ವಧು-ವರರ ರೊಮ್ಯಾನ್ಸ್ ನೋಡಿ ಹೊಟ್ಟೆ ಉರಿದುಕೊಂಡ ಬ್ಯಾಚಲರ್ಸ ಇನ್ನಾದರೂ ಕರುಣೆ ತೋರೆಂದು ದೇವರಿಗಿಟ್ಟರು ಮೊರೆ!

ಸಂಗಾತಿ ಸ್ವರ್ಗದಲ್ಲಿ ಮೊದಲೇ ನಿಶ್ಚಿತವಾಗಿರುತ್ತದಂತೆ ಎಂದು ಹೇಳುತ್ತಾರೆ. ಯಾರು, ಏನು, ಎಷ್ಟೇ ಬಾಲ ಆಡಿಸಿದರೂ ಅದರಲ್ಲಿ ಬದಲಾವಣೆ ಆಗುವದಿಲ್ಲ ಎಂಬ ಒಂದು ನಂಬಿಕೆ. ಒಂದು ಜೊತೆಗಾರ ಅಥವಾ ಜೊತೆಗಾತಿ ಒಳ್ಳೆಯ ವ್ಯಕ್ತಿ ದೊರೆಯಬೇಕಾದರೆ ಪೂರ್ವ ಜನ್ಮದ ಪುಣ್ಯ ಬೇಕಾಗುತ್ತೆ ಎಂಬ ವಿಶ್ವಾಸವೂ ನಮ್ಮಲ್ಲಿ ತುಂಬಾ ದೃಢವಾಗಿದೆ. ಕೆಲವೊಂದು ಜೋಡಿಗಳನ್ನು ನೋಡಿದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಇನ್ನು ಕೆಲವು ಜೋಡಿಗಳನ್ನು ನೋಡಿದಾಗ ಸಖತ್ ಆಶ್ಚರ್ಯವೂ ಸಹ ಉಂಟಾಗುತ್ತದೆ. ಸದ್ಯ ಇದೇ ರೀತಿಯ ಒಂದು ಜೋಡಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಾಕಷ್ಟು ಬಾರಿ ನಾವು ನೋಡುವ ಜೋಡಿಗಳ ವಯಸ್ಸಿನಲ್ಲಿ ಹೆಚ್ಚು ಕಡಿಮೆ ವಯಸ್ಸಿನ ಅಂತರ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ. ಮೊದಲಿನ ಕಾಲದಲ್ಲಿ ಈ ಅಂತರ ತುಂಬಾ ಇರುತ್ತಿತ್ತು. ಕಾಲ ಬದಲಾದ ಹಾಗೆ ವಿಚಾರಗಳು ಬದಲಾದ ಹಾಗೆ ವಯಸ್ಸಿನ ಅಂತರ ಸಹ ತುಂಬಾನೇ ಕಡಿಮೆಯಾಗುತ್ತ ಬಂತು. ಈಗ ಇಲ್ಲಿ ಕಂಡು ಬರುವ ಜೋಡಿಯ ವಯಸ್ಸು ನೋಡಿದಾಗ ನಿಜಕ್ಕೂ ಬೆಚ್ಚಿ ಬೀಳುವಂತಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ತುಂಬಾ ಹಿರಿಯ ವ್ಯಕ್ತಿಯ ಮಗ್ಗುಲಲ್ಲಿ ಕುಳಿತ ವಧು ತನ್ನ ಗಂಡನಿಗೆ ಪ್ರೀತಿಯಿಂದ I LOVE YOU ಎನ್ನುತ್ತಾಳೆ. ಅದಕ್ಕೆ ಪ್ರತಿಯಾಗಿ ಆತನು ಸಹ ತನ್ನ ಭಾವಿ ಪತ್ನಿಗೆ ತುಂಬಾ ರೊಮ್ಯಾಂಟಿಕ್ ಮೂಡ್ ನಲ್ಲಿ ಮೇಲಿನ ಶಬ್ದಗಳನ್ನೇ ಬಳಸಿ ರಿಪ್ಲಾಯ್ ನೀಡುತ್ತಾನೆ. ಇಬ್ಬರ ಮುಖ ಖುಷಿಯಿಂದ ಅರಳುತ್ತದೆ. ಈ ಸಂದರ್ಭದಲ್ಲಿ ಆಕೆ ತನ್ನ ಗಂಡನ ಹಣೆಗೆ ಮುತ್ತನ್ನು ಸಹ ಕೊಡುತ್ತಾಳೆ.

ವಿಡಿಯೋ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ಈ ವಿಡಿಯೋ ನೋಡಿದ ನಂತರ ನೆಟ್ಟಿಗರು ಅನೇಕ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಎಷ್ಟೋ ಜನ ಬ್ಯಾಚಲರ್ ಗಳು ತಮ್ಮ ಹಣೆಬರಹಕ್ಕೆ ದೋಷ ನೀಡುತ್ತಿದ್ದಾರೆ. ‘ಒಬ್ಬನಂತೂ ನಾನು ಸಂಪೂರ್ಣವಾಗಿ ಒಂಟಿಯಾಗಿದ್ದೇನೆ’ ಅಂದರೆ ಇನ್ನೊಬ್ಬ ಯೂಸರ್ ‘ಹೇ ಪ್ರಭು ಇನ್ನಾದರೂ ಕಣ್ಣುಗಳನ್ನು ತೆರೆ’. ಎಂದು ಕರುಣೆಯಿಂದ ಬೇಡಿಕೊಂಡಿದ್ದಾನೆ.