ವಿದೇಶಿ ಮಧ್ಯದಲ್ಲಿ ನೀರಿನ ಕಲಬೆರಕೆ; ಮಧ್ಯದಲ್ಲಿ ನೀರು ಬೆರೆಸಿ ಮತ್ತೆ ಸೀಲ್ ! ವಿಡಿಯೋ ವೈರಲ್…

ವಿದೇಶಿ ಮಧ್ಯದಲ್ಲಿ ನೀರನ್ನು ಬೆರೆಸಿ ಮತ್ತೆ ಸೀಲ್ ಮಾಡುತ್ತಿರುವ ಪ್ರಕರಣದ ವಿಡಿಯೋ ಒಂದು ಬೆಳಕಿಗೆ ಬಂದಿದೆ. ಮಧ್ಯದ ಬಾಟಲಿಯಲ್ಲಿ ನೀರು ಬೆರೆಸಿ ಮತ್ತೆ ಮೊದಲಿನ ಹಾಗೆ ಸೀಲ್ ಮಾಡುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗುತ್ತಿದೆ. ಪ್ರಸ್ತುತ ಈ ಪ್ರಕರಣ ಮುಂಬೈ ಹತ್ತಿರದ ಠಾಣೆ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಕಂಡು ಬಂದಿರುವ ಬಗ್ಗೆ ವರದಿಯಾಗಿದೆ.

ಶೀಘ್ರದಲ್ಲಿ ಹಣ ಗಳಿಸುವ ಹವ್ಯಾಸದಿಂದಾಗಿ ಈ ರೀತಿಯ ಕುಕೃತ್ಯಗಳು ಆಗಾಗ ಬೆಳಕಿಗೆ ಬರುತ್ತವೆ. ವಿವಿಧ ರೀತಿಯ ವಿದೇಶಿ ಕಂಪನಿಗಳ ಮದ್ಯದ ಬಾಟಲಿಯಿಂದ ಮಧ್ಯವನ್ನು ಸಂಪೂರ್ಣವಾಗಿ ಅಥವಾ ಅರ್ಧ ಹೊರಗೆ ತೆಗೆದು ಅದರ ಬದಲಾಗಿ ಅಷ್ಟೇ ನೀರು ಬೆರೆಸಿ ಮತ್ತೆ ಸೀಲ್ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣ ಒಂದು ಬೆಳಕಿಗೆ ಬಂದಿದೆ.

ಠಾಣೆ ಜಿಲ್ಲೆಯ ಹತ್ತಿರದ ಗ್ರಾಮೀಣ ಪ್ರದೇಶದಲ್ಲಿ ವಿದೇಶಿ ಮಧ್ಯವನ್ನು ಸಂಗ್ರಹಿಸಿಡುವ ದೊಡ್ಡ ದೊಡ್ಡ ಗೊದಾಮುಗಳು ಇವೆ. ಈ ಗೊದಾಮುಗಳಿಂದ ಟೆಂಪೋಗಳ ಮುಖಾಂತರ ಜಿಲ್ಲೆಯಲ್ಲಿರುವ ವೈನ್ ಶಾಪ್ ಮತ್ತು ಬಾರ್ ರೆಸ್ಟೋರೆಂಟ್ಗಳಿಗೆ ಈ ಮಧ್ಯದ ಸಾಗಾಣಿಕೆ ಮಾಡಲಾಗುತ್ತದೆ. ಈ ಗೊದಾಮುಗಳಿಂದ ವಾಹನ ಹೊರಗೆ ಬೀಳುತ್ತಲೇ ಕತ್ತಲೆಯ ಲಾಭ ಪಡೆದು ವಿದೇಶಿ ಬಾಟಲಿಗಳ ಸೀಲ್ ಓಪನ್ ಮಾಡಿ ಚಾಲಾಕಿಯಿಂದ ಅದರಲ್ಲಿಯ ಮಧ್ಯವನ್ನು ತೆಗೆದು ಅದರ ಬದಲಾಗಿ ಅಷ್ಟೇ ನೀರನ್ನು ಹಾಕಿ ಮತ್ತೆ ಮೊದಲಿನ ಹಾಗೆ ಸೀಲ್ ಮಾಡುವ ಕುಕೃತ್ಯ ವೈರಲ್ ವಿಡಿಯೋದಲ್ಲಿ ಕಂಡು ಬರುತ್ತದೆ.

ನೋಡಿ ಈ ವಿಡಿಯೋ…

ವಿದೇಶಿ ಮದ್ಯಗಳ ಬಾಟಲಿಯಿಂದ ಅರ್ಧಂಬರ್ಧ ಮಧ್ಯವನ್ನು ತೆಗೆದು ಅದರಲ್ಲಿ ಮತ್ತೆ ಅಷ್ಟೇ ನೀರನ್ನು ಬೆರೆಸಿ ಮಾರಾಟ ಮಾಡುವ ಪ್ರಕರಣ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ. ಪ್ರಸ್ತುತ ಪ್ರಕರಣವು ವೈರಲ್ ಆಗಿರುವ ವಿಡಿಯೋದಿಂದ ತಿಳಿದುಬಂದಿದೆ. ಎಣ್ಣೆಯನ್ನು ಹೊಡೆಯುವ ಜನರು ಹೆಚ್ಚಾಗಿ ಈ ವಿದೇಶಿ ಬ್ರಾಂಡ್ಗಳ ಮಧ್ಯವನ್ನು ಇಷ್ಟಪಡುತ್ತಾರೆ. ಇವುಗಳಲ್ಲಿ ಮ್ಯಾಕ್ಡೊವೆಲ್, ರಾಯಲ್ ಚಾಲೆಂಜ್, ಬ್ಲೆಂಡರ್ಸ್ ಪ್ರೈಡ್ ನಂತಹ ಮಧ್ಯದ ಬಾಟಲಿಗಳಿಂದ ಮಧ್ಯವನ್ನು ತೆಗೆದುಕೊಂಡು ಅದರಲ್ಲಿ ನೀರು ಬೆರೆಸುತ್ತಿರುವ ದೃಶ್ಯ ಕಂಡು ಬರುತ್ತಿದೆ.