ವರ ವಧುವಿನ ಕೊರಳಿಗೆ ಹೂಮಾಲೆ ಹಾಕುತ್ತಲೇ ವಧು ವರನ ಕೆನ್ನೆಗೆ ಮಾಡಿದಳು ಕಪಾಳಮೋಕ್ಷ… ವಿಡಿಯೋ ವೈರಲ್

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಮದುವೆಯಲ್ಲಿ ನಡೆದ ರೋಚಕ ಪ್ರಸಂಗಗಳ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ನೇಟಿಜನ್ಸ್ ಗಳು ಸಹ ಮದುವೆಯಲ್ಲಿ ನಡೆದ ವಿಚಿತ್ರ ಪ್ರಸಂಗಗಳನ್ನು ನೋಡಲು ತುಂಬಾ ಇಷ್ಟಪಡುತ್ತಾರೆ. ಮದುವೆಯಲ್ಲಿಯ ಕೆಲವು ವಿಡಿಯೋಗಳು ನೋಡಿದ ನಂತರ ನಕ್ಕು ನಕ್ಕು ಸುಸ್ತಾಗುತ್ತೆವೆ. ಕೆಲವು ಸಲ ಈ ರೀತಿಯ ವಿಡಿಯೋಗಳನ್ನು ನೋಡಿದಾಗ ಆಶ್ಚರ್ಯವೂ ಸಹ ಉಂಟಾಗುತ್ತದೆ. ಮೊದಲು ವಧು ಮತ್ತು ವರ ಮದುವೆಯಾಗುವ ಸಮಯದಲ್ಲಿ ಸುಮ್ಮನೆ ಸ್ಟೇಜ್ ಮೇಲೆ ಕುಳಿತಿರುತ್ತಿದ್ದರು. ಆದರೆ ಸದ್ಯದ ಸಮಯದಲ್ಲಿ ಎಲ್ಲರಿಗಿಂತ ವಧು-ವರರೇ ತುಂಬಾ ಆಕ್ಟಿವ್ ಆಗಿರುತ್ತಾರೆ. ಇದೇ ರೀತಿಯ ವಧು ವರರ ಮಧ್ಯೆ ನಡೆದ ಕಪಾಳಮೋಕ್ಷದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮೀಡಿಯಾ ರಿಪೋರ್ಟ್ ಪ್ರಕಾರ ಮದುವೆ ವಿಧಿ ವಿಧಾನಗಳು ನಡೆದಾಗ ವರನು ವಧುವಿನ ಕೊರಳಿಗೆ ಹೂಮಾಲೆಯನ್ನು ತೊಡಿಸಲು ಹೋಗುತ್ತಾನೆ. ವರನಿಂದ ಅಂಥ ತಪ್ಪೇಯೇನಾಯಿತು ಎಂಬುದು ಗೊತ್ತಾಗಲಿಲ್ಲ ಕಾರಣ ವರನು ವಧುವಿನ ಕೊರಳಿಗೆ ಹೂಮಾಲೆ ಹಾಕುತ್ತಲೇ ವಧು ಸಿಟ್ಟಿನಿಂದ ವರನ ಕೆನ್ನೆಗೆ ಬಾರಿಸಿದ್ದಾಳೆ. ಇದೇ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಚರ್ಚೆಯ ವಿಷಯವಾಗಿದೆ.

ವಿಡಿಯೋ ನೋಡಿ

ಮದುವೆಯ ಕಾರ್ಯಕ್ರಮಗಳು, ವಿಧಿವಿಧಾನಗಳು ಸಾಂಗೋಪಾಂಗವಾಗಿ ನಡೆದಿರುವಾಗ ವರ ಸ್ಟೇಜ್ ಮೇಲೆ ನಿಂತಿದ್ದನು. ವಧು ಸಹ ತನ್ನ ಗೆಳತಿಯರ ಜೊತೆಗೆ ಸ್ಟೇಜ್ ಮೇಲೆ ಉಪಸ್ಥಿತಳಿದ್ದಳು. ಆಗ ಹೂಮಾಲೆಯನ್ನು ಹಾಕುವ ಸಂದರ್ಭದಲ್ಲಿ ವಧು ಒಮ್ಮೆಲೆ ವರನ ಮುಖಕ್ಕೆ ಹೊಡೆಯಲು ಶುರುಮಾಡಿದಳು. ಘಟನೆಯ ಕಾರಣವನ್ನು ಕೇಳಿದಾಗ ಕೆಲವರು ಹುಡುಗಿಗೆ ಹುಡುಗ ಇಷ್ಟವಿಲ್ಲದಕ್ಕಾಗಿ ಈ ರೀತಿ ಮಾಡಿದ್ದಾಳೆ ಎಂದರೆ ಇನ್ನು ಕೆಲವರು ಹುಡುಗ ಮದುವೆಯಲ್ಲಿ ಎಣ್ಣೆ ಹೊಡೆದಿದ್ದನು ಅದಕ್ಕಾಗಿ ನಶೆ ಇಳಿಸಲು ಆಕೆ ಈ ರೀತಿ ಮಾಡಿದ್ದಾಳೆಂದು ಹೇಳಿದ್ದಾರೆ.