ವಿಚ್ಛೇದಿತ ಪತ್ನಿಗೆ ಜೀವನಾಂಶ(ಉಪದಾನ) ಕೊಡುವದರಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಮಾಡಿದ ಉಪಾಯವಾದರೂ ಏನು?

ಅನೇಕ ಸಲ ಅನೇಕ ಜನರ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳು ತಲೆದೋರಿ ಕೊನೆಗೆ ಒಂದೇ ನಿರ್ಣಯ ತೆಗೆದುಕೊಳ್ಳಲಾಗುವದು, ಅದೇ ಘಟಸ್ಫೋಟ. ಅವಾಗ್ಲೇ ಗೊತ್ತಾಗುವದು ಮನುಷ್ಯನ ನಿಜವಾದ ರೂಪ. ಮೊದಲು ನಮ್ಮದು ಎನ್ನುವಂಥ ವಸ್ತು ಈಗ ನನ್ನದು ಮತ್ತು ನಿನ್ನದು ಎನ್ನುವ ಶಬ್ದಕ್ಕೆ ರೂಪಾಂತರಿತವಾಗಿರುತ್ತದೆ.

ಹೀಗಿರುವಾಗ ಅನೇಕ ದೊಡ್ಡ ದೊಡ್ಡ ಶ್ರೀಮಂತರ ಘಟಸ್ಪೋಟಗಳ ಬಗ್ಗೆಯೂ ನಾವು ಕೇಳಿರುತ್ತೇವೆ. ಇಲ್ಲಿಯವರೆಗೆ ಎಲ್ಲಕ್ಕೂ ದುಬಾರಿಯಾದ ಜೀವನಾಂಶ amazon ಮಾಲೀಕನ ಘಟಸ್ಪೋಟವಾಗಿದೆ.

ಕೆನಡಾದಲ್ಲಿ ಘಟಸ್ಪೋಟಕ್ಕೆ ಸಂಬಂಧಿಸಿದ ಒಂದು ವಿಚಿತ್ರ ಪ್ರಕಾರ ಬೆಳಕಿಗೆ ಬಂದಿದೆ. ಒಬ್ಬ ಉದ್ಯಮಿ ಘಟಸ್ಪೋಟಿತ ಪತ್ನಿಗೆ ಜೀವನಾಂಶ ನೀಡುವದರಿಂದ ತಪ್ಪಿಸಿಕೊಳ್ಳಲು ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಇಂಥ ಜನರೂ ಇರುತ್ತಾರಾ ಅಂತ ಅನಿಸುತ್ತೆ.

ಏನು ಮಾಡಿದ ಈ ಉದ್ಯಮಿ ನೋಡಿ.

ಕೆನಡಾದಲ್ಲಿಯ Bruce McConville, ಉದ್ಯಮಿಯು ಪತ್ನಿಯ ಜೊತೆಗೆ ವಿವಾದ ಹುಟ್ಟಿಕೊಂಡಿದ್ದರಿಂದ
ಬೇರೆ ಇರಲು ನಿಶ್ಚಯಿಸಿದನು. ಬೆರೆಯಾಗಬೇಕಾದರೆ ಕಾನೂನಿನ ಪ್ರಕಾರ ಹೆಂಡತಿಗೆ ಜೀವನಾಂಶವನ್ನು ನೀಡಬೇಕಾಗುತ್ತದೆ. ಇದರಿಂದ ಬಚಾವಾಗಲು ಈತ ಮಾಡಿದ ಕೆಲಸವೇನೆಂದರೆ, 1 ಮಿಲಿಯನ್ ಡಾಲರ್ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 5 ಕೋಟಿ ₹ ಹಣ ವನ್ನು ಸುಟ್ಟು ಹಾಕಿದನು.

ಈ ಕೆಲಸ ಮಾಡಲು ಬ್ರುಸ್ ಮೊದಲು ತನ್ನೆಲ್ಲ ಬ್ಯಾಂಕ್ ಖಾತೆಗಳಿಂದ ಹಣ ವಾಪಸ್ ಪಡೆದಿದ್ದನು. ಒಟ್ಟು 5 ಬ್ಯಾಂಕ್ ಅಕೌಂಟ್ ಗಳಿಂದ 1 ಮಿಲಿಯನ್ ಡಾಲರ್ ಹಣ ಪಡೆದು ಆ ಹಣಕ್ಕೆ ಬೆಂಕಿ ಇಟ್ಟನು. ಬ್ರುಸ್ ಹೇಳಿಕೆಯ ಮೇಲೆ ಮೊದಲು ಯಾರಿಗೂ ವಿಶ್ವಾಸ ಮೂಡಲಿಲ್ಲ. ನಂತರ ಬ್ಯಾಂಕಿನಿಂದ ಹಣವನ್ನು ತೆಗೆದ ರಸೀದಿ(ಪಾವತಿ)ಗಳನ್ನು ತೋರಿಸಿದಾಗ ಎಲ್ಲರಿಗೂ ನಿಜವೆನಿಸಿತು. ಇಷ್ಟೆಲ್ಲ ಹಣವನ್ನು ಆತ ತನ್ನ ಪ್ರಾಪರ್ಟಿಯನ್ನು ಮಾಡಿ ಒಂದುಗೂಡಿಸಿದ್ದನು.

30 ದಿವಸಗಳ ಕಾರಾಗೃಹ.

ಬ್ರುಸ್ ಮಾಡಿದ ಈ ಕೃತ್ಯಕ್ಕೆ ಕೋರ್ಟು ವೈಯಕ್ತಿಕವಾಗಿ ಅಷ್ಟೇ ಅಲ್ಲ ಸಮಾಜಿಕವಾಗಿಯೂ ದೋಷಿ ಅಂತ ನಿರ್ಧರಿಸಿ 30 ದಿವಸಗಳ ಕಾರಾಗೃಹದ ಶಿಕ್ಷೆಯ ಜೊತೆಗೆ 2 ಸಾವಿರ ಕೆನೆಡಿಯನ್ ಡಾಲರ್ ದಂಡ ಸಹಿತ ವಸೂಲಿ ಮಾಡಿತು.