ಲಾಕ್ ಡೌನ್ ನಿಯಮ ಉಲ್ಲಂಘಿಸಿ ಗರ್ಲ್ ಫ್ರೆಂಡ್ ಭೇಟಿಯಾಗಲು ಹೋದ ಮೇಯರ್!
ಬ್ರಿಟನ್ ದ ಲಿಸೇಸ್ಟರ್ ಪಟ್ಟಣದ 71 ವರ್ಷದ ಲೇಬರ್ ಪಾರ್ಟಿಯ ಮೇಯರ್ ಸರ್ ಪೀಟರ್ ಸೊಲ್ಸಬಿ ಇವರ ಮೇಲೆ ಭರ್ಜರಿ ಟೀಕೆಯಾಗುತ್ತಿದೆ. ಕಾರಣವು ಹಾಗೆಯೇ ಇದೆ. ಇವರು ಲಾಕ್ ಡೌನ್ ನಿಯಮವನ್ನು ಭಂಗಗೊಳಿಸಿ ತಮ್ಮ ಗರ್ಲ ಫ್ರೆಂಡ್ ಗೆ ಭೆಟ್ಟಿಯಾಗಲಿಕ್ಕೆ ಹೋದದ್ದು. ತಪ್ಪು ಅಷ್ಟೇ ಇಲ್ಲ, ನಂತರ ರಾತ್ರಿ ಪೂರ್ತಿ ಅಲ್ಲೇ ಕಳೆದರು. ಹೀಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಮ್ಮ 64 ವರ್ಷದ ಗೆಳತಿ ಸಮರ್ಸ್ ಲ್ಯಾಂಡ್ ಳ ಮನೆಗೆ ಹೋಗಿದ್ದರು.
ಗೆಳತಿಯ ನೆರೆಹೊರೆಯವರು ಮೇಯರ್ ಅವಳ ಮನೆಗೆ ಹೋಗಿಬರುವದನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಮೇಯರ್ ಅವರು ಗೆಳತಿಯ ಮನೆಗೆ ಬ್ಯಾಗ್ ತೆಗೆದುಕೊಂಡು ಬರುತ್ತಿದ್ದರು, ರಾತ್ರಿಪೂರ್ತಿ ಇರುತ್ತಿದ್ದರಂತೆ. ಆ ಸಮಯದಲ್ಲಿ ಆಗಷ್ಟೇ ಲಿಸೇಸ್ಟರ್ ದ 3,30,000 ಜನರಿಗೆ ಇನ್ನೆರಡು ವಾರಗಳ ಕಾಲ ಲಾಕ್ ಡೌನ್ ನಲ್ಲಿ ಇರಬೇಕಾಗುವದೆಂದು ಘೋಷಿಸಲಾಗಿತ್ತು.

ಗೆಳತಿಯ ಪಕ್ಕದವರು ಮೇಯರ್ ಅವರ ಈ ದೃಶ್ಯವನ್ನು ಅನೇಕ ಸಲ ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ. ಒಂದು ಫೋಟೋದಲ್ಲಿಯಂತೂ ಮೇಯರ್ ಸಾಹೇಬರು ಗೆಳತಿಯ ಕಿಟಕಿಯಲ್ಲಿ ಏಣಿಯ ಸಹಾಯದಿಂದ ನಿಂತಿದ್ದಾರೆ. ಮತ್ತು ಗೆಳತಿಯ ಜೊತೆಗೆ ಮಾತನಾಡುತ್ತಿದ್ದಾರೆ. ತಮಾಷೆಯ ವಿಷಯವೇನೆಂದರೆ, ಮೇಯರ್ ಸರ್ ಮೇ ತಿಂಗಳು ಪೂರ್ಣ ತಮ್ಮ ಸೋಶಿಯಲ್ ಅಕೌಂಟ್ ನಿಂದ ಪ್ರಜೆಗಳಿಗೆ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂದು ಸಂದೇಶ ಕೊಟ್ಟಿದ್ದೇ ಕೊಟ್ಟಿದ್ದು.
ಈ ಫೋಟೋ ಸಾರ್ವಜನಿಕವಾದ ಮೇಲೆ ಪೊಲೀಸರು ಮೇಯರ್ ಜೊತೆಗೆ ಚರ್ಚೆ ಮಾಡಿ ಅವರಿಗೆ ಮನೆಯಲ್ಲೇ ಇರಲು ಹೇಳಿದರು. ಯಾವಾಗ ಮೀಡಿಯಾ ಇವರಿಗೆ ಈ ಬಗ್ಗೆ ಕೇಳಿದಾಗ, ನನ್ನ ಈ ರೀತಿಯ ವರ್ತನೆಯಿಂದ ಕೊರೊನ ಸಂಕ್ರಮಣ ಹೆಚ್ಚುತ್ತಿದ್ದರೆ ಹಾಗೂ ಲಾಕ್ ಡೌನ್ ನಿಯಮಕ್ಕೆ ಧಕ್ಕೆಯಾಗುತ್ತಿದ್ದರೆ ಇದು ಸರಿಯಲ್ಲ. ಹೀಗೆ ಮಾಡುವದು ನಿಯಮಗಳ ವಿರೋಧವಾಗಿದೆ ಎಂದು ಹೇಳಿ ನಿಯಮ ಭಂಗ ಮಾಡಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.