ವಿಪ್ರೋ ಕಂಪನಿಯ ಇಬ್ಬರು ನೌಕರರ ತಪ್ಪಿನಿಂದಾಗಿ ಅಮೆರಿಕಾದ ಸಿಟಿ ಬ್ಯಾಂಕ್ ಗೆ ಎದುರಾಗಿದೆ 66 ಬಿಲಿಯನ್ ಮೊತ್ತದ ನಷ್ಟ!

ಭಾರತೀಯ ಐಟಿ ಕಂಪನಿಯಾದ ವಿಪ್ರೋ ತನ್ನ ಉದ್ಯೋಗಿಗಳ ಕೈ ತಪ್ಪಿ ಆದ ಒಂದು ತಪ್ಪಿನಿಂದಾಗಿ ಇದೀಗ ಅಮೆರಿಕಾದಲ್ಲಿನ ಸಿಟಿ ಬ್ಯಾಂಕಿಗೆ ದೊಡ್ಡ ಮಟ್ಟದಲ್ಲಿ ನಷ್ಟವನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಈ ಪ್ರಕರಣವು ಜನಪ್ರಿಯ ಕಾಸ್ಮೇಟಿಕ್ ಕಂಪನಿಯಾದ ರೆವೆಲಾನ್ ತಾನು ಬೇರೆಡೆಯಿಂದ ಪಡೆದ ಸಾಲಕ್ಕೆ ಸಂಬಂಧಿಸಿದ್ದಾಗಿದೆ. ರೆವಲಾನ್ ಕಂಪನಿಗೆ ಸಂಬಂಧಪಟ್ಟಂತಹ ಈ ಸಾಲದ ಪ್ರಕರಣದಲ್ಲಿ ಸಿಟಿಬ್ಯಾಂಕ್ ಅಡ್ಮಿನಿಸ್ಟ್ರೇಟಿವ್ ಏಜೆಂಟ್ ಆಗಿ ಪಾತ್ರವನ್ನು ನಿರ್ವಹಿಸಿದೆ ಎನ್ನಲಾಗಿದೆ. ರೆವಲಾನ್ ಕಾಸ್ಮೇಟಿಕ್ ಕಂಪನಿಗೆ ಸಾಲ ನೀಡಿದವರಿಗೆ ಸಿಟಿಬ್ಯಾಂಕ್ 78 ಲಕ್ಷ ಡಾಲರ್ ಗಳ (7.8 ಮಿಲಿಯನ್ ಡಾಲರ್ ) ಬಡ್ಡಿಯನ್ನು ಪಾವತಿ ಮಾಡಬೇಕಾಗಿತ್ತು. ಆದರೆ ಬ್ಯಾಂಕ್ ತಪ್ಪಾಗಿ 90 ಮಿಲಿಯನ್ ಡಾಲರ್ (66 ಬಿಲಿಯನ್ ರೂಪಾಯಿಗಳು) ಗಳನ್ನು ರವಾನಿಸಿ ಬಿಟ್ಟಿದೆ. ಅದರಲ್ಲಿ ಮೂಲ ಧನವು ಕೂಡ ಸೇರಿದ್ದು, ಬ್ಯಾಂಕಿಂಗ್ ಇತಿಹಾಸದಲ್ಲಿ ನಡೆದಂತಹ ಅತಿ ದೊಡ್ಡ ತಪ್ಪುಗಳಲ್ಲಿ ಈ ಘಟನೆಯೂ ಕೂಡಾ ಒಂದು ಎಂದು ಈಗ ಪರಿಗಣಿಸಲಾಗಿದೆ.

