ವರ ಪ್ರೀತಿಯಿಂದ ತಿನಿಸಲೆತ್ನಿಸಿದ ಸಿಹಿ ಬೀಸಿ ಒಗೆದಳು ವಧು, ತಾನೇನು ಕಮ್ಮಿ ಇಲ್ಲ ಎಂದ ವರ ಮಾಡಿದ್ದೇನು ನೋಡಿ..!

ಸದ್ಯ ಎಲ್ಲಿ ನೋಡಿದಲ್ಲಿ ಮದುವೆಗಳು ತುಂಬಾ ಜೋರಾಗಿ ಜರಗುತ್ತಿವೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಮದುವೆಗಳಲ್ಲಿ ನಡೆದ ವಿವಿಧ ರೋಚಕ ಪ್ರಸಂಗಗಳ ಪುಟ್ಟ ಪುಟ್ಟ ವಿಡಿಯೋಗಳು ದಿನನಿತ್ಯ ವೈರಲ್ ಆಗುತ್ತಿವೆ. ಸದ್ಯ ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿದೆ. ಈ ವಿಡಿಯೋದಲ್ಲಿ ಮದುವೆಯಾದ ಮೊದಲ ಗಳಿಗೆಯಲ್ಲಿಯೇ ಸ್ಟೇಜ್ ಮೇಲೆ ವಧು-ವರರ ಮುನಿಸು, ಕೋಪ ಕಂಡುಬರುತ್ತಿದೆ.

ಮದುವೆಯಾದ ನಂತರ ಮದುಮಕ್ಕಳು ಪರಸ್ಪರ ಒಬ್ಬರಿಗೊಬ್ಬರು ಸಿಹಿ ತಿನಿಸಲೆಂದು ಸಂಬಂಧಿಕರು ಸ್ವೀಟ್ ತಂದುಕೊಟ್ಟಿದ್ದಾರೆ. ವರ ಮೊದಲು ತನ್ನ ಪತ್ನಿಗೆ ಸಿಹಿ ತಿನಿಸಲು ಮುಂದಾಗಿದ್ದಾನೆ. ಆದರೆ ಯಾಕೋ ಏನೋ ಗೊತ್ತಿಲ್ಲ ವಧು ವರನ ಮೇಲೆ ತುಂಬಾ ಕೋಪಗೊಂಡಿದ್ದಂತೆ ಕಾಣುತ್ತಿದ್ದಾಳೆ. ಹೀಗಾಗಿ ಸಿಟ್ಟಿನ ಭರದಲ್ಲಿ ತನ್ನ ಪತಿ ನೀಡಿದ ಸ್ವೀಟ್ ತಿನ್ನದೆ ಅದನ್ನು ಕೈಯಲ್ಲಿ ಹಿಡಿದು ಎದುರಿಗಿದ್ದ ಜನರಲ್ಲಿ ಬಿಸಾಕಿದ್ದಾಳೆ. ಮದುವೆ ಮಂಟಪದಲ್ಲಿ ಎಲ್ಲರ ಎದುರೇ ತಾನು ಪ್ರೀತಿಯಿಂದ ನೀಡಿದ ಸಿಹಿಯನ್ನು ಸ್ವೀಕರಿಸದೆ ತನ್ನ ಭಾವಿಪತ್ನಿ ಈ ರೀತಿಯಾಗಿ ವರ್ತಿಸಿದ್ದನ್ನು ನೋಡಿದ ವರ ಅದೇಗೆ ಸಹಿಸಬಲ್ಲ. ಆತನೂ ಸಹ ಮುಯ್ಯಿಗೆ ಮುಯ್ಯಿ ಎಂಬ ರೀತಿಯಲ್ಲಿ ತನ್ನ ಹೆಂಡತಿಯ ಜೊತೆಗೆ ನಡೆದುಕೊಂಡಿದ್ದಾನೆ.

ಪತ್ನಿ ಸ್ವೀಟ್ ನಿರಾಕರಿಸಿದ ನಂತರ ವರನ ಮನಸ್ಸಿಗೆ ಪೆಟ್ಟಾಗಿದೆ. ಇದಾದನಂತರ ವಧು ವರನಿಗೆ ಗ್ಲಾಸಿನಲ್ಲಿ ಪಾನೀಯವನ್ನು ಕುಡಿಸಲು ಮುಂದಾಗಿದ್ದಾಳೆ. ಆಗ ವರ ವಧುವಿನ ಹಾಗೆಯೇ ಅದನ್ನು ನಿರಾಕರಿಸಿದ್ದಾನೆ. ಅಲ್ಲಿ ವಧು ಮತ್ತಷ್ಟು ಗರಮ್ ಆಗಿ ಕೋಪಗೊಂಡು ಖಾಲಿ ಗ್ಲಾಸನ್ನು ಎದುರಿಗಿದ್ದ ನೆಂಟರಿಷ್ಟರ ಕಡೆಗೆ ಬಿಸಾಡಿದ್ದಾಳೆ.

ವಿಡಿಯೋ ನೋಡಿ

ಪ್ರಸ್ತುತ ವಿಡಿಯೋವನ್ನು ನೋಡಿದ ನೇಟಿಜನ್ಸ್ ಗಳು ತಲೆಗೆ ಹಚ್ಚಿ ಕುಳಿತಿದ್ದಾರೆ. ಮದುವೆಯ ಮೊದಲ ದಿವಸವೇ ವಧುವಿನ ರೂಪ ಹೀಗಿದ್ದರೆ ಇನ್ನು ಜೀವನವಿಡಿ ವರನ ಅವಸ್ಥೆ ಏನಾಗಬಹುದು ಎಂಬ ಚಿಂತೆಯನ್ನು ವ್ಯಕ್ತ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದೆ.