ವಾಹನ ನಿಲ್ಲಿಸಿ ರಸ್ತೆ ದಾಟಲು ಎಡೆ ಮಾಡಿಕೊಟ್ಟ ಚಾಲಕನಿಗೆ ವಿಶೇಷ ರೀತಿಯಲ್ಲಿ ಧನ್ಯವಾದ ಅರ್ಪಿಸಿದ ಜಾಣ ಆನೆಯ ಅದ್ಭುತ ವೈರಲ್ ವಿಡಿಯೋ!
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಪ್ರಾಣಿಗಳ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಈ ವಿಡಿಯೋಗಳಿಂದ ಪ್ರಾಣಿಗಳಲ್ಲಿರುವ ಜಾಣತನದ ಅರಿವು ನಮಗಾಗುತ್ತದೆ. ಕೆಲವೊಂದು ಸಲ ಈ ಪ್ರಾಣಿಗಳು ಮಾಡುವ ತಮಾಷೆಯು ಸಹ ನೋಡುಗರ ಮನಸ್ಸು ಸೋರೆಗೊಳ್ಳುತ್ತವೆ.
ಮಾಡಿದ ಸಹಾಯಕ್ಕೆ ಪ್ರತಿಯಾಗಿ ಕೃತಜ್ಞತೆಯನ್ನು ಅಥವಾ ಧನ್ಯವಾದಗಳನ್ನು ಅರ್ಪಿಸಿದ ಜಾಣ ಆನೆಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನಸ್ಸು ಗೆದ್ದಿದೆ. ಆನೆಯು ಇದೊಂದು ಬುದ್ದಿವಂತ ಪ್ರಾಣಿ ಎಂದು ತಿಳಿಯಲಾಗುತ್ತದೆ. ಈ ಪ್ರಾಣಿಗೆ ಸ್ಮರಣ ಶಕ್ತಿಯು ಸಹ ಹೆಚ್ಚಾಗಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಆನೆಯ ಒಂದು ಗುಂಪು ಅರಣ್ಯದಲ್ಲಿಯ ರಸ್ತೆಯನ್ನು ದಾಟುತ್ತಿದೆ. ಈ ಗುಂಪಿನಲ್ಲಿ ಕೊನೆಯ ಆನೆಯು ನಡೆದುಕೊಂಡ ರೀತಿ ನಿಜಕ್ಕೂ ಹೊಗಳಿಕೆಗೆ ಪಾತ್ರವಾಗಿದೆ. ಇದೇ ಕೃತಿ ನೇಟಿಜನ್ಸ್ ಗಳ ಮನಸ್ಸಿಗೆ ತುಂಬಾ ಹಿಡಿಸಿದೆ.
ಏನಿದೆ ಈ ವೈರಲ್ ವಿಡಿಯೋದಲ್ಲಿ?
ವಿಡಿಯೋದಲ್ಲಿ ಮೊದಲು ಆನೆಗಳ ಗುಂಪೊಂದು ರಸ್ತೆಯನ್ನು ದಾಟುತ್ತಿರುವ ದೃಶ್ಯ ಕಂಡುಬರುತ್ತದೆ. ಆನೆಗಳಿಗೆ ರಸ್ತೆದಾಟಲು ಎಡೆಮಾಡಿಕೊಡುವ ಸಲುವಾಗಿ ಕಾರಿನ ಚಾಲಕನು ತನ್ನ ಕಾರನ್ನು ನಿಲ್ಲಿಸುತ್ತಾನೆ. ಆಗ ಈ ಕಾರು ಚಾಲಕನು ತನ್ನ ಮೊಬೈಲ್ ನಿಂದ ಈ ವಿಡಿಯೋವನ್ನು ಶೂಟ್ ಮಾಡಿದ್ದಾನೆ. ಆನೆಗಳ ಸಂಪೂರ್ಣ ಗುಂಪು ರಸ್ತೆ ದಾಟಿದ ನಂತರ ಗುಂಪಿನಲ್ಲಿಯ ಕೊನೆಯ ಆನೆ ತನ್ನ ಸೊಂಡಿಲನ್ನು ಎತ್ತಿ ಕಾರಿನ ಚಾಲಕನಿಗೆ ಧನ್ಯವಾದಗಳನ್ನು ಅರ್ಪಿಸಿದೆ. ಆನೆಯ ಕೃತಜ್ಞತೆಯನ್ನು ದರ್ಶಿಸುವ ಈ ವಿಡಿಯೋ ಚೆನ್ನಾಗಿಯೇ ವೈರಲ್ ಆಗಿದೆ.
ವೀಡಿಯೋ ನೋಡಿ
That gesture at the end is more like 'Hey, thanks'
— Sudha Ramen 🇮🇳 (@SudhaRamenIFS) December 20, 2021
Animals have their #RighttoPassage and providing them a safe passage is our duty as well. Video via WA pic.twitter.com/HJoKg70kvb
ನೇಟಿಜನ್ಸ್ ಗಳ ಪ್ರತಿಕ್ರಿಯೆ…
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಟ್ವಿಟರ್ನಲ್ಲಿ ಐಎಫ್ಎಸ್ ಆಫೀಸರ್ ಸುಧಾ ರಾಮೆನ್ ಅವರು ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ನಾಲ್ಕು ಲಕ್ಷಕ್ಕೂ ಮೀರಿ ಜನರು ನೋಡಿದ್ದಾರೆ. ಮತ್ತು 23 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕ ನೇಟಿಜನ್ಸ್ ಗಳು ಆನೆಯ ಈ ಕೃತಿಗೆ ಬಾಯಿತುಂಬಾ ಹೊಗಳಿದ್ದಾರೆ.