ವಧುವಿಗೆ ಬಿಟ್ಟು ಮಗ್ಗುಲಲ್ಲೇ ನಿಂತ ಗೆಳತಿಯ ಕೊರಳಿಗೆ ಹೂಮಾಲೆ ಹಾಕಿದ ವರ! ವರನ ಕುಚೇಷ್ಟೆ ನೋಡಿ ಕೆಂಡಾದ ನೆಟ್ಟಿಗರು…
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮದುವೆಗಳ ವಿಡಿಯೋಗಳು ಭರ್ಜರಿಯಾಗಿ ವೈರಲ್ ಆಗುತ್ತಿವೆ. ಈಗ ಮದುವೆಯ ಸಂದರ್ಭದಲ್ಲಿ ವರನೊಬ್ಬ ವಧುವಿನ ಜೊತೆಗೆ ಮಾಡಿದ ಕುಚೇಷ್ಟೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮದುವೆಯಾಗಲು ಮದುಮಗ ಮನೆಯಿಂದ ಮೆರವಣಿಗೆ ತೆಗೆದುಕೊಂಡು ಮದುವೆಯ ಸ್ಥಳಕ್ಕೆ ಅಂದರೆ ಕಲ್ಯಾಣಮಂಟಪಕ್ಕೆ ಬಂದನೇನೋ ನಿಜ. ಆದರೆ ಅಕ್ಷತೆ ಬೀಳುವ ಸಮಯದಲ್ಲಿ ಮದುಮಗ ತನ್ನ ನಿರ್ಧಾರವನ್ನು ಬದಲಿಸಿ ಮದುವೆಯಲ್ಲಿ ಇದ್ದವರಿಗೆಲ್ಲ ಶಾಕ್ ನೀಡಿದ್ದಾನೆ.
ಮದುವೆಯ ಈ ವಿಡಿಯೋದಲ್ಲಿ ಎಲ್ಲವೂ ಸರಿಯಾದ ಸಮಯಕ್ಕೆ ತಯಾರಾಗಿ ಮದುವೆಯ ವಿಧಿ ವಿಧಾನಗಳು ಚೆನ್ನಾಗಿಯೇ ನೆರವೇರುತ್ತಿದ್ದವು. ಆಗ ಮುಹೂರ್ತದ ಸಂದರ್ಭದಲ್ಲಿ ಹೂಮಾಲೆಯನ್ನು ಮದುಮಕ್ಕಳಿಬ್ಬರೂ ಪರಸ್ಪರ ಕೊರಳಿಗೆ ಹಾಕಿ ಕೊಳ್ಳಬೇಕಾಗಿತ್ತು. ಆಗ ವಧು ತನ್ನ ಭಾವಿಪತಿಯ ಕೊರಳಿಗೆ ಹೂಮಾಲೆಯನ್ನು ಹಾಕುತ್ತಾಳೆ. ನಂತರ ವರನು ವಧುವಿಗೆ ಹೂಮಾಲೆ ಇನ್ನೇನು ಹಾಕಿಬಿಡುತ್ತಾನೆ ಎನ್ನುವಷ್ಟರಲ್ಲಿ ವಧುವಿನ ಮಗ್ಗುಲಲ್ಲಿಯೇ ನಿಂತ ಆಕೆಯ ಗೆಳತಿಯ ಕೊರಳಿಗೆ ವರ ಹೂಮಾಲೆಯನ್ನು ಹಾಕಿಬಿಡುತ್ತಾನೆ. ಈ ಸಂದರ್ಭದಲ್ಲಿ ಇಬ್ಬರೂ (ವಧು ಮತ್ತು ಗೆಳತಿ) ಒಮ್ಮೆಲೆ ಆಶ್ಚರ್ಯಚಕಿತರಾಗುತ್ತಾರೆ. ಇತ್ತ ವರ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವುದನ್ನು ಬಿಟ್ಟು ತಾನು ಯಾವ ತಪ್ಪೂ ಮಾಡಿಲ್ಲ ಎನ್ನುವ ಹಾಗೆ ಒಂದೇ ಸವನೆ ಚಪ್ಪಾಳೆ ತಟ್ಟಿ ಹುಚ್ಚನಂತೆ ಕುಚೇಷ್ಟೆ ಮಾಡುತ್ತ ಕುಣಿಯುತ್ತಿದ್ದಾನೆ.
ವಿಡಿಯೋ ನೋಡಿ
View this post on Instagram
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ವೇಗವಾಗಿ ಹರಡುತ್ತಿದೆ. ಇದನ್ನು ನೋಡಿದ ನೇಟಿಜನ್ಸ್ ಗಳಲ್ಲಿ ಕೆಲವರು ಸಂತೋಷ ವ್ಯಕ್ತ ಮಾಡಿದರೆ ಇನ್ನೂ ಕೆಲವರು ಅಸಮಾಧಾನ ವ್ಯಕ್ತಪಡಿಸಿ ವರನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬ ಯೂಸರ್ ವೇರಿ ಫನ್ನಿ ಎಂದರೆ, ಇನ್ನೊಬ್ಬ ಎಲ್ಲರೂ ಸ್ವೀಟ್ ತಿಂದು ಹೋದರೆ ವರ ಮಾತ್ರ ಚಪ್ಪಲಿ ತಿಂದು ಹೋಗುತ್ತಾನೆ ಎಂದಿದ್ದಾನೆ.