ವರದಕ್ಷಿಣೆಯಲ್ಲಿ ಮಾವ ಟ್ರೈನ್ ಕೊಡುವನಿದ್ದನಂತೆ! ಕ್ಯಾನ್ಸಲ್ ಮಾಡಿದ ಕಾರಣವನ್ನು ಅಳಿಯನೇ ಹೇಳಿದ ವೈರಲ್ ವಿಡಿಯೋದಲ್ಲಿ ನೋಡಿ…!
ಸೋಶಿಯಲ್ ಮೀಡಿಯಾ ಎಂದರೆ ಮನೋರಂಜನೆಯನ್ನು ನೀಡುವ ದೊಡ್ಡ ಪ್ಲಾಟ್ಫಾರ್ಮ್. ಇಲ್ಲಿ ಎಲ್ಲ ರೀತಿಯ ವಿಡಿಯೋಗಳು ನೋಡಲು ಸಿಗುತ್ತವೆ. ಅದರಲ್ಲೂ ತಮಾಷೆಯ ವಿಡಿಯೋಗಳಂತೂ ನೇಟಿಜನ್ಸ್ ಗಳಿಗೆ ಸಕ್ಕತ್ತಾಗಿ ಮಜಾ ನೀಡುತ್ತವೆ. ಸದ್ಯ ತಮಾಷೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಕಣ್ಣಲ್ಲಿ ಕಣ್ಣಿಟ್ಟು ಶುದ್ಧ ಸುಳ್ಳು ಮಾತನಾಡುವುದು ಕಂಡುಬರುತ್ತಿದೆ. ವಿಡಿಯೋದಲ್ಲಿರುವ ವ್ಯಕ್ತಿಯು ಸುಳ್ಳು ಮಾತನಾಡುವುದನ್ನು ಕೇಳಿ ನೇಟಿಜನ್ಸ್ ಗಳು ತುಂಬಾ ತಮಾಷೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ ಹಾಗೂ ಈ ವಿಡಿಯೋದ ಫುಲ್ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ವಿಡಿಯೋದಲ್ಲಿಯ ವ್ಯಕ್ತಿ ಅಥವಾ ಅಳಿಯ ಹೇಳುವಂತೆ ಪತ್ನಿಯ ತವರು ಮನೆಯವರು ವಿಶೇಷವಾಗಿ ಮಾವ ವರದಕ್ಷಿಣೆಯಲ್ಲಿ ತನಗೆ ಟ್ರೈನ್ ನೀಡುವ ಆಫರ್ ಕೊಟ್ಟಿದ್ದರಂತೆ. ಮತ್ತು ಇದು ಸತ್ಯವೆಂದು ಹೇಳುತ್ತಾನೆ. ವಿಡಿಯೋದಲ್ಲಿ ಬೇರೊಬ್ಬ ವ್ಯಕ್ತಿ ಆತನಿಗೆ, “ಮತ್ತೆ ನೀನು ಅವರಿಂದ ಟ್ರೈನ್ ಯಾಕೆ ತೆಗೆದುಕೊಳ್ಳಲಿಲ್ಲ”? ಎಂದು ಮರುಪ್ರಶ್ನೆ ಮಾಡುತ್ತಾನೆ. ಅದಕ್ಕೆ ಅಳಿಯ, “ನನಗೆ ಟ್ರೈನ್ ನಡೆಸಲು ಬರುವುದಿಲ್ಲ, ಜೊತೆಗೆ ಟ್ರೈನ್ ನಿಲ್ಲಿಸಲು ಸೂಕ್ತವಾದ ಸ್ಥಳವಿಲ್ಲ ಈ ಕಾರಣದಿಂದಾಗಿ ನಾನು ಟ್ರೈನ್ ತೆಗೆದುಕೊಳ್ಳುವುದನ್ನು ಕ್ಯಾನ್ಸಲ್ ಮಾಡಿಬಿಟ್ಟೆ” ಎಂದು ಹೇಳುತ್ತಾನೆ.
ಪ್ರಸ್ತುತ ವಿಡಿಯೋ ಹಿಂದಿ ಭಾಷೆಯಲ್ಲಿದ್ದು ನೇಟಿಜನ್ಸ್ ಗಳು ವಿಡಿಯೋ ನೋಡಿ ನಕ್ಕು ಇನ್ನೊಬ್ಬರಿಗೂ ಶೇರ್ ಮಾಡಿ ನಗಿಸುತ್ತಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಸುಮಾರು 10 ಲಕ್ಷ ಜನರು ನೋಡಿದ್ದಾರೆ. ನೇಟಿಜನ್ಸ್ ಗಳು ಈ ವಿಡಿಯೋಗೆ ಲೈಕ್ಸ್ ಮಾಡುವುದರ ಜೊತೆಗೆ ತರತರದ ತಮಾಷೆಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.