ಲಾಕ್ ಡೌನ್ ನಲ್ಲಿ SBI ತನ್ನ ಗ್ರಾಹಕರಿಗೆ ನೀಡಿತು ದೊಡ್ಡ ಗಿಫ್ಟ್! ಮನೆ, ಆಟೋ ಮತ್ತು ಪರ್ಸನಲ್ ಲೋನ್ ಕುರಿತು ಮಾಡಿದೆ ಈ ದೊಡ್ಡ ಘೋಷಣೆ.
ನವ ದೆಹಲಿ:- ದೇಶದ ಎಲ್ಲಕ್ಕಿಂತ ದೊಡ್ಡ ಬ್ಯಾಂಕ್ ಎಂದೇ ಹೆಸರಾದ ಎಸ್ಬಿಐ(SBI-State Bank of India) ಲಾಕ್ಡೌನ್ ನಿಟ್ಟಿನಲ್ಲಿ ತಮ್ಮ ಗ್ರಾಹಕರಿಗೆ ದೊಡ್ಡ ಕೊಡುಗೆಯೊಂದನ್ನು ನೀಡುತ್ತಿದೆ ಅದೇನೆಂದರೆ ಬಡ್ಡಿಯ ದರ ಕಡಿಮೆ ಮಾಡುವದಿದೆ ಎಂದು ಘೋಷಣೆಮಾಡಿದೆ. ಬ್ಯಾಂಕ್ ಬಡ್ಡಿದರದಲ್ಲಿ 0.15 ರಷ್ಟು ಪ್ರತಿಶತ ಕಡಿಮೆ ಮಾಡಿದೆ. ಈ ದರ ಕಡಿಮೆ ಮಾಡಿದ್ದರಿಂದ ಬ್ಯಾಂಕ್ ಬಡ್ಡಿ ದರವು 7.40 ರಿಂದ ಕಡಿಮೆಯಾಗಿ 7.25 ಕ್ಕೆ ಬಂದಿದೆ. ಈ ಹೊಸ ದರವು 10 ಮೇ ದಿಂದ ಕಾರ್ಯಾಚರಣೆಯಲ್ಲಿ ಬರುವದು. ಈ ಬ್ಯಾಂಕ್ MCLR ನಲ್ಲಿ ಮೊದಲು ಸಹ ಕಡಿಮೆ ಮಾಡಿತ್ತು ಮತ್ತು ಇದು ಎರಡನೆಯ ಬಾರಿ ಬಡ್ಡಿಯ ದರ ಕಡಿಮೆ ಮಾಡಿದೆ ಎಂದು ಬ್ಯಾಂಕ್ ತಿಳಿಸಿದೆ. ಇದಕ್ಕಿಂತ ಮುಂಚೆ ಏಪ್ರಿಲ್ ತಿಂಗಳಲ್ಲಿ ಬಡ್ಡಿಯ ದರದಲ್ಲಿ 0.35 ಪ್ರತಿಶತ ಕಡಿಮೆ ಮಾಡಲಾಗಿತ್ತು.
ಗ್ರಾಹಕರಿಗೆ ಪ್ರತಿ ತಿಂಗಳಿಗೆ 255 ರೂಪಾಯಿಯ ಲಾಭ-SBI ದ ಈ ನಿರ್ಧಾರದಿಂದ ಒಂದು ವೇಳೆ ಯಾರಾದರೂ MCLR ದ ಆಧಾರದ ಮೇಲೆ 25 ಲಕ್ಷ ಹೋಮ ಲೋನ್ 30 ವರ್ಷದ ಸಲುವಾಗಿ ತಗೆದುಕೊಂಡಿದ್ದರೆ ಅವರಿಗೆ ಈಗ ಪ್ರತಿ ತಿಂಗಳು 225 ರೂಪಾಯಿ ಉಳಿತಾಯ ವಾಗುವದು.

