ವಿದ್ಯುತ್ತಿನ ವೇಗದಲ್ಲಿ ವ್ಯಕ್ತಿ ಕಟ್ ಮಾಡಿದ ಕ್ಯಾಬೇಜ್! ನೆಟ್ಟಿಗರೆಂದರು ಮನುಷ್ಯನೋ ಇಲ್ಲ ರೋಬೋಟ್? ವಿಡಿಯೋ ವೈರಲ್.
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಕ್ಯಾಬೆಜ್ ಕಟ್ ಮಾಡುವ ವಿಡಿಯೋ ಒಂದು ಸದ್ಯ ತೂಫಾನ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಎಲೆಕೋಸಿನ ಬೇಡವಾದ ಎಲೆಗಳನ್ನು ಕಟ್ ಮಾಡುವುದು ನೋಡಿದರೆ ತಲೆ ಗರ್ರ್ ಅಂತ ತಿರುಗುತ್ತೆ.
ಈ ವಿಡಿಯೋದಲ್ಲಿ ವ್ಯಕ್ತಿಯು ಒಂದರಮೇಲೊಂದರಂತೆ ಕ್ಯಾಬೇಜ್ ಗಡ್ಡೆಗಳ ಬೇಡವಾದ ಭಾಗವನ್ನು ವಿದ್ಯುತ್ತಿನ ವೇಗದಲ್ಲಿ ಕತ್ತರಿಸಿ ಒಗೆಯುತ್ತಿರುವದನ್ನು ನೋಡಬಹುದು. ಒಬ್ಬ ವ್ಯಕ್ತಿಯು ಆತನಿಗೆ ಕ್ಯಾಬೇಜ್ ಗಡ್ಡೆಯನ್ನು ಕೊಡುತ್ತಿದ್ದಾನೆ. ಇನ್ನೊಬ್ಬ ವ್ಯಕ್ತಿ ಈತ ಕಟ್ ಮಾಡಿದ ಕ್ಯಾಬೇಜನ್ನು ಚೀಲಲ್ಲಿ ತುಂಬಿ ಕೊಳ್ಳುತ್ತಿದ್ದಾನೆ. ಇದೆಲ್ಲವೂ ಮಿಂಚಿನ ವೇಗದಲ್ಲಿ ನಡೆಯುತ್ತಿದೆ. ವಿಶೇಷವೆಂದರೆ ಎಲೆಕೋಸಿನ ಗಡ್ಡೆಯ ಬೇಡವಾದ ಭಾಗವನ್ನು ಕ್ಷಣಕ್ಕಿಂತ ತುಂಬಾ ಕಡಿಮೆ ಸಮಯದಲ್ಲಿ ಮಿಂಚಿನ ವೇಗದಲ್ಲಿ ಕಟ್ ಮಾಡುತ್ತಿದ್ದಾನೆ ವ್ಯಕ್ತಿ.
ಈ ವಿಡಿಯೋವನ್ನು ಗ್ರೀನ್ ಬೆಲ್ಟ್ ಅಂಡ್ ರೋಡ್ ಇನ್ಸ್ಟಿಟ್ಯೂಟ್ ನ ಪ್ರೆಸಿಡೆಂಟ್ ಆದ ಏರಿಕ್ ಸೋಲ್ಹೆಮ್ ಅವರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಇಷ್ಟರಲ್ಲಿಯೇ ಒಂದು ಮಿಲಿಯನ್ ಗಿಂತಲೂ ಹೆಚ್ಚಿಗೆ ಜನರು ವೀಕ್ಷಿಸಿದ್ದಾರೆ.
ಈ ವಿಡಿಯೋದಲ್ಲಿ ಕೆಲಸಗಾರರು ತಮಗೆ ಹಂಚಿಕೊಟ್ಟ ಕೆಲಸವನ್ನು ತುಂಬಾ ಸುಂದರವಾಗಿ ಪೂರ್ಣತ್ವದ ಕಡೆಗೆ ಒಯ್ಯುತ್ತಿದ್ದಾರೆ. ಮತ್ತು ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ತುಂಬಾ ಹೊಂದಾಣಿಕೆಯಿಂದ ಮಾಡುತ್ತಿದ್ದಾರೆ. ಆದರೆ ಅದರಲ್ಲಿಯೇ ಈ ವ್ಯಕ್ತಿಯ ಕೆಲಸ ಮಾತ್ರ ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಏರಿಕ್ ಅವರು ತಮ್ಮ ಪೋಸ್ಟ್ ನ ಕ್ಯಾಪ್ಷನ್ ನಲ್ಲಿ ‘ಭಾರತಕ್ಕೆ ರೋಬೋಟ್ ಅವಶ್ಯಕತೆ ಬೇಕಾಗಿಲ್ಲ’ ಎಂದಿದ್ದಾರೆ.
ವಿಡಿಯೋ ನೋಡಿ
This is why India 🇮🇳 doesn’t need robotic automation.….
— Erik Solheim (@ErikSolheim) May 16, 2022
ಈ ವಿಡಿಯೋ ನೋಡಿದ ನಂತರ ನೇಟಿಜನ್ಸ್ ಗಳು ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆತನಲ್ಲಿರುವ ಈ ಕಲೆಯ ಬಗ್ಗೆ ನೆಟ್ಟಿಗರು ಹಾಡಿಹೊಗಳಿದ್ದಾರೆ.