ವಿಡಿಯೋ; ಕಲ್ಯಾಣ ಮಂಟಪದಲ್ಲಿ ವಧು ಮಾಡಿದ್ದಳು ವರನಿಗೆ ನೀರಿನಲ್ಲಿ ತಳ್ಳಿ ಮಜಾ ನೋಡುವ ಪ್ಲಾನ್ ; ಆದರೆ ಪ್ಲಾನ್ ಉಲ್ಟಾ ಹೊಡೆದಾಗ!
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಒಂದು ಸುಂದರವಾದ ನೆನಪಿರುತ್ತದೆ. ಮದುವೆಯ ದಿನದ ಸುಮಧುರ ಘಳಿಗೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೇಲಿಂದ ಮೇಲೆ ನೆನಸಿಕೊಳ್ಳುತ್ತಾರೆ. ಈ ಸುಮಧುರ ಘಳಿಗೆಗಳನ್ನು ಇನ್ನಷ್ಟು ರೋಚಕವಾಗಿಸಲು ಈಗಿನ ವಧು-ವರರು ಏನಾದರೂ ನೂತನ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ವರ ವಧುವಿನ ಜೊತೆಗೆ ಮತ್ತು ವಧು ವರನ ಜೊತೆಗೆ ಅನೇಕ ರೀತಿಯ ತುಂಟಾಟಗಳನ್ನು ಮಾಡುತ್ತಿರುತ್ತಾರೆ. ಮದುವೆ ಮಂಟಪದಲ್ಲಿ ಮದುವೆ ನಡೆಯುವಾಗ ಇದೇ ರೀತಿಯ ಒಂದು ತುಂಟಾಟ ವಧು ತನ್ನ ವರನ ಜೊತೆಗೆ ಮಾಡಿದ್ದಾಳೆ. ಆಕೆಯ ಈ ಪ್ಲಾನ್ ಫೇಲ್ ಆಗುವದರ ಜೊತೆಗೆ ಮರಳಿ ತನಗೆ ಅದು ತಿರುಗುಬಾಣವಾಗಿ ಪರಿಣಮಿಸಿದೆ.
ಮದುವೆ ಒಂದು ಸುಂದರವಾದ ಹಾಲ್ ನಲ್ಲಿ ನಡೆದಿದೆ. ವಧು-ವರ ಇಬ್ಬರು ನಡೆದು ಬರುತ್ತಿರುವಾಗ ಅವರ ಎಡಕ್ಕೆ ಒಂದು ಸ್ವಿಮಿಂಗ್ ಪೂಲ್ ಇದೆ. ಆಗ ವಧು ತನ್ನ ಪ್ರೀತಿಯ ವರನಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ತಳ್ಳಿ ಮಜಾ ತೆಗೆದುಕೊಳ್ಳಬೇಕೆಂದು ಮನದಲ್ಲಿ ಮಂದಿಗೆ ಹಾಕಿದ್ದಾಳೆ. ಆದರೆ ಪಾಪ ಆಕೆಯ ಪ್ಲಾನ್ ಮಾತ್ರ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ. ಕಾರಣ ವಧು ವರನಿಗೆ ನೀರಿನಲ್ಲಿ ತಳ್ಳುವಾಗ ಜಾಣ ವರ ಮಾತ್ರ ವಧುವನ್ನು ಬಿಟ್ಟೇ ಇಲ್ಲ. ಮೊದಮೊದಲು ಹೇಗಾದರೂ ಮಾಡಿ ಸ್ವಿಮಿಂಗ್ ಪೂಲ್ ನಲ್ಲಿ ಜಿಗಿಯದೇ ಬಚಾವ್ ಆಗಬೇಕೆಂದು ವರ ಪ್ರಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಿಲ್ಲ ಎಂದುಕೊಂಡಾಗ ವರ ವಧುವನ್ನು ಜೊತೆಗೆ ತೆಗೆದುಕೊಂಡೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿದ್ದಿದ್ದಾನೆ. ಸ್ವಿಮಿಂಗ್ ಪೂಲ್ ನಲ್ಲಿ ಬಿದ್ದ ನಂತರ ಇಬ್ಬರು ಒಬ್ಬರಮೇಲೊಬ್ಬರು ಸಿಟ್ಟಾಗದೆ ನೀರಿನಲ್ಲಿ ಮಸ್ತಿ ಮಾಡಲು ಶುರು ಮಾಡಿದ್ದಾರೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು wedd_ing_vibes ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ಚಿಕ್ಕದಿದ್ದರೂ ತುಂಬಾ ತಮಾಷೆಯ ಹಾಗೂ ತುಂಟತನದ ಪ್ರಸಂಗದಿಂದ ಕೂಡಿದೆ. ಪ್ರಸ್ತುತ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿಯವರೆಗೆ ಸುಮಾರು ಲಕ್ಷಾವಧಿ ಜನರು ನೋಡಿದ್ದಾರೆ. ಜೊತೆಗೆ ಕಮೆಂಟ್ ಸೆಕ್ಷನ್ ನಲ್ಲಿ ನಗುತ್ತಿರುವ ಇಮೋಜಿಗಳನ್ನು ಶೇರ್ ಮಾಡಿದ್ದಾರೆ.