ವಿದ್ಯುತ್ ತಂತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶ್ವಾನ, ನಂತರ ನಡೆದಿದ್ದು ನೋಡಿ ನಕ್ಕು ಸುಸ್ತಾದ ನೆಟ್ಟಿಗರು! ನೋಡಿ ಈ Video
ಸಾಮಾನ್ಯವಾಗಿ ನಾಯಿಗಳು ಎಲ್ಲಾ ಕಡೆ ಕೂಡ ಇದ್ದೇ ಇರುತ್ತದೆ. ಇನ್ನು ನಾಯಿಗಳು ಬಹಿರ್ದೆಸೆಗೆ ಹೋಗಬೇಕೆಂದರೆ ಅವಕ್ಕೆ ನಿರ್ದಿಷ್ಟವಾದ ಸ್ಥಳಗಳು ಎನ್ನುವುದು ಇಲ್ಲ. ರಸ್ತೆಯಲ್ಲೋ, ರಸ್ತೆಯ ಪಕ್ಕದಲ್ಲೋ, ಖಾಲಿ ಮೈದಾನಗಳಲ್ಲೋ ಅಥವಾ ಮನೆಯ ಅಕ್ಕಪಕ್ಕಗಳಲ್ಲೋ ಎಲ್ಲೋ ಒಂದು ಕಡೆ ಅವು ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಸಾಕು ನಾಯಿಗಳನ್ನು ಓಡಾಟಕ್ಕೆ ಅಥವಾ ವಾಕ್ ಮಾಡಲು ಕರೆದುಕೊಂಡು ಹೋದವರು, ಎಲ್ಲೆಂದರಲ್ಲಿ ತಮ್ಮ ನಾಯಿಗಳಿಂದ ಗ ಲೀ ಜು ಮಾಡಿಸಿದರೆ ತಂಡವನ್ನು ತರಬೇಕಾದ ಪರಿಸ್ಥಿತಿ ಕೂಡ ಇದೆ. ಅಲ್ಲದೆ ಸಾರ್ವಜನಿಕ ಸ್ಥಳಗಳು ಹಾಗೂ ಉದ್ಯಾನವನಗಳಲ್ಲಿ ನಾಯಿಗಳನ್ನು ವಾಕ್ ಮಾಡಿಸುವಾ ಬಹಳ ಎಚ್ಚರಿಕೆಯಿಂದ ಕೂಡ ಇರುವ ಅಗತ್ಯವೂ ಇದೆ.
ಎಷ್ಟೇ ಎಚ್ಚರ ವಹಿಸಿದರೂ ಕೂಡ, ಎಷ್ಟೇ ಶಿಸ್ತು ಸಂಯಮಗಳನ್ನು ಹೇಳಿಕೊಟ್ಟರೂ ಕೂಡಾ ಮೂಕ ಪ್ರಾಣಿಗಳನ್ನು ಅನುಕ್ಷಣವು ಕೂಡ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದು ಅಸಾಧ್ಯ. ಅದೂ ಅಲ್ಲದೆ ಸಾಮಾನ್ಯವಾಗಿ ನಾವು ಗಮನಿಸಿರುವಂತೆ ನಾಯಿಗಳು ರಸ್ತೆಯಲ್ಲಿ ಓಡಾಡಬೇಕಾದರೆ ಎಲ್ಲಾದರೂ ಲೈಟ್ ಕಂಬವೋ ಅಥವಾ ವಾಹನಗಳೋ ಕಂಡರೆ ಅಲ್ಲಿ ಹೋಗಿ ವಾಸನೆಯನ್ನು ನೋಡಿ ಮೂತ್ರ ಮಾಡಲು ತಮ್ಮ ಕಾಲನ್ನು ಮೇಲಕ್ಕೆತ್ತುತ್ತವೆ, ಇದು ಬಹಳ ಸಾಮಾನ್ಯವಾಗಿ ಕಂಡುಬರುವಂತಹ ದೃಶ್ಯವೇ ಆಗಿದೆ. ಆದರೆ ಹೀಗೆ ಕಂಬ ನೋಡಿದ ಕೂಡಲೇ ಕಾಲು ಎತ್ತುವ ನಾಯಿಯ ಗುಣವೇ ಅದಕ್ಕೆ ತೊಂದರೆಯನ್ನು ಉಂಟು ಮಾಡಿದರೆ ಪಾಪ ಅದರ ಪರಿಸ್ಥಿತಿ ಹೇಗಿರಬೇಡ ಹೇಳಿ?
ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಕೂಡ ನಾಯಿಯ ಕಾಲೆತ್ತುವ ಗುಣವೇ ಅದಕ್ಕೆ ಕಂ ಟ ಕ ವಾಗಿ ಶಾ ಕ್ ನೀಡಿದ ಸನ್ನಿವೇಶವನ್ನು ಒಳಗೊಂಡಿದೆ. ಈ ವಿಡಿಯೋವನ್ನು ಈಗಾಗಲೇ ಕೋಟ್ಯಂತರ ಜನರು ನೋಡಿದ್ದು ಅನೇಕರು ನಾಯಿಯ ಪಾಡನ್ನು ನೋಡಿ ಅಯ್ಯೋ ಪಾಪ ಎಂದರೆ, ಇನ್ನೂ ಅನೇಕರು ವೀಡಿಯೋ ನೋಡಿ ನಕ್ಕು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಇಷ್ಟಕ್ಕೂ ಈ ಘಟನೆ ಏನು ಎನ್ನುವುದಾದರೆ ಒಂದು ಜಮೀನು ಸುತ್ತಲೂ ತಂತಿಯ ಬೇಲಿಯನ್ನು ಹಾಕಿ ಅಲ್ಲಲ್ಲಿ ಸಣ್ಣ ಪೋಲುಗಳನ್ನು ನೆಡಲಾಗಿದೆ, ಯಾವುದೇ ಪ್ರಾಣಿಗಳು ಜಮೀನಿನ ಒಳಗೆ ನುಗ್ಗದೇ ಇರಲೆಂದು ವಿದ್ಯುತ್ತನ್ನು ಕೂಡ ಆ ತಂತಿಗಳ ಮೂಲಕ ಹರಿಸಲಾಗಿದೆ.
ಆದರೆ ಈ ವಿಷಯವನ್ನು ತಿಳಿಯದ ನಾಯಿಯೊಂದು ಅತ್ತ ನಡೆದು ಬಂದು ತನ್ನ ಹವ್ಯಾಸದಂತೆ ಪೋಲು ನೋಡಿದ ಕೂಡಲೇ ಅಲ್ಲಿ ಹೋಗಿ ಯಥಾಪ್ರಕಾರ ವಾಸನೆಯನ್ನು ನೋಡಿ ಮೂತ್ರ ವಿಸರ್ಜನೆ ಮಾಡಿದೆ. ವಿದ್ಯುತ್ ಮೇಲೆ ಅದರ ಮೂತ್ರ ಬಿದ್ದೊಡನೆ ನಾಯಿಗೆ ವಿದ್ಯುತ್ ಶಾಕ್ ತಗುಲಿದ್ದು, ಅದು ಕಿರುಚುತ್ತಾ ದೂರ ಓಡಿದೆ. ಒಂದು ಕ್ಷಣ ಈ ದೃಶ್ಯವನ್ನು ನೋಡಿದಾಗ ಸೂಪರ್ ಹಿಟ್ ಸಿನಿಮಾ ತ್ರೀ ಈಡಿಯಟ್ಸ್ ಕೂಡ ಅನೇಕರಿಗೆ ನೆನಪಾಗುತ್ತದೆ. ಏಕೆಂದರೆ ಅದರಲ್ಲಿ ಕೂಡ ಒಬ್ಬನು ವಿದ್ಯುತ್ ಹರಿಯುವ ತಂತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಶಾ ಕ್ ಹೊ ಡೆ ಸಿ ಕೊಂಡಿರುತ್ತಾನೆ. ಈ ದೃಶ್ಯದಲ್ಲಿ ನಾಯಿಗೆ ಕೂಡ ಅದೇ ರೀತಿ ಶಾ ಕ್ ಹೊಡೆದಿದೆ.
ವಿಡಿಯೋ ನೋಡಿ
ಈ ವೀಡಿಯೋ ನೋಡಿದ ನೆಟ್ಟಿಗರು ಕೂಡ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರೊಬ್ಬರು, ಈ ಸನ್ನಿವೇಶದ ನಂತರ ನಾಯಿಯ ಮೂತ್ರದ ಮೂಲಕ ವಿದ್ಯುತ್ ಅದರ ದೇಹವನ್ನು ಸೇರಿದ್ದು ಇನ್ನು ಮುಂದೆ ಅದು ಸೂಪರ್ ಡಾಗ್ ಆಗಲಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮತ್ತೊಬ್ಬ ನೆಟ್ಟಿಗರು ಈ ವಿಡಿಯೋ ನೋಡಿ ನಗು ತಡೆಯಲಾಗಲಿಲ್ಲ ಎಂದಿದ್ದಾರೆ. ಮತ್ತೊಬ್ಬರು ನಾಯಿ ತನ್ನ ದರ್ಪವನ್ನು ತೋರಲು ಹೋಗಿ ಪಾಪ ಶಾ ಕ್ ಗೆ ಒಳಗಾಗಿದೆ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.
ಒಬ್ಬ ನೆಟ್ಟಿಗರಂತೂ ಕಿಡ್ನಿಯಲ್ಲಿರುವ ಸ್ಟೋನ್ ಗಳು ಇದೇ ರೀತಿಯ ಚಿಕಿತ್ಸೆಯಿಂದ ಫ್ರೈ ಆಗಿ ಮಾಯವಾಗುವುದು ಎಂದು ತಮಾಷೆ ಮಾಡಿದ್ದಾರೆ.