EMI ನಲ್ಲಿ ಕಡಿಮೆ ಯಾಗುವದು ಆದರೆ FD ಮೇಲೆ ಕಡಿಮೆ ಲಾಭ ಸಿಗುವದು- ಈ ನಿರ್ಧಾರದಿಂದ ಲೋನ ತಗೆದುಕೊಂಡವರಿಗೆ ತಮ್ಮ EMI ನಲ್ಲಿ ಕಡಿಮೆ ಯಾಗುವದು. ನಿಮ್ಮ ಮಾಹಿತಿಗಾಗಿ RBI ಕೋರೊನಾ ವೈರಸ್ ನಿಂದಾಗಿ ಅರ್ಥವ್ಯವಸ್ಥೆಯ ಸುಧಾರಣೆ ಮಾಡುವ ಸಲುವಾಗಿ ಮಾರ್ಚ ನಲ್ಲಿ ರೆಪೊ ರೇಟ್ 0.75 ರಷ್ಟು ಪ್ರತಿಶತ ಕಡಿಮೆ ಮಾಡಿದೆ. ಎಸ್‌ಬಿಐ ಎಫ್‌ಡಿ ಬಡ್ಡಿದರಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. 3 ವರ್ಷದ ಎಫ್‌ಡಿಗಳ ದರವು ಶೇಕಡಾ 0.20 ರಷ್ಟು ಕಡಿಮೆಯಾಗಲಿದೆ.
ಬ್ಯಾಂಕುಗಳಿಗೆ ಸಾಲ ನೀಡುವ ಬಡ್ಡಿದರವನ್ನು ನಿರ್ಧರಿಸುವ ಸೂತ್ರವನ್ನು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ಎಂದು ಹೆಸರಿಸಲಾಗಿದೆ. ಬ್ಯಾಂಕುಗಳಿಗೆ ಆರ್‌ಬಿಐ ನಿಗದಿಪಡಿಸಿದ ಸೂತ್ರವು ನಿಧಿಯ ಕನಿಷ್ಠ ವೆಚ್ಚದ ಮೇಲೆ ಅವಲಂಬಿತವಾಗಿರುತ್ತದೆ. ಈ ಸೂತ್ರದ ಉದ್ದೇಶ ಗ್ರಾಹಕರಿಗೆ ಕಡಿಮೆ ಬಡ್ಡಿದರದ ಲಾಭವನ್ನು ನೀಡುವುದು ಮತ್ತು ಬ್ಯಾಂಕುಗಳಿಗೆ ಬಡ್ಡಿದರವನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವುದು.

ಏಪ್ರಿಲ್ 2016 ರಿಂದ, ಬ್ಯಾಂಕುಗಳು ಹೊಸ ಸೂತ್ರದ ಅಡಿಯಲ್ಲಿ ಸಾಲದ ದರವನ್ನು ಕನಿಷ್ಠ ವೆಚ್ಚದಿಂದ ನಿಗದಿಪಡಿಸುತ್ತಿವೆ. ಅಲ್ಲದೆ, ಬ್ಯಾಂಕುಗಳಿಗೆ ಪ್ರತಿ ತಿಂಗಳು ಎಂಸಿಎಲ್ಆರ್ ಮಾಹಿತಿಯನ್ನು ನೀಡಬೇಕಾಗುತ್ತದೆ. ಆರ್‌ಬಿಐ ಹೊರಡಿಸಿದ ಈ ನಿಯಮವು ಬ್ಯಾಂಕುಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಸಹಾಯ ಮಾಡುತ್ತದೆ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಅನುಕೂಲವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಎಂಸಿಎಲ್ಆರ್ ಈ ಹೊಸ ಸೂತ್ರದಿಂದ ಹೊಸ ಗ್ರಾಹಕರಿಗೆ ಮತ್ತು ಹಳೆಯ ಗ್ರಾಹಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಎಂಸಿಎಲ್ಆರ್ ಅನ್ನು ಬದಲಾಯಿಸುವ ಮೊದಲು ಸಾಲ ತೆಗೆದುಕೊಂಡ ಗ್ರಾಹಕ ಮತ್ತು ಅವನ ಸಾಲವನ್ನು , ಸಾಲದ ದರ ಈ ಸೂತ್ರದೊಂದಿಗೆ ಜೋಡಿಸಿದರೆ, ಎಂಸಿಎಲ್ಆರ್ ಕಡಿಮೆಯಾದಂತೆ ಅವನ ಇಎಂಐ ಸಹ ಕಡಿಮೆಯಾಗುತ್ತದೆ.