ವಧುವಿಗೆ ಸತಾಯಿಸಲು ಸ್ಟೇಜ್ ಮೇಲೆ ಕುಳಿತುಕೊಳ್ಳಲು ಸ್ಥಳವೇ ನೀಡದಿದ್ದಾಗ ಭಂಡ(ಡಿ) ವಧು ಮಾಡಿದಳು ಗಂಡಿನಂತೆ ಕೆಲಸ…

ಸದ್ಯ ಎಲ್ಲಿ ನೋಡಿದಲ್ಲಿ ಮದುವೆಗಳು ತುಂಬಾ ಜೋರಾಗಿ ಜರಗುತ್ತಿವೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಮದುವೆಗಳಲ್ಲಿಯ ವಿವಿಧ ರೋಚಕ ಪ್ರಸಂಗಗಳ ಪುಟ್ಟ ಪುಟ್ಟ ವಿಡಿಯೋಗಳು ದಿನನಿತ್ಯ ವೈರಲ್ ಆಗುತ್ತಿವೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿದೆ. ಈ ವಿಡಿಯೋದಲ್ಲಿ ಸ್ಟೇಜ್ ಮೇಲೆ ವಧು ಬಿಂದಾಸ್ ಬಾಸ್ ತರ ವರ್ತಿಸಿದ್ದಾಳೆ.

ಪ್ರಸ್ತುತ ವಿಡಿಯೋದಲ್ಲಿ ಮದುವೆಯ ಪ್ರಸಂಗ ಕಂಡು ಬರುತ್ತಿದೆ. ಈ ವಿಡಿಯೋದಲ್ಲಿ ಮದುಮಕ್ಕಳು ಕೂಡುವ ಸ್ಥಳದಲ್ಲಿ ವರನ ಜೊತೆಗೆ ಆತನ ಆಪ್ತರು ಕುಳಿತುಕೊಂಡಿದ್ದಾರೆ. ಸರಿಯಾಗಿ ಅದೇ ಸಮಯಕ್ಕೆ ವಧು ಅಲ್ಲಿ ಎಂಟ್ರಿ ಮಾಡುತ್ತಾಳೆ. ಆಗ ವರನ ಜೊತೆಗೆ ಕುಳಿತ ಆಪ್ತರು ಯಾರು ತಮ್ಮ ಜಾಗ ಬಿಟ್ಟು ಏಳುವುದಿಲ್ಲ. ಅವರಿಗೆ ಒಟ್ಟಿನಲ್ಲಿ ವಧುವಿಗೆ ಸತಾಯಿಸುವ ವಿಚಾರ ಇದ್ದಿರಬಹುದು. ಆದರೆ ವಧು ಮಾತ್ರ ಅವರೆಲ್ಲರಿಗಿಂತಲೂ ಭಂಡಿ ಎಂಬುದನ್ನು ಕ್ಷಣದಲ್ಲಿಯೇ ಸಾಬೀತು ಮಾಡಿ ತೋರಿಸಿದ್ದಾಳೆ. ಯಾರೂ ಎದ್ದು ಕುಳಿತುಕೊಳ್ಳಲು ಜಾಗವನ್ನು ಕೊಡದೆ ಇದ್ದಾಗ ವಧು ಯಾವುದೇ ವಿಚಾರ ಮಾಡದೆ ಮತ್ತು ಯಾರ ಮುಲಾಜಿಗೆ ಬೀಳದೆ ನೇರ ವರನ ಮಂಡಿಯ ಮೇಲೆ ಹೋಗಿ ಕುಳಿತುಕೊಂಡಿದ್ದಾಳೆ.

ವಿಡಿಯೋ ನೋಡಿ

ವಧುವಿನ ಈ ಸ್ಟೈಲ್ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ. ನೇಟಿಜನ್ಸ್ ಗಳು ಈ ವಿಡಿಯೋಗೆ ಭರ್ಜರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ dulhaniyya ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.