ಲ್ಯಾಥಮ್ ಅವರ ಚತುರತೆಯಿಂದಾಗಿ ಧೋನಿ ನೆನಪಾದರು! ಬ್ಯಾಟ್ಸ್ಮನ್ ಶಾಟ್ ಹೊಡೆಯುವ ಮುನ್ನವೇ ಚೆಂಡಿನ ಅಂದಾಜು ಕಟ್ಟಿ ಹಿಡಿದರು ಅದ್ಭುತ ಕ್ಯಾಚ್!

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡ ನಡುವೆ ಸದ್ಯ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯ ನ್ಯೂಜಿಲೆಂಡ್ ಈಗಾಗಲೇ ದೊಡ್ಡ ಅಂತರದಿಂದ ಗೆದ್ದುಕೊಂಡಿತು. ನ್ಯೂಜಿಲೆಂಡ್ ಮೊದಲ ಪಂದ್ಯ ಒಂದು ಇನಿಂಗ್ಸ್ ಮತ್ತು 276 ರನ್ಗಳ ಅಂತರದಿಂದ ಗೆದ್ದುಕೊಂಡಿದೆ. ಪ್ರಸ್ತುತ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಪ್ರದರ್ಶನ ತುಂಬಾ ಚೆನ್ನಾಗಿತ್ತು. ವಿಶೇಷವೆಂದರೆ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಅವರು ಹೊಗಳಿಕೆಗೆ ಪಾತ್ರವಾಗಿದ್ದಾರೆ. ಇವರು ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅದ್ಭುತವಾದ ಕ್ಯಾಚ್ ಹಿಡಿದಿದ್ದಾರೆ. ಸದ್ಯ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದೆ.

ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಲ್ಯಾಥಮ್ ಅವರು ಒಂದು ಸುಂದರವಾದ ಕ್ಯಾಚ್ ಹಿಡಿದಿದ್ದನ್ನು ಅಭಿಮಾನಿಗಳಿಗೆ ನೋಡಲು ಸಿಕ್ಕಿತು.

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಸಮಯದಲ್ಲಿ 50ನೇ ಓವರ್ನಲ್ಲಿ ನೀಲ್ ವ್ಯಾಗನರ್ ಬಾಲಿಂಗ್ ಮಾಡುವ ಸಲುವಾಗಿ ಬಂದರು. ಓವರ್ ನ ಎರಡನೆಯ ಬಾಲಿಗೆ ಒಲಿವಿಯರ್ ಕೆಳಗೆ ಕುಳಿತು ಸ್ವೀಪ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆಗ ನ್ಯೂಜಿಲೆಂಡ್ ನಾಯಕ ಟಾಮ್ ತುಂಬಾ ಚತುರತೆಯಿಂದ ಈ ಕ್ಯಾಚ್ ಹಿಡಿದು ಬ್ಯಾಟ್ಸ್ಮನ್ ಔಟಾಗಲು ಕಾರಣವಾದರು. ಇಲ್ಲಿ ಲ್ಯಾಥಮ್ ಅವರ ಅಡ್ವಾನ್ಸ್ ಪ್ಲಾನಿಂಗ್ ಸರಿಯಾಗಿ ವರ್ಕ್ ಔಟ್ ಆಗಿತ್ತು. ಬ್ಯಾಟ್ಸ್ಮನ್ ಶಾಟ್ ಆಡುವ ಮುನ್ನವೇ ನಾಯಕ ಲ್ಯಾಥಮ್ ಅವರು ಸರಿಯಾಗಿ ಅಂದಾಜು ಕಟ್ಟಿದ್ದರು. ಮತ್ತು ಆ ಪ್ರಕಾರವೇ ಅವರು ಕ್ಯಾಚ್ ಹಿಡಿದಿದ್ದಾರೆ. ಇದರಿಂದ ನಮ್ಮ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನೆನಪಿಗೆ ಬಂದಿದ್ದಾರೆ. ಲ್ಯಾಥಮ್ ಅವರು ಹಿಡಿದ ಈ ಕ್ಯಾಚು ನೋಡಿ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಸಹ ದಂಗಾಗಿದ್ದಾರೆ.

ಲ್ಯಾಥಮ್ ಅವರ ಚಾಣಾಕ್ಷತನ ನೋಡಿ ಈ ವಿಡಿಯೋದಲ್ಲಿ…