ ಕಾರಣದಿಂದ ಸೋಶಿಯಲ್ ಮಿಡಿಯಾದಲ್ಲಿ ಸೋನು ಟ್ರೆಂಡಿಂಗ್ ನಲ್ಲಿದ್ದಾರೆ. ಚಲನಚಿತ್ರಗಳಲ್ಲಿ ವಿಲೆನ್ ಪಾತ್ರ ಮಾಡುವ ಸೋನು ಅವರು ನಿಜಜೀವನದಲ್ಲಿ ನಾಯಕರಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ವಿವಿಧ ಸ್ಥಳಗಲ್ಲಿ ಸಿಲುಕಿದ ಕಾರ್ಮಿಕರಿಗೆ ಒಂದೇ ಒಂದು ಟ್ವೀಟ್ ಮುಖಾಂತರ ಉಚಿತವಾಗಿ ಅವರ ಮನೆಗೆ ಒಯ್ದು ತಲುಪಿಸುವ ಭಾವನಾತ್ಮಕವಾದ ಕೆಲಸವನ್ನು ಸಂಪೂರ್ಣ ಜವಾಬ್ದಾರಿಯಿಂದ ಹಾಗು ಸುನಿಯೋಜಿತವಾಗಿ ದಾರಿ ಮಧ್ಯದಲ್ಲಿ ಊಟದ ವ್ಯವಸ್ಥೆಯ ಜೊತೆಗೆ ಮಾಡುತ್ತಿರುವದರಿಂದ ಸೋನು ಸೂದ್ ಅವರು ನಿಜಕ್ಕೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂಥ ಮಾನವೀಯ ಮೌಲ್ಯಗಳಿಗೆ ಮಿಡಿಯುವ ಸೋನು ಸೂದ್ ಅವರು ಚಿತ್ರರಂಗದ ತಮ್ಮ ಕರಿಯರ್ ಅನ್ನು 1999 ರಿಂದ ಪ್ರಾಂಭಿಸಿದರು.

ಇಂಥ ಸರಳ ವ್ಯಕ್ತಿ ಸೋನು ಸೂದ್ ಅವರು ಬರೀ ಚಿತ್ರರಂಗದಿಂದ ಅಷ್ಟೇ ಅಲ್ಲ, ಜಾಹೀರಾತುಗಳಿಂದಲೂ ಹಣಗಳಿಸುತ್ತಾರೆ. ಸೋನು ಅವರ ಸದ್ಯದ ಸಂಪತ್ತಿನ ಬಗ್ಗೆ ಹೇಳುವದಾದರೆ ಒಂದು ಇಂಗ್ಲಿಷ್ ವೃತ್ತಪತ್ರಿಕೆಯ ಪ್ರಕಾರ ಒಟ್ಟು 130.339 ಕೋಟಿ ರೂಪಾಯಿಗಳ ಒಡೆಯರಿದ್ದಾರೆ. ಅವರ ವಾಸ್ತವ್ಯ ಮುಂಬಯಿಯ ಅಂಧೇರಿ (ಪ) ಯಲ್ಲಿ ಲೋಖಂಡವಾಲಾದ ಯಮುನಾ ನಗರದಲ್ಲಿರುತ್ತಾರೆ.

ಕೊರೊನದ ಸೋಂಕನ್ನು ತಡೆಗಟ್ಟಲು ಹೆಚ್ಚುಕಡಿಮೆ ಎಲ್ಲ ಸೆಲಿಬ್ರಿಟಿಗಳು ಮನೆಯಲ್ಲಿಯೇ ಇದ್ದಾರೆ. ಈ ಎಲ್ಲ ಸೆಲಿಬ್ರಿಟಿಗಳು ಮನೆಯಲ್ಲಿದ್ದಾಗ ಸೋನು ಅವರು ಮಾತ್ರ ರಸ್ತೆಯ ಮೇಲಿಳಿದು ಕಾರ್ಮಿಕರಿಗೆ ಅವರ ಮನೆಗಳಿಗೆ ತಲುಪಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಷ್ಟೋ ಜನ ಬಡವ ಕಾರ್ಮಿಕರು ಅವರಿಗೆ ಫೋನ್ ಕಾಲ್ ಮಾಡಿ ತಮ್ಮ ಮನೆಗೆ ಹೋಗುವ ಇಂಗಿತವನ್ನು ವ್ಯಕ್ತ ಪಡಿಸಿದಾಗ ಮತ್ತು ತಮ್ಮ ಕಷ್ಟವನ್ನು ತೋಡಿಕೊಂಡವರಿಗೆ ಸೋನು ತಮ್ಮ ಸಹಾಯ ಹಸ್ತವನ್ನು ಚಾಚಿದ್ದಾರೆ.

ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಡುವದು ಮತ್ತು ಊಟ ಹಾಗೂ ವಿವಿಧ ರಾಜ್ಯ ಸರ್ಕಾರಗಳ ಅನುಮತಿ ಪಡೆಯುವವರೆಗೆ ಸತತವಾಗಿ ಕಾರ್ಯೋನ್ಮುಖರಾಗಿದ್ದಾರೆ. ಅವರ ಈ ಕೆಲಸಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.