ಅಮೆರಿಕಾದ ಸಿಟಿಬ್ಯಾಂಕ್ ರೆವಲಾನ್ ಕಂಪನಿಯ ಅಡ್ಮಿನಿಸ್ಟ್ರೇಟಿವ್ ಏಜೆಂಟ್ ಆಗಿ ಕಂಪನಿಯ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೀಗೆ ಕಾರ್ಯ ನಿರ್ವಹಣೆಯ ಭಾಗವಾಗಿ ರೆವಲಾನ್ ಕಾಸ್ಮೆಟಿಕ್ ಕಂಪನಿಯ ಪರವಾಗಿ ಸಾಲದಾತರಿಗೆ ನೀಡಬೇಕಿದ್ದ ಬಡ್ಡಿಯನ್ನು 10 ಹಣಕಾಸು ಸಂಸ್ಥೆಗಳಿಗೆ ಒಟ್ಟು 90 ಮಿಲಿಯನ್ ಡಾಲರ್ ಗಳ ಮೊತ್ತವನ್ನು ಕಳುಹಿಸಿದೆ. ಈ ಕಂಪನಿಗಳ ಒಕ್ಕೂಟವು ರೆವಲಾನ್ ಕಾಸ್ಮೇಟಿಕ್ ಕಂಪನಿಗೆ ಒಂದು ನಿರ್ಧಿಷ್ಟ ಅವಧಿಗಾಗಿ ಸಾಲವನ್ನು ನೀಡಿದ್ದವು. ಆಗ ಸಿಟಿಬ್ಯಾಂಕ್ ಅಡ್ಮಿನಿಸ್ಟ್ರೇಟಿವ್ ಏಜೆಂಟ್ ಆಗಿದ್ದ ಕಾರಣ ರೆವಲಾನ್ ಕಂಪನಿಯ ಸಾಲದ ಬಡ್ಡಿಯನ್ನು ಸಾಲದಾತರಿಗೆ ಪಾವತಿ ಮಾಡಬೇಕಿತ್ತು‌ ವಾಸ್ತವವಾಗಿ ಸ್ಟೇಟ್ ಬ್ಯಾಂಕ್ 7.8 ಮಿಲಿಯನ್ ಡಾಲರ್ ಗಳನ್ನು ಬಡ್ಡಿಯಾಗಿ ಪಾವತಿಸಬೇಕಿತ್ತು.

ಆದರೆ ಬ್ಯಾಂಕ್ ತಪ್ಪಾಗಿ 90 ಮಿಲಿಯನ್ ಡಾಲರ್ ಗಳ ಪಾವತಿ ಮಾಡಿದ್ದು, ಈ ಮೂಲಕ ಬ್ಯಾಂಕ್ ಸಾಲದಾತರಿಗೆ ಮೂಲಧನವನ್ನು ಪಾವತಿಸಿ ಬಿಟ್ಟಿದೆ. ಈ ಘಟನೆಯ ನಂತರ ಸಾಲವನ್ನು ನೀಡಿದವರು ಬ್ಯಾಂಕ್ ತಮಗೆ ಕಳುಹಿಸಿದ ಹಣವನ್ನು ಬ್ಯಾಂಕಿಗೆ ಹಿಂತಿರುಗಿಸಲು ಒಪ್ಪಿಕೊಂಡಿಲ್ಲ. ಹೀಗೆ ಬ್ಯಾಂಕ್ ಗೆ ಹಣ ಹಿಂದಿರುಗಿಸಲು ಸಾಲದಾತರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ಸಾಲದಾತರ ವಿ ರು ದ್ಧ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಕೋರ್ಟ್ ಕೂಡಾ ಸಾಲದಾತರಿಗೆ ಆ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಸಂಪೂರ್ಣವಾದ ಹಕ್ಕು ಇದೆ ಎನ್ನುವ ತೀರ್ಪನ್ನು ನೀಡಿತು. ಈ ಹಿನ್ನೆಲೆಯಲ್ಲಿ ಸಿಟಿವಬ್ಯಾಂಕ್ ಕೋರ್ಟ್ ನ ಆದೇಶವನ್ನು ಪ್ರಶ್ನಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ.

