ವಲಸಿಗರನ್ನು ಮನೆಗೆ ತಲುಪಿಸಲು ಒಂದು ಬಸ್‌ಗೆ ಖರ್ಚಾಗುವ ಹಣವೆಷ್ಟು? ಸೋನು ಸೂದ್ ಹೇಳಿದ್ದೇನು?
ಬಾಲಿವುಡ್ ನಟ ಸೋನು ಸೂದ್ ಈ ದಿನಗಳಲ್ಲಿ ಬಡವರ ಪಾಲಿನ ದೇವರು ಎಂದು ಕರೆದುಕೊಳ್ಳುತ್ತಿದ್ದಾರೆ. ಅವರು ಎಲ್ಲಾ ಚಲನಚಿತ್ರಗಳಲ್ಲಿ ಖಳನಾಯಕರ ಪಾತ್ರಗಳನ್ನು ನಿರ್ವಹಿಸಿದ್ದರೂ, ಕರೋನಾದ ಬಿಕ್ಕಟ್ಟಿನ ಸಮಯದಲ್ಲಿ ಅವರು ನಿಜ ಜೀವನದ ನಾಯಕ ಎಂದು ಸಾಬೀತುಪಡಿಸಿದ್ದಾರೆ. ಅವರು ನಿರಂತರವಾಗಿ ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸುತ್ತಿದ್ದಾರೆ ಮತ್ತು ಈಗ ಅವರು ಬಸ್ ಕಳುಹಿಸಲು ಎಷ್ಟು ಖರ್ಚಾಗುತ್ತದೆ ಎಂದು ವಿವರಿಸಿದ್ದಾರೆ.
ಆರಂಭದಲ್ಲಿ ಸೋನು ಕರೋನಾ ವೈರಸ್ ಪರಿಹಾರ ನಿಧಿಗೆ ಕೊಡುಗೆ ನೀಡಿದರು ಮತ್ತು ಕರೋನಾ ರೋಗಿಗಳ ಚಿಕಿತ್ಸೆಗಾಗಿ ತನ್ನ ಜುಹು ಮೂಲದ ಹೋಟೆಲ್ ವೈದ್ಯಕೀಯ ಸಿಬ್ಬಂದಿಯವರಿಗೆ ವಾಸವಾಗಿರಲು ನೀಡಿದರು. ನಂತರ ಪರಿಸ್ಥಿತಿ ಹದಗೆಡುತ್ತಿರುವುದನ್ನು ನೋಡಿ ಮತ್ತು ಕಾರ್ಮಿಕರು ಬೀದಿಗಳಲ್ಲಿ ನಡೆದುಕೊಂಡು ಹೋಗುವುದನ್ನು ನೋಡಿ, ವಲಸೆ ಕಾರ್ಮಿಕರನ್ನು ಬಸ್‌ಗಳಲ್ಲಿ ಮನೆಗೆ ಕರೆದೊಯ್ಯುವ ಜವಾಬ್ದಾರಿಯನ್ನು ವಹಿಸಿಕೊಂಡರು.
ಬಸ್ಸುಗಳನ್ನು ವ್ಯವಸ್ಥೆ ಮಾಡಲು ಸೋನು ಸೂದ್ ಅವರು ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆದರು ತದನಂತರ ಸೋನು ಸೂದ್ ಹಾಗೂ ಅವರ ತಂಡದ ಜೊತೆಗೂಡಿ ವಲಸಿಗರನ್ನು ಮನೆಗೆ ಕಳುಹಿಸಲು ಪ್ರಾರಂಭಿಸಿದರು, ಅದು ಇನ್ನೂ ನಡೆಯುತ್ತಿದೆ. ಕೆಲವು ದಿನವಸಗಳ ಹಿಂದೆ ಸೋನು ಸೂದ್ ಅವರು ಒಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ ಆ ವಿಡಿಯೋ ದಲ್ಲಿ ಅವರು “ಕಡಿಮೆ ಸಮಯದಲ್ಲಿ ಸಾವಿರಕ್ಕಿಂತ ಹೆಚ್ಚು ಜನರಿಂದ ನನಗೆ ಸಂದೇಶಗಳನ್ನು ಬಂದಿವೆ” ಎಂದು ಹೇಳಿದರು.

ಸೋನು ಅವರಿಗೆ ರಾತ್ರಿಯ ಸಮಯದಲ್ಲಿ ಮಲಗಲು ಸಾಧ್ಯವಾಗುತ್ತಿರಲಿಲ್ಲ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಜನರಿಗೆ ಸಹಾಯ ಮಾಡುವ ಬಗ್ಗೆ ಹೇಗೆ ಯೋಚಿಸುತ್ತೀರಿ ಎಂದು ಸೋನು ಅವರನ್ನು ಕೇಳಿದಾಗ, “ವಲಸಿಗರ ದುಃಸ್ಥಿತಿಯ ಕಂಡು ನನಗೆ ರಾತ್ರಿ ಮಲಗಲು ಸಾಧ್ಯವಾಗಲಿಲ್ಲ” ಎಂದು ನಟ ಹೇಳಿದರು. ಇದರ ನಂತರ ಅವರಿಗೆ ಸಹಾಯ ಮಾಡಲು ನಿರ್ಧರಿಸಿದರು. ಪ್ರತಿಯೊಬ್ಬ ವಲಸಿಗರನ್ನೂ ತಲುಪಿಸುವವರೆಗೂ ತಮ್ಮ ಕೆಲಸವನ್ನು ಮುಂದುವರಿಸುವುದಾಗಿ ಹೇಳಿದರು.
ಒಂದು ಬಸ್ ನ ವ್ಯವಸ್ಥೆ ಮಾಡಲು ತಗಲುವ ವೆಚ್ಚ ಎಷ್ಟಾಗುವದು?
ವಲಸಿಗರನ್ನು ಮನೆಗೆ ಕಳುಹಿಸಲು ಒಂದು ಬಸ್ ಸಲುವಾಗಿ ಎಷ್ಟು ಖರ್ಚಾಗುತ್ತದೆ ಎಂದು ಕೇಳಿದಾಗ, ಸೋನು ಅವರು ” 1.8 ಲಕ್ಷದಿಂದ 2 ಲಕ್ಷ ರೂ. ಆಗುವದು ಅಲ್ಲದೆ ವಲಸಿಗರು ಎಲ್ಲಿಗೆ ಹೋಗಬೇಕು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.” ಎಂದು ತಿಳಿಸಿದ್ದಾರೆ.
ತಾವು ಸಹ ಇಂತಹ ಪರಸ್ಥಿತಿಗಳನ್ನು ಅನುಭವಿಸಿದ್ದರಿಂದ ನಾನು ಈ ಕಾರ್ಯಮಾಡಲು ನಿಶ್ಚಯ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ನಿಜವಾಗಿಯೂ ಇವರು ಈ ವಲಸೆ ಕಾರ್ಮಿಕರ ಮನಸ್ಸಲ್ಲಿ ದೇವರಾಗಿ ಉಳಿಯುವರು.