ವಿಚಿತ್ರ ಘಟನೆ! ಆರೋಪಿ ಮಹಿಳೆಯ ನ್ಯಾಯಾಧೀಶನೊಂದಿಗೆ ಮದುವೆ; ಐದು ದಿವಸಗಳ ನಂತರ ಮತ್ತೆ ಜೈಲಿಗೆ ಹೋಗಬೇಕಾಗಿದೆ!
ಭಾರತದಲ್ಲಿ ಲಂಚ ತೆಗೆದುಕೊಳ್ಳುವವರ ಮತ್ತು ಲಂಚದ ಆರೋಪದಲ್ಲಿ ಜೈಲಿಗೆ ಹೋಗುವವರ ಸಂಖ್ಯೆಯೇನು ಕಡಿಮೆ ಇಲ್ಲ. ಇಂಥದೇ ಒಂದು ಪ್ರಕರಣದಲ್ಲಿಯ ಕೇಸಿಗೆ ನಾಟಕೀಯವಾದ ತಿರುವು ಸಿಕ್ಕಿದೆ.
ಒಬ್ಬಳು ಮಹಿಳಾ ಅಧಿಕಾರಿಯು ಲಂಚ ತೆಗೆದುಕೊಂಡ ಆರೋಪದ ಅಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ತದನಂತರ ನ್ಯಾಯಾಧೀಶರ ಜೊತೆಗೆ ಮದುವೆಯಾದ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ. ಆ ಮಹಿಳೆಯ ಹೆಸರು ಪಿಂಕಿ ಮೀನಾ ಎಂದು ಗುರುತಿಸಲಾಗಿದೆ.
ಹಾಯ್ ವೇ ತಯಾರಿಸುತ್ತಿರುವ ಕಂಪನಿಯ ಕಡೆಯಿಂದ 10 ಲಕ್ಷ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ಪಿಂಕಿ ಮೀನಾ ಅವರು ಸಿಕ್ಕಿಬಿದ್ದಿದ್ದಾರೆ. ಆದರೆ ಈಗ ಅವರಿಗೆ ಹತ್ತು ದಿವಸಗಳ ಮಧ್ಯಂತರ ಜಾಮೀನು ನೀಡಲಾಗಿದೆ. ಈ ಹತ್ತು ದಿವಸಗಳ ಕಾಲಾವಧಿಯಲ್ಲಿಯೇ ನ್ಯಾಯಾಧೀಶರೊಂದಿಗೆ ಪಿಂಕಿಯು ಮದುವೆಯಾಗಿದ್ದಾಳೆ. ಪಿಂಕಿಯನ್ನು ಮದುವೆ ಮಾಡಿಕೊಂಡ ವ್ಯಕ್ತಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಈ ಮದುವೆಯ ಬಗ್ಗೆ ಸದ್ಯ ರಾಜಸ್ಥಾನದಲ್ಲಿ ತುಂಬಾ ಚರ್ಚೆಯಾಗುತ್ತಿದೆ.
ಪಿಂಕಿ ಮೀನಾಳ ಬಗ್ಗೆ ಹೇಳಬೇಕಾದರೆ, ಈಕೆ, ಜನವರಿ ತಿಂಗಳವರೆಗೆ ರಾಜಸ್ಥಾನದ ಬಾಂದಿಕೂಯಿಯ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆನಂತರ ಅವರ ವರ್ಗಾವಣೆ ದೆಹಲಿ-ಮುಂಬೈ ಎಕ್ಸ್ಪ್ರೆಸ್ ಹೈವೇಯ ಗುತ್ತಿಗೆ ಪಡೆದ ಕಂಪನಿಯೊಂದರಿಂದ 10 ಲಕ್ಷ ರೂಪಾಯಿಗಳ ಲಂಚದ ಡಿಮಾಂಡ್ ಮಾಡಿದ ಆರೋಪದ ಅಡಿಯಲ್ಲಿ ಎಸಿಬಿ (ಆಂಟಿ ಕರುಪ್ಷನ್ ಬ್ಯೂರೋ) ಯವರು ಜನವರಿ 15ರಂದು ಅರೆಸ್ಟ್ ಮಾಡಿದರು.
ಆನಂತರ ಪಿಂಕಿ ಮೀನಾಳು ಮದುವೆಯ ಕಾರಣಕ್ಕಾಗಿ ರಾಜಸ್ಥಾನದ ಉಚ್ಚ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದರು. ಪಿಂಕಿ ಸಲ್ಲಿಸಿದ ಅರ್ಜಿಗೆ ನ್ಯಾಯಾಲಯವು ಸ್ಪಂದಿಸಿ ಹತ್ತು ದಿವಸಗಳ ಮಧ್ಯಂತರ ಜಾಮೀನು ನೀಡಿದೆ. ಫೆಬ್ರುವರಿ 21ರಂದು ಮಧ್ಯಂತರ ಜಾಮೀನಿನ ಕಾಲಾವಧಿ ಮುಗಿಯಲಿದೆ. ಹೀಗಾಗಿ ಪಿಂಕಿ ಮೀನಾ ಮದುವೆಯ ನಂತರ ಮತ್ತೆ ಜೈಲು ಸೇರಬೇಕಾಗಿದೆ.