ಇಷ್ಟು ದೊಡ್ಡ ಮೊತ್ತದ ಹಣದ ವರ್ಗಾವಣೆಯನ್ನು ಸಿಟಿ ಬ್ಯಾಂಕಿನ ಸಿಕ್ಸ್ ಪ್ರೊಸೀಜರ್ ಎನ್ನುವ ಒಂದು ವಿಧಾನ ಅಥವಾ ಪ್ರಕ್ರಿಯೆಯ ಮೂಲಕ ನಡೆಸಲಾಗಿದೆ. ಈ ಪ್ರಕ್ರಿಯೆಯ ಅನ್ವಯ ಬ್ಯಾಂಕಿನ ಯಾವುದೇ ವ್ಯವಹಾರವನ್ನು ಮಾಡುವ ಮೊದಲು ಅದನ್ನು ಮೂರು ಜನ ಪರಿಶೀಲನೆ ಮಾಡಿ ಆನಂತರ ಅನುಮೋದನೆಯನ್ನು ನೀಡುತ್ತಾರೆ. ಈ ಪ್ರಕರಣದಲ್ಲಿ ಈ ಬ್ಯಾಂಕ್ ವ್ಯವಹಾರ ಪ್ರಕ್ರಿಯೆಯ ಮೊದಲ 2-ಹಂತದ ಜವಾಬ್ದಾರಿಯನ್ನು ವಿಪ್ರೋ ಕಂಪನಿಯ ನೌಕರರಿಗೆ ನೀಡಲಾಗಿತ್ತು. ಇದು ವಿಪ್ರೋ ಕಂಪನಿಗೆ ನೀಡಲಾಗಿದ್ದ ಹೊರಗುತ್ತಿಗೆಯ ಕೆಲಸದ ಭಾಗವಾಗಿತ್ತು. ಇಲ್ಲಿ ಮೊದಲ ಉದ್ಯೋಗಿ (ತಯಾರಕ) ಫ್ಲೆಕ್ಸ್‌ಕ್ಯೂಬ್ ಸಾಲ ಸಂಸ್ಕರಣಾ ಕಾರ್ಯಕ್ರಮಕ್ಕೆ ಹಸ್ತಚಾಲಿತವಾಗಿ ಪಾವತಿಯ ಬಗ್ಗೆ ಮಾಹಿತಿಯನ್ನು ನೀಡಿದ್ದರು.

ಇದಾದ ನಂತರ ಎರಡನೆಯ ಉದ್ಯೋಗಿ ತನಗೆ ಬಂದಂತಹ ಮಾಹಿತಿಗಳನ್ನು ಪರಿಶೀಲನೆ ಮಾಡುವ ಮೂಲಕ ಅದಕ್ಕೆ ಅನುಮೋದನೆಯನ್ನು ನೀಡಿ ಮೂರನೇ ಹಂತಕ್ಕೆ ತಲುಪಿಸಿದ್ದಾರೆ. ಮೂರನೇ ಹಂತದಲ್ಲಿ ಸಿಟಿ ಬ್ಯಾಂಕ್ ನ ಸಿಬ್ಬಂದಿಯು ಈ ಬ್ಯಾಂಕ್ ವ್ಯವಹಾರವನ್ನು ಅಂತಿಮವಾಗಿ ಪರಿಶೀಲಿಸಿ ತನ್ನ ಅನುಮೋದನೆಯನ್ನು ಕೂಡಾ ನೀಡಿದ ನಂತರವೇ ದೊಡ್ಡ ಮೊತ್ತದಲ್ಲಿ ಹಣ ವರ್ಗಾವಣೆ ಆಗಿದೆ. ಈಗ ಹಣ ವರ್ಗಾವಣೆಯಿಂದಾಗಿ ನಡೆದಂತಹ ತಪ್ಪಿಗೆ, ಈ ವಿಷಯದಲ್ಲಿ ಮೂರು ಹಂತದ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ತಂಡವೇ ಇದಕ್ಕೆ ಜವಾಬ್ದಾರಿಯಾಗಿರುತ್ತದೆ ಎಂದು ಪರಿಗಣಿಸಲಾಗಿದೆ.